'ಕೇರಳ ವಿಮಾನ ದುರಂತಕ್ಕೆ ಟೇಬಲ್‌ಟಾಪ್ ರನ್‌ವೇ ಕಾರಣವಲ್ಲ'
ತಿರುವನಂತಪುರಂ, ಆಗಸ್ಟ್ 08: ಕೇರಳದ ಕೋಳಿಕ್ಕೋಡ್‌ವಿಮಾನ ನಿಲ್ದಾಣದ ಟೇಬಲ್‌ಟಾಪ್ ರನ್‌ವೇನಲ್ಲಿ ಮೇ 7 ರಿಂದ ಇಲ್ಲಿಯವರೆಗೆ 100 ವಿಮಾನಗಳು ಲ್ಯಾಂಡಿಂಗ್ ಮಾಡಿವೆ ಎಂದು ಸಚಿವ ವಿ ಮುರಳೀಧರನ್ ತಿಳಿಸಿದ್ದಾರೆ.
ದುಬೈನಿಂದ ಕೇರಳಕ್ಕೆ ಮರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ 737 ಬೋಯಿಂಗ್ ವಿಮಾನವು ಲ್ಯಾಂಡಿಂಗ್ ಆಗುವ ವೇಳೆ ಸಂಭವಿಸಿದ ದುರಂತದಲ್ಲಿ 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 190 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
ಕೇರಳ ವಿಮಾನ ದುರಂತದ ಹಿಂದಿರುವ ಮೂರು ಸಂಭಾವ್ಯ ಕಾರಣಗಳು
ಒಂದೇ ಭಾರತ್ ಮಿಷನ್ ಅಡಿ ವಿಮಾನ ಹಾರಾಟ ನಡೆಸಿತ್ತು. ಕೇಂದ್ರ ಸಚಿವ ಎನ್‌ಡಿಟಿವಿಗೆ ಹೇಳಿಕೆ ನೀಡಿದ್ದು, ಕೋಳಿಕ್ಕೋಡ್‌ನ ರನ್‌ವೇನಲ್ಲಿ ಇಳಿಯುತ್ತಿರುವ ಮೊದಲ ವಿಮಾನ ಇದಲ್ಲ, ವಂದೇ ಭಾರತದ ಮಿಷನ್ ಅಡಿ ಮೇ 7 ರಿಂದ ಇಲ್ಲಿಯವರೆಗೆ 100 ವಿಮಾನಗಳು ಲ್ಯಾಂಡಿಂಗ್ ಆಗಿವೆ ಎಂದು ಮಾಹಿತಿ ನೀಡಿದ್ದಾರೆ.
ಮೊದಲ ಬಾರಿ ಲ್ಯಾಂಡಿಂಗ್ ಆಗಲು ಪಟ್ಟಿದ್ದ ಪ್ರಯತ್ನ ವಿಫಲವಾಗಿತ್ತು, ಭಾರಿ ಮಳೆ ಇದ್ದ ಕಾರಣ ತೊಂದರೆಯಾಗಿತ್ತು. ಎರಡನೇ ಬಾರಿ ವಿಮಾನವು ಎಡಬದಿಗೆ ಜಾರಿತ್ತು ಹಾಗೆಯೇ ಡಿಕ್ಕಿ ಹೊಡೆದು ಇಬ್ಭಾಗವಾಗಿತ್ತು ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ತಿಳಿಸಿದ್ದಾಗಿ ಮುರಳೀಧರನ್ ವಿವರಿಸಿದ್ದಾರೆ.
ಟೇಬಲ್ ಟಾಪ್ ರನ್‌ವೇ ವಿಮಾನ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ದೇಶದಲ್ಲಿ ಸಾಕಷ್ಟು ವಿಮಾನ ನಿಲ್ದಾಣಗಳಲ್ಲಿ ಟೇಬಲ್ ಟಾಪ್ ರನ್‌ವೇ ಇದೆ. ಆದರೆ ಎಲ್ಲಾ ಕಡೆಯೂ ಇದೇ ರೀತಿ ಸಮಸ್ಯೆಯಾಗಬೇಕಿತ್ತಲ್ಲ. ವಂದೇ ಭಾರತ ಯೋಜನೆಯಡಿ ಮೇ 7 ರಿಂದ ಇಲ್ಲಿಯವರೆಗೆ 100 ವಿಮಾನಗಳು ಲ್ಯಾಂಡಿಂಗ್ ಆಗಿವೆ ಎಂದು ಹೇಳಿದ್ದಾರೆ.
ಮೇ 7 ರಿಂದ 300 ಜನರನ್ನು ಹೊತ್ತ ವಿಮಾನವೂ ಕೂಡ ಲ್ಯಾಂಡ್ ಆಗಿವೆ. ಕೋಳಿಕ್ಕೋಡ್‌ನಲ್ಲಿರುವ 13 ಆಸ್ಪತ್ರೆಗಳಲ್ಲಿ 120 ಮಂದಿಯನ್ನು ದಾಖಲಿಸಲಾಗಿದೆ. ಒಟ್ಟು 190 ಮಂದಿಯನ್ನು ಹೊತ್ತು ದುಬೈನಿಂದ ವಿಮಾನ ಬರುತ್ತಿತ್ತು. ವಿಮಾನ ದುರಂತದಲ್ಲಿ 18 ಮಂದಿ ಮೃತಪಟ್ಟಿದ್ದಾರೆ.