ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ದಂತವೈದ್ಯೆಯ ಬರ್ಬರ ಹತ್ಯೆ

ಸಿಡ್ನಿ, ಮಾರ್ಚ್ 06: ಆಸ್ಟ್ರೇಲಿಯಾದ ಸಿಡ್ನಿಯ ಜನನಿಬಿಡ ಪ್ರದೇಶದಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದ ಭಾರತೀಯ ಮೂಲದ ದಂತ ವೈದ್ಯೆ ಪ್ರೀತಿ ರೆಡ್ಡಿ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಪೂರ್ವ ಸಿಡ್ನಿಯ ನ್ಯೂ ಸೌತ್ ವೇಲ್ಸ್ ನಲ್ಲಿ ನಿಲ್ಲಿಸಲಾಗಿದ್ದ ಆಕೆಯ ಕಾರ್ ನಲ್ಲಿದ್ದ ಸೂಟ್ ಕೇಸೊಂದರಲ್ಲಿ ಆಕೆಯ ಮೃತದೇಹವನ್ನು ತುಂಬಿಡಲಾಗಿತ್ತು.

ಅಷ್ಟೇ ಅಲ್ಲ, ಆಕೆಯ ಮಾಜಿ ಪ್ರಿಯಕರ ಸಹ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವುದು ಮತ್ತಷ್ಟು ಅನುಮಾನಕ್ಕೆ ಆಸ್ಪದ ನೀಡಿದೆ.

ಸಿಡ್ನಿಯ ಜಾರ್ಜ್ ಸ್ಟ್ರೀಟ್ ನಲ್ಲಿ ಯಾರಿಗೋ ಕಾಯುತ್ತ ನಿಂತಿದ್ದ ಪ್ರೀತಿ, ನಂತರ ನಾಪತ್ತೆಯಾಗಿದ್ದಾರೆ. ಆಕೆ ಕಾಯುತ್ತ ನಿಂತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

Indian-origin dentist in Australia found dead

ಆಕೆಯ ದೇಹದ ಮೇಲೆ ಇರಿದ ಗಾಯಗಳು ಸಾಕಷ್ಟಿದ್ದು, ಆಕೆ ತನ್ನ ಮಾಜಿ ಪ್ರಿಯಕರನೊಟ್ಟಿಗೆ ಸಿಡ್ನಿಯ ಮಾರ್ಕೆಟ್ ಸ್ಟ್ರೀಟ್ ನಲ್ಲಿದ್ದ ಹೊಟೇಲ್ ವೊಂದರಲ್ಲಿ ವಾಸವಿದ್ದರು ಎನ್ನಲಾಗಿದೆ.

ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ತನ್ನ ಕುಟುಂಬಸ್ಥರೊಂದಿಗೆ ಫೋನಿನಲ್ಲಿ ಮಾತನಾಡಿದ್ದ ಪ್ರೀತಿ, ನಂತರ ಸಂಪರ್ಕಕ್ಕೆ ಸಿಗದಿದ್ದಾಗ ಅನುಮಾನಗೊಂಡ ಆಕೆಯ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪ್ರೀತಿ ರೆಡ್ಡಿ ಭಾರತೀಯ ಮೂಲದವರಾಗಿದ್ದು, ಅವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+