ಜನರ ಆಕರ್ಷಣೆಗೆ ಕಾರಣವಾದ 'ಕೊರೊನಾ' ಬಟ್ಟೆ ಅಂಗಡಿ

ಕೊಚ್ಚಿ, ಮಾರ್ಚ್ 17: ಕೊರೊನಾ.. ಕೊರೊನಾ.. ಕೊರೊನಾ.. ಎಲ್ಲಿ ಕೇಳಿದರೂ, ಬರೀ ಕೊರೊನಾ ಬಗ್ಗೆಯೇ ಮಾತಾಗಿದೆ. ಅದಕ್ಕೂ ಒಂದು ಹೆಚ್ಚೆ ಮುಂದೆ ಹೋಗಿ, ಇಲ್ಲೊಂದು ಅಂಗಡಿಯ ಹೆಸರೇ ಕೊರೊನಾ ಆಗಿದೆ.

Recommended Video

      MS Dhoni leaves Chennai after IPL 2020 postponed till April 15 | IPL2020 | Dhoni Return to Home

      ಕೇರಳದ ಒಂದು ಅಂಗಡಿಗೆ ಕೊರೊನಾ ಎಂದು ಹೆಸರಿಡಲಾಗಿದೆ. ಆ ಅಂಗಡಿ ಈಗ ಜನರ ಗಮನ ಸೆಳೆಯುತ್ತಿದೆ. ಕೊರೊನಾ ವೈರಸ್‌ನಿಂದ ಈ ಹಿಂದೆಯೇ ಪ್ರಾರಂಭವಾಗಿದ್ದ ಈ ಅಂಗಡಿ ಈಗ ಸಿಕ್ಕಾಪಟ್ಟೆ ಫೇಮಸ್ ಆಗಿದೆ.

      ಈ ಅಂಗಡಿ ಕೊಚ್ಚಿಯಿಂದ 40 ಕಿಲೋ ಮೀಟರ್ ದೂರದಲ್ಲಿದೆ. ಪರೀದ್ ಎಂಬುವವರಿಗೆ ಸೇರಿದ ಬಟ್ಟೆ ಅಂಗಡಿ ಇದಾಗಿದೆ. ಸದ್ಯ, ಈ ಅಂಗಡಿ ಜನರ ಗಮನ ಸೆಳೆಯುತ್ತಿದೆ. ಅಂಗಡಿ ಮುಂದೆ ಬಂದು ಎಷ್ಟೋ ಜನರು ಸೆಲ್ಫಿ ತೆಗೆದುಕೊಂಡು ಹೋಗುತ್ತಿದ್ದಾರಂತೆ.

      Coronavirus: Kerala Textile Shop Grabs People Attention By Its Name

      ರಸ್ತೆಯಲ್ಲಿ ಓಡಾಡುವ ಕೆಲವು ಜನರು ಕೊರೊನಾ ಹೆಸರು ನೋಡಿ, ನಗುತ್ತಾ ಹೋದರೆ, ವಾಹನದಲ್ಲಿ ಹೋಗುವ ಮಂದಿ ಅಂಗಡಿ ಹೆಸರು ನೋಡಿ ಕೂಗುತ್ತಾ ಹೋಗುತ್ತಾರೆ ಅಂತಾರೆ ಅಂಗಡಿ ಮಾಲೀಕ ಫರೀದ್.

      ಕೆಲವು ವರ್ಷಗಳ ಹಿಂದೆ ಅಂಗಡಿ ಪ್ರಾರಂಭ ಮಾಡಿದ, ಫರೀದ್ ಡಿಕ್ಷನರಿ ನೋಡಿ, ವಿಭಿನ್ನವಾಗಿದೆ ಎಂಬ ಕಾರಣಕ್ಕೆ ಈ ಹೆಸರನ್ನು ತಮ್ಮ ಅಂಗಡಿಗೆ ಇಟ್ಟರಂತೆ. ಆದರೆ, ಈ ಹೆಸರಿನಲ್ಲಿ ವೈರಸ್ ಬರುವುದು ಅವರಿಗೆ ತಿಳಿದಿರಲಿಲ್ಲವಂತೆ.

      ಅಂಗಡಿಗೆ ಕೊರೊನಾ ಎಂದು ಹೆಸರಿಟ್ಟಿದ್ದರೂ, ಅಂಗಡಿಯ ಒಳಗೆ ಕೊರೊನಾ ವೈರಸ್ ಬರದೆ ಇರುವಂತೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಫರೀದ್ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+