'ಕೊರೊನಾ' ಈಗ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ!
ತಿರುವನಂತಪುರಂ, ನವೆಂಬರ್ 19: ಈ ಕೊರೊನಾ ಹಾವಳಿ ಯಾವಾಗ ಮುಗಿಯುತ್ತದೆಯೋ ಎಂದು ಎಲ್ಲರೂ ಕಾದು ಚಡಪಡಿಸುತ್ತಿದ್ದಾರೆ. ಕೊರೊನಾ ವೈರಸ್ ಬಂದ ಆರಂಭದಲ್ಲಿ ಕೇಂದ್ರ ಸಚಿವರು ಸೇರಿದಂತೆ ಅನೇಕರು 'ಗೋ ಕರೋನಾ' ಎಂದು ಘೋಷಣೆ ಕೂಗಿದ್ದು ನೆನಪಿರಬಹುದು. ಆದರೆ ಈಗ ಅನೇಕರು 'ಕೊರೊನಾಗೆ ಜೈ' ಎಂದು ಘೋಷಣೆ ಕೂಗುತ್ತಿದ್ದಾರೆ. ಕೊರೊನಾ ಸೋಂಕನ್ನೇ ಬಂಡವಾಳವನ್ನಾಗಿಸಿಕೊಂಡು ಅನೇಕರು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಈ ಜೈಕಾರ ಹಾಕುತ್ತಿದ್ದಾರೆ ಎಂದು ನೀವು ಭಾವಿಸಿದ್ದರೆ ತಪ್ಪು.
ಕೇರಳದ ದಕ್ಷಿಣ ಕೊಲ್ಲಂನಲ್ಲಿ 'ಕೊರೊನಾಗೆ ಜೈ' ಎಂಬ ಘೋಷಣೆ ಕೇಳಿಬರುತ್ತಿದೆ. ಕೊಲ್ಲಂ ಪಾಲಿಕೆಯ ಚುನಾವಣೆಯ ಮಥಿಲಿಲ್ ವಾರ್ಡ್‌ನಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಹೆಸರು ಕೊರೊನಾ ಥಾಮಸ್!
ಕೊರೊನಾ ಥಾಮಸ್ ಹೆಸರು ವಿಚಿತ್ರವಾಗಿ ಕಾಣಿಸಬಹುದು. ಆದರೆ ಕೊರೊನಾ ವೈರಸ್, ಕೊರೊನಾ ಥಾಮಸ್ ಅವರ ಸ್ನೇಹಿಯಲ್ಲ. ಈ ವೈರಸ್ ಕೊರೊನಾ ಥಾಮಸ್ ಅವರನ್ನೂ ಕಾಡಿತ್ತು. ಕೋವಿಡ್ ಸೋಂಕಿನ ನಡುವೆಯೇ 24 ವರ್ಷದ ಕೊರೊನಾ ಥಾಮಸ್ ಅಕ್ಟೋಬರ್‌ನಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಅಲ್ಲಿಂದ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ.
ತಾಯಿ ಮತ್ತು ನವಜಾತ ಶಿಶು ಇಬ್ಬರೂ ಸೋಂಕಿನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಅದರ ನಡುವೆಯೇ ಅವರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯ ಸವಾಲು ಎದುರಾಗಿದೆ. ಬಿಜೆಪಿ ಪರ ಒಲವು ಹೊಂದಿರುವ ಕುಟುಂಬದ ಜಿನು ಸುರೇಶ್ ಅವರನ್ನು ಮದುವೆಯಾದ ಕೊರೊನಾ ಥಾಮಸ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಪತಿಯೇ ಸ್ಫೂರ್ತಿಯಾಗಿದ್ದಾರೆ. ಮುಂದೆ ಓದಿ.

24 ವರ್ಷದ ಹಿಂದೆ ಹೀಗಿರಲಿಲ್ಲ
ಕೊರೊನಾ ಥಾಮಸ್ ಅವರ ಹೆಸರು ಕಂಡಾಗ ಜನರು ಅವರತ್ತ ವಿಚಿತ್ರ ನೋಟ ಹರಿಸುತ್ತಿದ್ದಾರೆ. ಈ ಹಿಂದೆ 24 ವರ್ಷಗಳಲ್ಲಿ ಅವರಿಗೆ ಈ ರೀತಿ ಅನುಭವ ಆಗುತ್ತಿರಲಿಲ್ಲ. ಏಕೆಂದರೆ ಕೊರೊನಾ ಎಂಬ ವೈರಸ್ ಪ್ರಸಿದ್ಧವಾಗಿದ್ದು ಇತ್ತೀಚಿನ ದಿನಗಳಲ್ಲಿ. ಆದರೆ ಅವರ ತಂದೆ ಎರಡು ದಶಕದ ಹಿಂದೆಯೇ ಅವರಿಗೆ ಈ ಹೆಸರು ನೀಡಿದ್ದರು. ಈಗ ಜನರು ತಮ್ಮಲ್ಲಿ ಒಬ್ಬರು ಎಂದು ಒಪ್ಪಿಕೊಂಡಿದ್ದಾರೆ. ಅದು ಮತಪತ್ರಗಳಲ್ಲಿಯೂ ಕಾಣಿಸಲಿದೆ ಎಂಬ ವಿಶ್ವಾಸ ಕೊರೊನಾ ಥಾಮಸ್ ಅವರದು.

