Breaking; ಬಾರಾಮುಲ್ಲದಲ್ಲಿ ಎನ್‌ಕೌಂಟರ್, ಎಲ್‌ಇಟಿ ಕಮಾಂಡ್ ಹತ್ಯೆ
ಶ್ರೀನಗರ, ಏಪ್ರಿಲ್ 21; ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲದಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಉಗ್ರ ಸಂಘಟನೆ ಕಮಾಂಡರ್ ಹತ್ಯೆಯಾಗಿದೆ. ಗುಂಡಿನ ಕಾಳಗ ಇನ್ನೂ ಮುಂದುವರೆದಿದ್ದು, ಹೆಚ್ಚಿನ ಉಗ್ರರು ಅಡಗಿರುವ ಸಾಧ್ಯತೆ ಇದೆ.
ಗುರುವಾರ ಬೆಳಗ್ಗೆ ಆರಂಭವಾದ ಎನ್‌ಕೌಂಟರ್‌ನಲ್ಲಿ ಎಲ್‌ಇಟಿ ಉಗ್ರ ಸಂಘಟನೆ ಕಮಾಂಡರ್ ಯೂಸೂಫ್ ಕಾಂಥ್ರೋ ಮೃತಪಟ್ಟಿದ್ದಾನೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.
ಎಲ್ಇಟಿ ಸಂಘಟನೆಯ ಕಮಾಂಡರ್ ಹಲವು ನಾಗರಿಕರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ. ತನ್ನ ಸಹೋದರರನ್ನು ಹತ್ಯೆ ಮಾಡಿದ್ದ ಹಲವು ಭದ್ರತಾ ಪಡೆಗಳ ಸಿಬ್ಬಂದಿಗಳನ್ನು ಕೊಂದಿದ್ದ.

ಬಾರಮುಲ್ಲಾದ ಮಾಲ್ವ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆಯುತ್ತಿದೆ. ಬುದ್‌ಗಾಂವ್ ಪೊಲೀಸರು ಮತ್ತು ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರೆದಿವೆ.












Click it and Unblock the Notifications