ಪಾಕ್ ಸೇನೆ ಬಂಡವಾಳ ಹೊರಹಾಕುತ್ತಿರುವ ಅಣ್ವಸ್ತ್ರ ವಿವಾದ

ಶ್ರೀನಗರ, ಸೆಪ್ಟೆಂಬರ್ 6: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಾಕಿಸ್ತಾನಕ್ಕೆ ತನ್ನ ಸೈನ್ಯದ ಮೇಲೆ ಭರವಸೆ ಇಲ್ಲದಿರುವುದು ಎದ್ದು ಕಾಣುತ್ತಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಪರಿಚ್ಛೇದ 370 ರದ್ದತಿ ಬಳಿಕ ಪಾಕಿಸ್ತಾನ ಭಾರತದ ಮೇಲೆ ಯುದ್ಧ ಸಾರಲು ತುದಿಗಾಲಿನಲ್ಲಿ ನಿಂತಿದೆ ಆದರೆ ತನ್ನ ಸೇನೆಯ ಕುರಿತು ನಂಬಿಕೆ ಇದ್ದಂತೆ ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಯಾವುದೇ ಸಂದರ್ಭದಲ್ಲಿ ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಬಕಪಕ್ಷಿಯಂತೆ ಪಾಕಿಸ್ತಾನವು ಗಡಿಯಲ್ಲಿ ಬಹುದೊಡ್ಡ ಸೈನ್ಯವನ್ನು ತಂದಿಟ್ಟುಕೊಂಡು ಕುಳಿತಿದೆ ಆದರೆ ಯುದ್ಧ ಮಾಡಲು ಧೈರ್ಯ ಸಾಕಾಗುತ್ತಿಲ್ಲ ಎಂದಿದ್ದಾರೆ.

 ಯಾವುದೇ ಸವಾಲು ಎದುರಿಸಲು ನಾವು ಸಿದ್ಧ

ಯಾವುದೇ ಸವಾಲು ಎದುರಿಸಲು ನಾವು ಸಿದ್ಧ

ಪಾಕಿಸ್ತಾನದಿಂದ ಸಾಕಷ್ಟು ಬೆದರಿಕೆಗಳನ್ನು ಭಾರತ ಎದುರಿಸಿದೆ. ಯಾವುದೇ ಸವಾಲನ್ನು ಎದುರಿಸಲು ಹೆಚ್ಚು ಸಿದ್ಧವಾಗಿದೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಇಸ್ಲಾಮಾಬಾದ್‌ನ ಪರಮಾಣು ಬೆದರಿಕೆಗಳ ಬಗ್ಗೆ ಜನರಲ್ ರಾವತ್, ಇದು ಪಾಕಿಸ್ತಾನದ ಸಾಂಪ್ರದಾಯಿಕ ಪಡೆಗಳ ಮೇಲಿನ ವಿಶ್ವಾಸ ಕಳೆದುಕೊಳ್ಳುವ ಸಂಕೇತವಾಗಿದೆ ಎಂದು ಹೇಳಿದರು.
 ನಿಮ್ಮ ಸೇನೆಯ ಮೇಲೆಯೇ ನಿಮಗೆ ನಂಬಿಕೆ ಇಲ್ಲ

ನಿಮ್ಮ ಸೇನೆಯ ಮೇಲೆಯೇ ನಿಮಗೆ ನಂಬಿಕೆ ಇಲ್ಲ

ಎದುರಾಳಿಯನ್ನು ಹಿಮ್ಮೆಟ್ಟಿಸಲು ನಿಮ್ಮ ಸಾಂಪ್ರದಾಯಿಕ ಪಡೆಗಳ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿಲ್ಲದಿದ್ದಾಗ, ನೀವು ಪರಮಾಣು ಬೋಗಿಯನ್ನು ಬಳಸಲು ಪ್ರಾರಂಭಿಸುತ್ತೀರಿ, ಪಾಕಿಸ್ತಾನವು ನಿಯಂತ್ರಣ ರೇಖೆಯ ಉದ್ದಕ್ಕೂ ಹೆಚ್ಚುವರಿ ನಿಯೋಜನೆ ಮಾಡಿದೆ.

 ನೀವು ಹಿಂಸಾಚಾರ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

ನೀವು ಹಿಂಸಾಚಾರ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

ಪಾಕಿಸ್ತಾನವು ಗಡಿಯಲ್ಲಿ ಹೆಚ್ಚುವರಿ ಮಂದಿಯನ್ನು ನಿಯೋಜನೆ ಮಾಡಿದೆ, ಅದರ ಜೊತೆಗೆ ಭಯೋತ್ಪಾದಕರಿಗೆ ಉತ್ತೇಜ ನೀಡುತ್ತಿದೆ. ಭಯೋತ್ಪಾದಕ ದಾಳಿಯನ್ನು ನಡೆಸುವಲ್ಲಿ ಅವರು ಯಶಸ್ವಿಯಾಗಬೇಕಾದರೆ, ನಮ್ಮ ವಿರುದ್ಧ ಯುದ್ಧ ಮಾಡಲೇಬೇಕು ಎಂದರು. ನೀವು ಹಿಂಸಾಚಾರ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

 ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ

ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿ 370 ರದ್ದುಗೊಳಿಸಿದ ಬಳಿಕ ಪಾಕಿಸ್ತಾನವು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ. ಹಿಂಸಾಚಾರವನ್ನು ಪ್ರಚೋದಿಸುವುದು ಒಳ್ಳೆಯದು ಎಂದು ಪಾಕಿಸ್ತಾನವು ತಿಳಿದಿದೆ. ಅದನ್ನು ನಿಭಾಯಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+