ವಿಶಿಷ್ಟ ಹೆಸರು ನೀಡಿದ್ದ ತಂದೆ
ವೃತ್ತಿಯಿಂದ ಕಲಾವಿದರಾದ ತಂದೆ ಥಾಮಸ್ ಮ್ಯಾಥ್ಯೂ ಅವರು ತಮ್ಮ ಅವಳಿ ಮಕ್ಕಳಿಗೆ ಕೊರೊಲ್ ಮತ್ತು ಕೊರೊನಾ ಎಂದು ಹೆಸರು ಇರಿಸಿದ್ದರು. ಅವರ ಅವಳಿ ಸಹೋದರ ಕೊರೊಲ್ ಮ್ಯಾಥ್ಯೂ ಅವರಿಗಿಂತ 20 ನಿಮಿಷ ದೊಡ್ಡವರು. ಇಬ್ಬರು ಮಕ್ಕಳಿಗೂ ವಿಭಿನ್ನ ಹೆಸರು ಇಡಲು ಬಯಸಿದ್ದ ಮ್ಯಾಥ್ಯೂ ಅವರು ಕೊರೊಲ್ ಮತ್ತು ಕೊರೊನಾ ಎಂಬ ಹೆಸರುಗಳನ್ನು ಆಯ್ದುಕೊಂಡಿದ್ದರು.
'ಇಷ್ಟು ವರ್ಷ ನನ್ನಹೆಸರಿನಿಂದ ನನಗೆ ಯಾವ ಸಮಸ್ಯೆಯೂ ಆಗಿರಲಿಲ್ಲ. ಆದರೆ ಈಗ ಜನರು ನನ್ನ ಕಡೆಗೆ ಕುತೂಹಲದಿಂದ ನೋಡುತ್ತಾರೆ. ನಾನು ಮುಕ್ತವಾಗಿ ಮಾತನಾಡಲು ಆರಂಭಿಸಿದ ಬಳಿಕ ಅವರಿಗೂ ಅರ್ಥವಾಗುತ್ತಿದೆ' ಎಂದಿದ್ದಾರೆ ಕೊರೊನಾ.

ಮನೆಯವರ ವಿರೋಧವಿತ್ತು
ವೈರಸ್ ವಿರುದ್ಧದ ಮೊದಲ ಸುತ್ತಿನ ಹೋರಾಟದಲ್ಲಿ ಗೆಲುವು ಕಂಡ ಕೊರೊನಾ, ಈಗ ಚುನಾವಣಾ ರಂಗದ ಹೋರಾಟಕ್ಕೆ ಧುಮುಕಿದ್ದಾರೆ. ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ ಅವರ ವಿವಾಹಕ್ಕೆ ಮನೆಯವರ ವಿರೋಧವಿತ್ತು. ವೃತ್ತಿಯಿಂದ ಪೇಂಟರ್ ಆಗಿರುವ ಜಿನು ಸುರೇಶ್ ಬೇರೆ ಸಮುದಾಯಕ್ಕೆ ಸೇರಿದವರು ಎಂಬ ಆಕ್ಷೇಪ ಇತ್ತು. ಈಗ ಎಲ್ಲವೂ ಸರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
Recommended Video

ಎಡಪಕ್ಷಗಳದ್ದೇ ಆಡಳಿತ
ಆಸಕ್ತಿಕರ ಸಂಗತಿಯೆಂದರೆ ಕೊಲ್ಲಂ ಪಾಲಿಕೆಯು ಎಡಪಕ್ಷಗಳ ಪ್ರಾಬಲ್ಯದಲ್ಲಿದೆ. ಅದು ರಚನೆಯಾದ 20 ವರ್ಷಗಳಿಂದಲೂ ಎಡಪಕ್ಷಗಳೇ ಪಾಲಿಕೆ ಆಡಳಿತ ನಡೆಸುತ್ತಿವೆ. ಆದರೆ ಈ ಬಾರಿ ಬೇರೆ ಪಕ್ಷಗಳೂ ಇಲ್ಲಿ ಹಿಡಿತ ಪಡೆದುಕೊಳ್ಳುವ ಸೂಚನೆ ಕಾಣಿಸುತ್ತಿದೆ. ರಾಜಕೀಯ ಎಂದರೆ ಆಗೊಲ್ಲ ಎನ್ನುತ್ತಿದ್ದ ಕೊರೊನಾ ಥಾಮಸ್, ಬಿಜೆಪಿ ಕಾರ್ಯಕರ್ತರಾಗಿರುವ ಪತಿಯ ಒತ್ತಾಸೆಯಂತೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಈ ವಾರ್ಡ್‌ನಲ್ಲಿ ಎರಡನೆಯ ಸ್ಥಾನ ಪಡೆದಿತ್ತು. ಈ ಬಾರಿ ಸ್ಪರ್ಧಿಸಿಸುವ ಯುವ ಮುಖ ಕೊರೊನಾ ಅವರಿಗೆ ಜನರು ಅವಕಾಶ ನೀಡುತ್ತಾರೆ ಎಂಬ ಭರವಸೆ ಇದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications