ಪುಲ್ವಾಮಾ ದಾಳಿ ಸಂಚುಕೋರ ಅಬ್ದುಲ್ ರಶೀದ್ ಘಾಜಿ ಸುಳಿವು ಪತ್ತೆ

ಜಮ್ಮು, ಫೆಬ್ರವರಿ 16: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14 ರಂದು ನಡೆದ ಭೀಕರ ಉಗ್ರದಾಳಿಯ ಸಂಚುಕೋರ ಎಂದು ನಂಬಲಾದ ಅಬ್ದುಲ್ ರಶೀದ್ ಘಾಜಿಯ ಸುಳಿವು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪುಲ್ವಾಮಾ ಅಥವಾ ಟ್ರಾಲ್ ಪ್ರದೇಶದ ಕಾಡಿನಲ್ಲಿ ರಶೀದ್ ಇದ್ದಿರುವ ಸುಳಿವು ಲಭ್ಯವಾಗಿದ್ದು ಆತನ ಪತ್ತೆಗೆ ಸಕಲ ಪ್ರಯತ್ನವನ್ನೂ ನಡೆಸಲಾಗುತ್ತಿದೆ. ಪುಲ್ವಾಮಾ ಸಮೀಪದ ಕಾಡಿನಲ್ಲೇ ಕುಳಿತು ಆತ ಈ ಎಲ್ಲಾ ದಾಳಿಯ ರೂಪುರೇಷೆಯನ್ನೂ, ಅದು ನಡೆಯಬೇಕಾದ ವಿಧಾನದ ಮಾರ್ಗದರ್ಶನವನ್ನೂ ಮಾಡುತ್ತಿದ್ದ ಎನ್ನಲಾಗುತ್ತಿದೆ.

ಪಾಕಿಸ್ತಾನ ಮೂಲದ ಮೌಲಾನಾ ಮಸೂದ್ ಅಝರ್ ಎಂಬ ತನ್ನ ಬಾಸ್ ಮೂಲಕ ಸೂಚನೆ ಪಡೆಯುತ್ತಿದ್ದ ರಶೀದ್ ಭಾರತದಲ್ಲಿ ಇಂಥದೊಂದು ಘನಘೋರ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ.

Pulwama attack main conspirator Abdul Rashid Gazi traced

ರಶೀದ್ ನನ್ನು ಜೀವಂತ ಹಿಡಿಯಲು ಈಗಾಗಲೇ ಪ್ರಯತ್ನ ಆರಂಭವಾಗಿದೆ.

ಪುಲ್ವಾ,ಆಮಾದ ಅವಂತಿಪೊರ ಎಂಬಲ್ಲಿ ಗುರುವಾರ ಸಂಜೆ ಸಿಆರ್ ಪಿಎಫ್ ಬಸ್ ಮೇಲೆ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಎಂಬ ಆತ್ಮಾಹುತಿ ದಾಳಿಕೋರ ಕಾರ್ ಬಾಂಬ್ ಸ್ಫೋಟಿಸುವ ಮೂಲಕ 44 ಯೋಧರು ಹುತಾತ್ಮರಾಗುವಂತೆ ಮಾಡಿದ್ದ.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಐವರು ಶಂಕಿತರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ನಡುವೆ ಸ್ಫೋಟಕ್ಕೆ ಅಪಾಯಕಾರಿ ಸ್ಫೋಟಕವಾದ ಆರ್ ಡಿಎಕ್ಸ್ ಅನ್ನು ಬಳಸಲಾಗಿಲ್ಲ ಎಂದು ಪ್ರಾಥಮಿಕ ತನಿಖೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+