ಆಸ್ಟ್ರೇಲಿಯಾದ 4 ವರ್ಷದ ಬಾಲಕನೊಬ್ಬ ಡಯಾನಾರ ಪುನರ್ಜನ್ಮ ನಾನೇ ಅಂತಾನೆ!
ವಿಚಿತ್ರ ಸಂಗತಿಗಳು ಎಲ್ಲೆಲ್ಲಿಂದಲೋ ಹಾರಾಡುತ್ತಾ ಬರುತ್ತವೆ. ನಂಬುವುದು, ಬಿಡುವುದು ವೈಯಕ್ತಿಕ ಅಭಿಪ್ರಾಯ. ಇದೀಗ ಈ ವರದಿಯ ವಿಚಾರಕ್ಕೆ ಬರುವುದಾದರೆ, ಆಸ್ಟ್ರೇಲಿಯಾದ ನಾಲ್ಕು ವರ್ಷದ ಬಾಲಕನೊಬ್ಬ, "ಬ್ರಿಟನ್ ನ ರಾಜಕುಮಾರಿಯಾಗಿದ್ದ ಡಯಾನಾರ ಪುನರ್ ಜನ್ಮ ನಾನು" ಎನ್ನುತ್ತಿದ್ದಾನೆ.
ಈ ಬಾಲಕನ ತಂದೆ ಆಸ್ಟ್ರೇಲಿಯಾದಲ್ಲಿ ಹೆಸರಾದ ಟಿ.ವಿ. ನಿರೂಪಕ. "ಬ್ರಿಟನ್ ರಾಜಕುಮಾರಿ ಆಗಿದ್ದ ಡಯಾನಾರ ಪುನರ್ಜನ್ಮ ತಾನು ಎಂದು ನನ್ನ ಮಗ ನಂಬಿದ್ದಾನೆ" ಎಂದು ಹೇಳಿರುವುದಾಗಿ ಯು.ಕೆ. ಮಾಧ್ಯಮಗಳು ವರದಿ ಮಾಡಿವೆ. ಅಂದ ಹಾಗೆ ಬಾಲಕನ ಹೆಸರು ಬಿಲ್ಲಿ ಕ್ಯಾಂಪ್ ಬೆಲ್. ಆತನ ತಂದೆ ಹೆಸರು ಡೇವಿಡ್ ಕ್ಯಾಂಪ್ ಬೆಲ್. ರಾಜಕುಮಾರಿ ಡಯಾನಾ ಕಾರು ಅಪಘಾತದಲ್ಲಿ ಸಾವನ್ನ್ಪ್ಪಿದ ಹದಿನೆಂಟು ವರ್ಷದ ನಂತರ ಬಿಲ್ಲಿ ಹುಟ್ಟಿದ್ದಾನೆ.
ಈ ಬೆಳವಣಿಗೆಯಿಂದ ಅಚ್ಚರಿಗೆ ಸಿಲುಕಿಕೊಂಡಿರುವ ಡೇವಿಡ್, "ಬಿಲ್ಲಿಗೆ ಆಗ ಎರಡು ವರ್ಷ ಇರಬಹುದು. ಟೀವಿಯಲ್ಲಿ ಬಂದದ್ದನ್ನು ತೋರಿಸಿ, ನೋಡಿ, ಅದು ನಾನೇ. ಆಗ ರಾಜಕುಮಾರಿ ಆಗಿದ್ದೆ" ಎಂದಿದ್ದನ್ನು ನೆನಪಿಸಿಕೊಳ್ಳುತ್ತಾರೆ.

ಡಯಾನಾ ಬಗ್ಗೆ ಬಾಲಕ ಹೇಳಿದ್ದು ಅಲ್ಲಿಗೇ ನಿಂತಿಲ್ಲವಂತೆ. ಡಯಾನಾರ ಜೀವನದ ಸಂಗತಿಗಳನ್ನು ಮಗು ಬಿಲ್ಲಿ ಹೇಳಲು ಶುರು ಮಾಡಿದನಂತೆ. ಯುವರಾಜರಾದ ವಿಲಿಯಂ ಹಾಗೂ ಹ್ಯಾರಿಯನ್ನು "ನನ್ನ ಮಕ್ಕಳು" ಎನ್ನುತ್ತಿದ್ದನಂತೆ. ಕುಟುಂಬದ ಇತರ ಸದಸ್ಯರ ಜತೆಗೆ ಮಾತನಾಡುವಾಗ ಈ 'ಹುಡುಗ'ರ ಬಗ್ಗೆ ಪದೇಪದೇ ಮಾತನಾಡುತ್ತಾನಂತೆ.
ಇವೆಲ್ಲಕ್ಕೂ ವಿಚಿತ್ರ ಏನೆಂದರೆ, ಡಯಾನಾರ ಸೋದರ ಜಾನ್ ಬಗ್ಗೆ ಬಿಲ್ ಮಾತನಾಡುತ್ತಾನಂತೆ. ಹುಟ್ಟಿದ ಕೆಲ ಗಂಟೆಗಳಲ್ಲೇ ಜಾನ್ ಸಾವನ್ನಪ್ಪಿತ್ತಂತೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications