ಪಿಒಕೆಯಲ್ಲಿ ಅತ್ಯಾಚಾರ: ನ್ಯಾಯಕ್ಕಾಗಿ 7 ವರ್ಷಗಳ ಕಾಲ ಅಲೆದಾಡಿದ ಸಂತ್ರಸ್ತೆಯಿಂದ ಮೋದಿಗೆ ಮನವಿ
ಮುಜಫರಾಬಾದ್ ಏಪ್ರಿಲ್ 13: ಕಳೆದ ಏಳು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ, ತಾನು ಮತ್ತು ತನ್ನ ಮಕ್ಕಳು ಜೀವ ಬೆದರಿಕೆಯನ್ನು ಎದುರಿಸುತ್ತಿರುವ ಕಾರಣ ಆಶ್ರಯ ಮತ್ತು ರಕ್ಷಣೆಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಸಹಾಯವನ್ನು ಕೋರಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸಾಮೂಹಿಕ ಅತ್ಯಾಚಾರದಿಂದ ಬದುಕುಳಿದ ಮಹಿಳೆ ಮಾರಿಯಾ ತಾಹಿರ್ ಭಾವನಾತ್ಮಕ ವೀಡಿಯೊ ಸಂದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಹಾಯವನ್ನು ಕೋರಿದ್ದಾರೆ. ಮಹಿಳೆ ನ್ಯಾಯಕ್ಕಾಗಿ ಬಹಳ ದಿನಗಳಿಂದ ಹೋರಾಟ ನಡೆಸುತ್ತಿದ್ದಾಳೆ. ಆದರೆ ಆರೋಪಿಗೆ ಶಿಕ್ಷೆಗೆ ಶಿಕ್ಷೆಯಾಗಲಿ ತನಿಖೆಯಾಗಲಿ ನಡೆದಿಲ್ಲ. ಕಳೆದ ಏಳು ವರ್ಷಗಳಿಂದ ಮನೆ ಮನೆಗೆ ಅಲೆದಾಡುತ್ತಿದ್ದಾಳೆ. ಆದರೆ ಇದುವರೆಗೂ ನ್ಯಾಯ ಸಿಕ್ಕಿಲ್ಲ. ಇದೀಗ ಅಂತಿಮವಾಗಿ ಸಂತ್ರಸ್ತೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಆಶ್ರಯ ಮತ್ತು ರಕ್ಷಣೆ ನೀಡುವಂತೆ ಮಹಿಳೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ಇದರಿಂದ ನನ್ನ ಮತ್ತು ನನ್ನ ಮಕ್ಕಳಿಗೂ ಅಪಾಯವಿದೆ ಎಂದು ಮಹಿಳೆ ಹೇಳುತ್ತಾಳೆ.
Maria Tahir #Rape case Pakistan Administered #Kashmir.
