ಕೇರಳದಲ್ಲಿ ಮತ್ತೊಂದು ಅಮಾನವೀಯ ಕೃತ್ಯ: ನಾಯಿಗೆ ಇದೆಂತಾ ಶಿಕ್ಷೆ?

ತಿರುವನಂತಪುರಂ, ಜೂನ್ 11: ಕಳೆದ ಕೆಲವು ದಿನಗಳಿಂದ ಪ್ರಾಣಿಗಳ ಮೇಲೆ ಹಲ್ಲೆ, ಹಿಂಸೆ ನೀಡುತ್ತಿರುವ ಘಟನೆಗಳು ಹೆಚ್ಚು ವರದಿಯಾಗುತ್ತಿದೆ. ಕೇರಳದ ಪಾಲಕ್ಕಡ್ ಜಿಲ್ಲೆಯಲ್ಲಿ ಅನಾನಸ್ ಹಣ್ಣಿನಲ್ಲಿ ಸ್ಪೋಟಕ ತುಂಬಿಸಿ ಆನೆಗೆ ತಿನ್ನಿಸಿದ ಘಟನೆ ರಾಷ್ಟ್ರವ್ಯಾಪಿ ಸದ್ದು ಮಾಡಿತ್ತು.

ಅದಾದ ಬೆನ್ನಲ್ಲೆ ಹಿಮಾಚಲ ಪ್ರದೇಶದಲ್ಲಿ ಗರ್ಭಿಣಿ ಹಸುವಿಗೆ ಸ್ಪೋಟಕ ತಿನ್ನಿಸಿರುವ ಘಟನೆಯೂ ತಡವಾಗಿ ಬೆಳಕಿಗೆ ಬಂದಿತ್ತು. ಇದೀಗ, ಕೇರಳದಲ್ಲಿ ನಾಯಿಗೆ ಬಾಯಿಗೆ ಟೇಪ್ ಸುತ್ತಿ ಹಿಂಸೆ ನೀಡಿರುವ ಕೃತ್ಯ ವರದಿಯಾಗಿದೆ.

ತ್ರಿಶೂರ್ ಜಿಲ್ಲೆಯ ಒಲ್ಲೂರು ಪ್ರದೇಶದ ಬೀದಿಯಲ್ಲಿ ಯಾರೋ ದುಷ್ಕರ್ಮಿಗಳು ನಾಯಿ ಬಾಯಿಗೆ ಟೇಪ್ (ಇನ್ಸುಲೇಶನ್ ಟೇಪ್) ಸುತ್ತಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ.

ಎರಡು ವಾರದಿಂದ ಈ ನಾಯಿ ಊಟ, ನೀರು ಕುಡಿಯದೇ ಕಷ್ಟಪಟ್ಟಿದೆ. ಇದನ್ನು ಕಂಡ ಕೆಲವು ಪ್ರಾಣಿಪ್ರಿಯರು ಪ್ರಾಣಿ ರಕ್ಷಣೆ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪ್ರಾಣಿ ರಕ್ಷಕ ಸಿಬ್ಬಂದಿ ನಾಯಿಯನ್ನು ರಕ್ಷಿಸಿದ್ದಾರೆ.

Dog mouth sealed with insulation tape at kerala

'ಬಹಳ ಗಟ್ಟಿಯಲ್ಲಿ ಟೇಸ್ ಸುತ್ತಿದ್ದರಿಂದ ಶ್ವಾನಕ್ಕೆ ಗಂಭೀರವಾಗಿ ಗಾಯವಾಗಿತ್ತು. ಇದರಿಂದ ನಾಯಿ ಮೂಳೆ ಹಾಗೂ ಚರ್ಮಕ್ಕೆ ಪೆಟ್ಟಾಗಿದೆ. ಟೇಪ್ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ನಾಯಿಗೆ ಹೆಚ್ಚು ನೋವು ಅನುಭವಿಸಿದೆ' ಎಂದು ಪ್ರಾಣಿ ರಕ್ಷಣೆ ಸಿಬ್ಬಂದಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+