ಸಿಡ್ನಿ: ಟೆಕ್ಕಿಗೆ ಸಾವು ತಂದಿಟ್ಟ ಫೋನ್ ಸಂಭಾಷಣೆ
ಮೆಲ್ಬೋರ್ನ್, ಏ. 2: ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಟೆಕ್ಕಿ ಹೆಂಡತಿ ಜತೆ ಫೋನಿನಲ್ಲಿ ಮಾತನಾಡುತ್ತಿದ್ದ. ಆದರೆ ಮೂರನೇ ಮಹಡಿಯಲ್ಲಿದ್ದ ಆತನ ಕಾಲು ಆಕಸ್ಮಿಕವಾಗಿ ಜಾರಿದೆ. ಕೆಳಕ್ಕೆ ಬಿದ್ದವ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಆಸ್ಟ್ರೇಲಿಯಾದ ಸಿಡ್ನಿಯ ಅಪಾರ್ಟ್ ಮೆಂಟ್ ವೊಂದು ಇಂಥ ದುರ್ಘಟನೆಗೆ ಸಾಕ್ಷಿಯಾಗಿದೆ. ಗುರುವಾರ ನಸುಕಿನ ವೇಳೆ ತನ್ನ ಅಪಾರ್ಟ್‌ಮೆಂಟಿನ ಮೂರನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ಫೋನಿನಲ್ಲಿ ಮಾತನಾಡುತ್ತಿದ್ದ ಪಂಕಜ್ ಸಾ (30) ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.[ಟೆಕ್ಕಿ ಪ್ರಭಾ ಕುಮಾರ್ ಅಂತಿಮ ದರ್ಶನ]

ಅರೆ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣೆಗೆ ಮುಂದಾದರು. ಆದರೆ ತಲೆ ಹಾಗೂ ಎದೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಪಂಕಜ್ ಸ್ಥಳದಲ್ಲೇ ಮೃತಪಟ್ಟಿದ್ದರು.[ಇನ್ನೂ ಬಯಲಾಗದ ಪ್ರಭಾ ಕುಮಾರ್ ಹತ್ಯೆ ಪ್ರಕರಣ]
ಮಹಡಿಯಿಂದ ಕೆಳಬಿದ್ದು ಮೃತಪಟ್ಟ ಸಾ ಬಳಿ ಕಾರ್ಡ್‌ಲೆಸ್ ಫೋನ್ ಪುಡಿಯಾಗಿ ಬಿದ್ದಿರುವುದು ಪತ್ತೆಯಾಗಿದ್ದು ಪೊಲೀಸರು ತನಿಖೆ ಕೈ ಗೆತ್ತಿಕೊಂಡಿದ್ದಾರೆ. ಉತ್ತರ ಸಿಡ್ನಿಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಾ ಇತ್ತೀಚೆಗಷ್ಟೇ ಆಸ್ಟ್ರೇಲಿಯಾಕ್ಕೆ ಹಿಂದಿರುಗಿದ್ದರು ಎಂದು ಅವರ ಮ್ಯಾನೇಜರ್ ಕ್ಯಾರನ್ ವಾಲರ್ ತಿಳಿಸಿದ್ದಾರೆ.











Click it and Unblock the Notifications