— Zaara (@zaara_kashmiri) April 8, 2022
Anyone who wants to come forward to help Maria can DM me. @UNOCHA @GulBukhari @Gulalai_Ismail @ZahraYusufi @AsadHashim @OwaisTohid @UsamaKhilji @BushraGohar @UmarCheema1 @a_siab @sahaafi
Youtube :- https://t.co/DoUD4kIpjO pic.twitter.com/xlHmBxaERw
ಮಹಿಳೆ ಸಹಾಯಕ್ಕಾಗಿ ಮನವಿ ಮಾಡುವ ವಿಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ವಿಡಿಯೋವನ್ನು ಶೇರ್ ಮಾಡಿರುವ ಮಹಿಳೆ, ನಾನು ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾಗಿದ್ದೇನೆ ಮತ್ತು ಕಳೆದ 7 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ. ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸರ್ಕಾರ ಮತ್ತು ನ್ಯಾಯಾಂಗ ನನಗೆ ನ್ಯಾಯ ನೀಡುವಲ್ಲಿ ವಿಫಲವಾಗಿವೆ. ಈ ವಿಡಿಯೋ ಮೂಲಕ ನನಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತಕ್ಕೆ ಬರಲು ಅವಕಾಶ ನೀಡುವಂತೆ ಮನವಿ ಮಾಡುತ್ತೇನೆ. ನನ್ನ ಮಕ್ಕಳು ಪ್ರಾಣಾಪಾಯದಲ್ಲಿದ್ದಾರೆ, ಸ್ಥಳೀಯ ಪೊಲೀಸರು ಮತ್ತು ಹಿರಿಯ ಮುಖಂಡ ಚೌಧರಿ ತಾರಿಖ್ ಫಾರೂಕ್ ನನ್ನನ್ನು ಮತ್ತು ನನ್ನ ಮಗುವನ್ನು ಯಾವುದೇ ಸಮಯದಲ್ಲಿ ಕೊಲ್ಲಬಹುದು. ನನಗೆ ಭಾರತಕ್ಕೆ ಬರಲು ಅವಕಾಶ ಮಾಡಿಕೊಡಿ ಮತ್ತು ಭಾರತ ದೇಶದಲ್ಲಿ ನನಗೆ ಆಶ್ರಯ ನೀಡುವಂತೆ ನಾನು ಪ್ರಧಾನಿ ಮೋದಿಯವರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ಅತ್ಯಾಚಾರ ಸಂತ್ರಸ್ತೆ ದೀರ್ಘಕಾಲದವರೆಗೆ ನ್ಯಾಯಕ್ಕಾಗಿ ಮನವಿ ಮಾಡುತ್ತಿದ್ದು, 2015 ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಳು ಎಂಬುದು ಗಮನಿಸಬೇಕಾದ ಸಂಗತಿ. ಇದಕ್ಕೂ ಮುನ್ನ ಮಹಿಳೆ ವಿಡಿಯೋವನ್ನು ಶೇರ್ ಮಾಡಿದ್ದು, ಅದರಲ್ಲಿ ಮಹಿಳೆ ಇಡೀ ಘಟನೆಯನ್ನು ವಿವರಿಸಿದ್ದಾಳೆ. ಹರೂನ್ ರಶೀದ್, ಮಮೂನ್ ರಶೀದ್, ಜಮೀಲ್ ಶಾಫಿ, ವಕಾಸ್ ಅಶ್ರಫ್, ಸನಮ್ ಹರೂನ್ ಮತ್ತು ಇತರ ಮೂವರು ನನ್ನೊಂದಿಗೆ ಈ ಘೋರ ಅಪರಾಧ ಮಾಡಿದ್ದಾರೆ ಎಂದು ಮಹಿಳೆ ಹೇಳುತ್ತಾರೆ. ಮಹಿಳೆ ನ್ಯಾಯಕ್ಕಾಗಿ ಸ್ಥಳೀಯ ಪೊಲೀಸರು ಮತ್ತು ರಾಜಕಾರಣಿಗಳಿಗೆ ಮನವಿ ಮಾಡಿದರು. ಅವರು ಪಿಒಕೆ ಮುಖ್ಯ ನ್ಯಾಯಮೂರ್ತಿಗೆ ಪತ್ರವನ್ನೂ ಬರೆದಿದ್ದಾರೆ, ಆದರೆ ಅವರು ಮಹಿಳೆಗೆ ನೀವು ವಿವಾಹಿತ ಮಹಿಳೆ ಎಂದು ಪ್ರತಿಕ್ರಿಯಿಸಿದ್ದಾರೆ. ವರದಿಯ ಪ್ರಕಾರ, ಪಿಒಕೆಯಲ್ಲಿ ಅನೇಕ ಅತ್ಯಾಚಾರ ಸಂತ್ರಸ್ತರಿದ್ದಾರೆ, ಇಲ್ಲಿನ ಜನರ ಬೆದರಿಕೆಯಿಂದಾಗಿ ಅವರು ಮುಂದೆ ಬರಲು ಹೆದರುತ್ತಾರೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.











Click it and Unblock the Notifications