ವಿದೇಶದಲ್ಲಿ ಉದ್ಯೋಗ ಕಳೆದುಕೊಂಡ 56 ಸಾವಿರ ಕೇರಳಿಗರು

ತಿರುವನಂತಪುರಂ, ಏಪ್ರಿಲ್ 30 : ವಿಶ್ವದ ವಿವಿಧ ದೇಶಗಳಲ್ಲಿ ಕೊರೊನಾ ಅಪಾರವಾದ ನಷ್ಟಕ್ಕೆ ಕಾರಣವಾಗಿದೆ. ಇದರಿಂದಾಗಿ ಉದ್ಯೋಗಗಳು ಕಡಿತವಾಗುತ್ತಿವೆ. ಕೇರಳದ 56 ಸಾವಿರ ಜನರು ಉದ್ಯೋಗ ಕಳೆದುಕೊಂಡಿದ್ದು, ರಾಜ್ಯಕ್ಕೆ ವಾಪಸ್ ಆಗಲು ನೋಂದಣಿ ಮಾಡಿಸಿದ್ದಾರೆ.

Recommended Video

      ಕೆಲಸ ಕಳೆದುಕೊಂಡ ಸಾಫ್ಟ್ ವೇರ್ ಉದ್ಯೋಗಿಗಳಿಗೆ ಪ್ರಾಮಿಸ್ ಮಾಡಿದ ಕುಮಾರಣ್ಣ | Kumarswamy | IT | Jobs

      ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ಮಾಹಿತಿ ನೀಡಿದ್ದಾರೆ. ವಿವಿಧ ದೇಶಗಳಲ್ಲಿ ಇರುವ ಕೇರಳದವರನ್ನು ವಾಪಸ್ ಕರೆತರಲು ಆನ್‌ಲೈನ್ ಮೂಲಕ ನೋಂದಣಿ ಆರಂಭಿಸಲಾಗಿದೆ. ಭಾನುವಾರದಿಂದ ಬುಧವಾರದ ತನಕ 3,20,463 ಜನರು ಹೆಸರು ನೋಂದಣಿ ಮಾಡಿಸಿದ್ದಾರೆ.

      ನಾನ್‌ ರೆಸಿಡೆಂಟ್‌ ಕೇರಳೈಟ್ಸ್ ಅಫೈರ್ಸ್‌ (ನೋರ್ಕಾ) ಆನ್‌ಲೈನ್ ನೋಂದಣಿಯ ಜವಾವ್ದಾರಿ ಹೊತ್ತಿದೆ. ಉದ್ಯೋಗ ಕಡಿತ, ವೀಸಾ ಅವಧಿ ಅಂತ್ಯ, ವಾರ್ಷಿಕ ರಜೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಕೇರಳದ ಜನರು ವಾಪಸ್ ಬರುತ್ತಿದ್ದಾರೆ.

      56 Thousand People Of Kerala Lost Jobs In Foreign Countries

      "ಇದುವರೆಗೂ ನೋಂದಣಿ ಮಾಡಿಸಿದವರಲ್ಲಿ 9561 ಮಕ್ಕಳು, 9515 ಗರ್ಭಿಣಿ ಮಹಿಳೆಯರು ಸೇರಿದ್ದಾರೆ. 56,114 ಜನರು ಉದ್ಯೋಗ ಕಳೆದುಕೊಂಡಿದ್ದು ವಾಪಸ್ ಬರಲು ನೋಂದಣಿ ಮಾಡಿಸಿದ್ದಾರೆ" ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

      58,823 ಜನರು ವಾರ್ಷಿಕ ರಜೆ ಮೇಲೆ ಕೇರಳಕ್ಕೆ ವಾಪಸ್ ಬರಲು ನೋಂದಣಿ ಮಾಡಿಸಿದ್ದಾರೆ. ಈಗ ನೋಂದಣಿ ಮಾಡಿಸಿಕೊಂಡಿರುವ 3 ಲಕ್ಷ ಜನರನ್ನು ಹೊರತುಪಡಿಸಿ ಇನ್ನೂ ಅನೇಕರು ನೋಂದಣಿ ಮಾಡಿಕೊಳ್ಳಲಿದ್ದಾರೆ ಎಂದು ನೋರ್ಕಾ ಹೇಳಿದೆ.

      ವ್ಯಾಸಂಗ ಮುಗಿಸಿರುವ 2448 ವಿದ್ಯಾರ್ಥಿಗಳು, ಜೈಲಿನಿಂದ ಬಿಡುಗಡೆಗೊಂಡಿರುವ 748 ಕೈದಿಗಳು ಕೇರಳಕ್ಕೆ ಬರಲು ವೆಬ್‌ಸೈಟ್‌ ಮೂಲಕ ನೋಂದಣಿ ಮಾಡಿಸಿದ್ದಾರೆ. 41,236 ಜನರ ವೀಸಾ ಅವಧಿ ಮುಕ್ತಾಯಗೊಂಡಿದ್ದು ಅವರು ಕೇರಳಕ್ಕೆ ವಾಪಸ್ ಆಗುತ್ತಿದ್ದಾರೆ.

      ಕೇಂದ್ರ ಸರ್ಕಾರ ಮೇ 3ರ ಬಳಿಕ ವಿದೇಶದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರುವ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಹೇಳಿದೆ. ಎಲ್ಲಾ ರಾಜ್ಯಗಳು ಸಹ ವಿದೇಶದಿಂದ ಆಗಮಿಸುವವರ ನೋಂದಣಿ ಕಾರ್ಯವನ್ನು ಆರಂಭಿಸಿದೆ.

      ಕೇರಳ ಸರ್ಕಾರ ಈಗಾಗಲೇ ವಿದೇಶದಿಂದ ಬಂದವರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಯಾರೂ ಬರುವಂತಿಲ್ಲ ಎಂದು ತಿಳಿಸಿದೆ. ವಿದೇಶದಿಂದ ಬಂದವರನ್ನು ಮೊದಲು ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ ಬಳಿಕ ಮನೆಗೆ ಕಳಿಸಲಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+