ಆಸ್ಟ್ರೇಲಿಯಾ ಬೀಚ್ ನಲ್ಲಿ ಮೂವರು ಭಾರತೀಯರು ನಾಪತ್ತೆ, ಇಬ್ಬರ ಶವ ಪತ್ತೆ

ಸಿಡ್ನಿ, ಡಿಸೆಂಬರ್ 18: ಆಸ್ಟ್ರೇಲಿಯಾದ ಮೂನಿ ಬೀಚ್ ಎಂಬಲ್ಲಿ ಮೂವರು ಭಾರತೀಯರು ಸೋಮವಾರ ನಾಪತ್ತೆಯಾಗಿದ್ದು, ಇಬ್ಬರ ಶವ ತಡರಾತ್ರಿ ಪತ್ತೆಯಾಗಿದೆ.

ಒಟ್ಟು ಆರು ಜನರಿದ್ದ ಕುಟುಂಬವೊಂದು ಆಸ್ಟ್ರೇಲಿಯಾಕ್ಕೆ ಪ್ರವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ನೀರಿನಲ್ಲಿ ಬಿದ್ದ ಮಕ್ಕಳನ್ನು ರಕ್ಷಿಸಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಹೈದರಾಬಾದ್ ಮೂಲದ ಗೌಸುದ್ದಿನ್(45) ರಾಹತ್ (35) ಎಂದು ಗುರುತಿಸಲಾಗಿದೆ. ಸಿಡ್ನಿ ಮತ್ತು ಬ್ರಿಸ್ಬೇನ್ ನಲ್ಲಿ ವಾಸವಿದ್ದ ಎರಡು ಕುಟುಂಬಗಳು ರಜೆಯ ಕಾರಣ ಮೂನೂ ಬೀಚ್ ಗೆ ಪ್ರವಾಸಕ್ಕೆಂದು ಬಂದಿದ್ದರು.

ಸೋಮವಾರ ಸಂಜೆ 6:15(ಸ್ಥಳೀಯ ಕಾಲಮಾನ)ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಮೃತರು 35 ಮತ್ತು 45 ವರ್ಷದವರು. 15 ಮತ್ತು 17 ವಯಸ್ಸಿನ ಇಬ್ಬರು ಹುಡುಗಿಯರು ಮತ್ತು 15 ವರ್ಷ ವಯಸ್ಸಿನ ಓರ್ವ ಬಾಲಕನನ್ನು ನೀರಿನಿಂದ ಮೇಲಕ್ಕೆತ್ತಿ ರಕ್ಷಿಸಲಾಗಿದ್ದು, ಕಾಫ್ಸ್ ಹಾರ್ಬರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Australia: 3 Indian nationals went missing from Moonee beach

ಕೆಲವು ಮಾಹಿತಿಯ ಪ್ರಕಾರ ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಹೈದರಾಬಾದಿನಿಂದ ಬಂದವರು ಎನ್ನಲಾಗಿದೆ. ನಿಖರ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+