ಅತ್ಯಾಚಾರ ಆರೋಪಿ ಫ್ರಾಂಕೊ ಮುಲಕ್ಕಲ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ
ತಿರುವನಂತಪುರಂ, ಏಪ್ರಿಲ್ 09: ಅತ್ಯಾಚಾರ ಆರೋಪಿ ಜಲಂಧರ್‌ನ ಮಾಜಿ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧ ಕೊಟ್ಟಾಯಂ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಫ್ರಾಂಕೊ ಮುಲಕ್ಕಲ್ ವಿರುದ್ಧ ಅತ್ಯಾಚಾರ, ಗೃಬಂಧನ, ಅಸಹಜ ಲೈಂಗಿಕತೆ, ಜೀವ ಬೆದರಿಕೆ ಪ್ರಕರಣಗಳನ್ನು ದಾಖಲಿಸಲಾಗಿದ್ದು, ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.
ಕ್ರೈಸ್ತ ಸನ್ಯಾಸಿನಿಯೊಬ್ಬರು ಫ್ರಾಂಕೊ ಮುಲಕ್ಕಲ್ ಅವರು 2014 ರಿಂದ 2016ರ ವರೆಗೆ ಸತತವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪ ಮಾಡಿ ದೂರು ನೀಡಿದ್ದರು. ಈ ಪ್ರಕರಣ ದೇಶದ ಗಮನ ಸೆಳೆದಿತ್ತು.

ಪ್ರಸ್ತುತ ಪ್ರಕರಣದಲ್ಲಿ 85 ಸಾಕ್ಷಿಗಳನ್ನು ಗುರುತಿಸಲಾಗಿದ್ದು, ಕೆಲವು ಸಾಕ್ಷೀದಾರರು ಈಗಾಗಲೇ ಕೊಟ್ಟಾಯಂನ ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.
ಈ ಪ್ರಕರಣವು ದೇಶದಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿತ್ತು, ಪ್ರಕರಣದಲ್ಲಿ ಫ್ರಾಂಕೊ ಪರ ಮತ್ತು ವಿರೋಧವಾಗಿಯೂ ಪ್ರತಿಭಟನೆಗಳು ನಡೆದವು, ಕೇರಳದಲ್ಲಿ ಸೇವ್ ಮೈ ಸಿಸ್ಟರ್ ಪ್ರತಿಭಟನೆ ಆದ ನಂತರ ಪ್ರಕರಣ ಹೆಚ್ಚು ಸುದ್ದಿಯಾಯಿತು.












Click it and Unblock the Notifications