ದೇಶದ ದೈನಂದಿನ ಕೋವಿಡ್‌ ಪ್ರಕರಣದಲ್ಲಿ ಕೇರಳದ ಪಾಲು ಶೇ. 68!

ತಿರುವನಂತಪುರಂ, ಆಗಸ್ಟ್‌ 26: ದೇಶದಲ್ಲಿ ಗುರುವಾರ ಆಗಸ್ಟ್‌ 26 ರಂದು 46,164 ಹೊಸ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲಾಗಿದೆ. ಈ ದೈನಂದಿನ ಕೋವಿಡ್ ಪ್ರಕರಣದಲ್ಲಿ ಶೇಕಡ 68 ರಷ್ಟು ಕೇರಳದಲ್ಲಿ ದಾಖಲಾದ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

ಗುರುವಾರ ಆಗಸ್ಟ್‌ 26 ರಂದು ಭಾರತ ದೇಶದಲ್ಲಿ 46,164 ಹೊಸ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲಾಗಿದೆ. ಇದು ಕಳೆದ 24 ಗಂಟೆಗಳ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಆಗಿದೆ. ಈ ಮೂಲಕ ದೇಶದ ಒಟ್ಟು ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ 3,25,58,530 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

ದೇಶದಲ್ಲಿ ಕೊರೊನಾ ವೈರಸ್‌ ಪ್ರಕರಣಗಳ ದೈನಂದಿನ ಸಂಖ್ಯೆಯು 20,000 ಕ್ಕಿಂತ ಅಧಿಕ ದಾಖಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಕೆಲವೊಂದು ರಾಜ್ಯಗಳಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಅಧಿಕವಾಗಿ ದಾಖಲಾಗುತ್ತಿರುವುದು ಆಗಿದೆ. ಅದರಲ್ಲೂ ಮುಖ್ಯವಾಗಿ ಕೇರಳ ರಾಜ್ಯದಲ್ಲಿ ಕೋವಿಡ್‌ ದೈನಂದಿನ ಪ್ರಕರಣಗಳು ತೀವ್ರ ಏರಿಕೆ ಕಂಡಿದೆ ಎಂದು ವರದಿಯು ವಿವರಿಸಿದೆ.

Covid-19 cases in Kerala: Kerala alone accounts for over 68% of Indias new Covid-19 cases

ಕೇಂದ್ರ ಆರೋಗ್ಯ ಸಚಿವಾಲಯ ಕೇರಳ ರಾಜ್ಯವೊಂದೇ ಗುರುವಾರ ದಾಖಲಾದ ಒಟ್ಟು ಕೋವಿಡ್‌ ಪ್ರಕರಣಗಳ ಶೇಕಡ 68 ಅನ್ನು ದಾಖಲು ಮಾಡಿದೆ. ಇನ್ನು ಕೇರಳ ರಾಜ್ಯ ಆರೋಗ್ಯ ಸಚಿವಾಲಯದ ಪ್ರಕಾರ, ಕೇರಳದಲ್ಲಿ ಬುಧವಾರ ಒಟ್ಟು 31,445 ಕೊರೊನಾ ವೈರಸ್‌ ಸೋಂಕು ಪ್ರರಕಣಗಳು ದಾಖಲಾಗಿದೆ. ಇದು ಕಳೆದ ಮೂರು ತಿಂಗಳಿನಲ್ಲೇ ಅಧಿಕ ಕೋವಿಡ್‌ ಪ್ರಕರಣವಾಗಿದೆ. ಎರ್ನಾಕುಲಂನಲ್ಲಿ ಸುಮಾರು 4,048 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಹಾಗೂ ತ್ರಿಶೂರಿನಲ್ಲಿ ಸುಮಾರು 3,865 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲಾಗಿದೆ. ಇವೆರಡು ಅಧಿಕ ಕೊರೊನಾ ವೈರಸ್‌ ಸೋಂಕು ಪೀಡಿತ ಜಿಲ್ಲೆಗಳು ಆಗಿದೆ ಎಂದು ವರದಿಗಳು ಹೇಳುತ್ತದೆ. ಇನ್ನು ಕೇರಳ ರಾಜ್ಯದಲ್ಲಿ ಕೋವಿಡ್‌ ಪಾಸಿಟಿವಿಟಿ (ಟಿಪಿಆರ್‌) ದರವು ಶೇಕಡ 19.03 ಆಗಿದೆ. ಹಾಗೆಯೇ ಇದು ಕಳೆದ ಮೂರು ತಿಂಗಳಿನಲ್ಲೇ ಅಧಿಕ ಪಾಸಿಟಿವಿಟಿ ದರವಾಗಿದೆ.

ಇನ್ನು ಕೇರಳ ಸರ್ಕಾರವು ಕೊರೊನಾ ವೈರಸ್‌ ಪ್ರಕರಣಗಳ ಏರಿಕೆಗೆ ಮುಖ್ಯ ಕಾರಣ ಕಳೆದ ವಾರ ಆಚರಿಸಲಾದ ಓಣಂ ಹಬ್ಬವಾಗಿದೆ ಎಂದು ಹೇಳಿಕೊಂಡಿದೆ. "ಓಣಂ ಬಳಿಕ ಕೊರೊನಾ ವೈರಸ್‌ ಸೋಂಕು ಪ್ರಕರಣದಲ್ಲಿ ಏರಿಕೆಯಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು. ಕೋವಿಡ್‌ ಪರೀಕ್ಷೆ ಹಾಗೂ ಕೋವಿಡ್‌ ಲಸಿಕೆ ನೀಡುವ ವಿಶೇಷ ಅಭಿಯಾನ ಕಾರ್ಯವನ್ನು ಮಾಡಲಾಗುತ್ತಿದೆ. ಕೇರಳದಲ್ಲಿ ಸೆರೋ ಪ್ರಿವಿಲೆನ್ಸ್‌ಗಳು ಭಾರೀ ಕಡಿಮೆ ಆಗಿರುವ ಕಾರಣ ನಾವು ಕೊರೊನಾ ವೈರಸ್‌ ಸೋಂಕಿಗೆ ಒಳಗಾದವರನ್ನು ಹುಡುಕಬೇಕಾಗಿದೆ ಹಾಆಗೂ ಸೋಂಕಿಗೆ ಒಳಗಾದವರನ್ನು ಶೀಘ್ರವೇ ಕ್ವಾರಂಟೈನ್‌ ಮಾಡಬೇಕಾಗಿದೆ," ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಬುಧವಾರ ಹೇಳಿದ್ದಾರೆ.

ಕೊರೊನಾ ವೈರಸ್‌ ಸೋಂಕಿನ ನಡುವೆಯೂ ಓರ್ಣ ಹಬ್ಬದ ಹಿನ್ನೆಲೆ ಕೇರಳದಲ್ಲಿ ಮಾರುಕಟ್ಟೆಗಳಲ್ಲಿ ಅಧಿಕ ಜನರು ಹಬ್ಬದ ತಯಾರಿಗೆ ಬೇಕಾದ ಸಾಮಾಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಕೇರಳದ ಬಹುತೇಕ ಮಾರುಕಟ್ಟೆಗಳಲ್ಲಿ ಭಾರೀ ಜನಸಂದಣಿ ಇದ್ದವು.

ಜುಲೈನಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಡೆಸಿದ ನಾಲ್ಕನೇ ಸುತ್ತಿನ ಸೆರೋ ಸಮೀಕ್ಷೆಯು ರಾಷ್ಟ್ರೀಯವಾಗಿ ಪ್ರತಿಕಾಯಗಳ ಪ್ರಮಾಣವು ಶೇಕಡ 67. 7 ಆಗಿದೆ. ಆದರೆ ಕೇರಳದಲ್ಲಿ ಪ್ರತಿಕಾಯಗಳ ಪ್ರಮಾಣವು ಕೇವಲ ಶೇಕಡ 42.7 ಎಂದು ಪತ್ತೆ ಹಚ್ಚಿದೆ. ಅಂದರೆ ಕೇರಳದ ಜನಸಂಖ್ಯೆಯ ಒಂದು ದೊಡ್ಡ ಭಾಗವು ಇನ್ನೂ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗುತ್ತಿದೆ. ಆದರೆ ಆದಾಗ್ಯೂ ಈ ಸಿದ್ದಾಂತವೂ ಇನ್ನೂ ಸಾಬೀತಾಗಿಲ್ಲ, ಮತ್ತು ಐಸಿಎಮ್‌ಆರ್‌ ಸ್ವತಃ ತನ್ನ ಒಟ್ಟಾರೆ ಸೆರೋ ಹರಡುವಿಕೆ ಸಂಖ್ಯೆಯನ್ನು ರಾಜ್ಯಗಳಾದ್ಯಂತ ವಿಂಗಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದೆ.

(ಒನ್‌ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+