ಹಿಜ್ಬುಲ್ ಉಗ್ರರ ಜೊತೆ ದೇವಿಂದರ್ ನಂಟು; ಎನ್‌ಐಗೆ ಸಿಕ್ತು ಸಾಕ್ಷಿ

ಶ್ರೀನಗರ, ಜನವರಿ 31 : ಅಮಾನತಿನಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್‌ಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಜೊತೆ ನಂಟಿದೆ. ಪ್ರಕರಣದ ತನಿಖೆ ಕೈಗೊಂಡಿರುವ ಎನ್‌ಐಎ ಮಹತ್ವದ ಮಾಹಿತಿಯನ್ನು ಕಲೆ ಹಾಕಿದೆ.

ಹಿಜ್ಬುಲ್ ಉಗ್ರರ ಪೆ-ರೋಲ್‌ನಲ್ಲಿ ದೇವಿಂದರ್ ಸಿಂಗ್ ಹೆಸರು ಇದೆ ಎಂಬ ಮಾಹಿತಿಯನ್ನು ಎನ್‌ಐಎ ಕಲೆ ಹಾಕಿದೆ. ಉಗ್ರರು ಭಾರತಕ್ಕೆ ಬಂದಾಗ ಅವರಿಗೆ ವಸತಿ ವ್ಯವಸ್ಥೆ ಮಾಡುತ್ತಿದ್ದ ಸಿಂಗ್‌ಗೆ ಉಗ್ರ ಸಂಘಟನೆ ಹಣವನ್ನು ನೀಡುತ್ತಿತ್ತು.

12 ಲಕ್ಷ ಹಣ ಪಡೆದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರಿಗೆ ಸಹಾಯ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆಯೇ ದೇವಿಂದರ್ ಸಿಂಗ್ ಬಂಧಿಸಲಾಗಿತ್ತು. ಕಾರಿನಲ್ಲಿ ಉಗ್ರರ ಜೊತೆ ತೆರಳುತ್ತಿದ್ದಾಗ ಅವರನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಂಧಿಸಿದ್ದರು.

NIA Found Davinder Singh Connection With Terrorists

ಪೊಲೀಸರು ಮೊದಲು ಬಂಧಿಸಿದಾಗ ಉಗ್ರರನ್ನು ಶರಣಾಗಿಸಲು ಕರೆದುಕೊಂಡು ಹೋಗುತ್ತಿದ್ದೆ ಎಂದು ದೇವಿಂದರ್ ಸಿಂಗ್ ಹೇಳಿಕೆ ನೀಡಿದ್ದ. ಬಳಿಕ ಪ್ರಕರಣದ ತನಿಖೆಯನ್ನು ಕೈಗೊಂಡ ಎನ್‌ಐಎ ದೇವಿಂದರ್ ಸಿಂಗ್ ವಶಕ್ಕೆ ಪಡೆದುಕೊಂಡು ತನಿಖೆಯನ್ನು ಮುಂದುವರೆಸಿತ್ತು.

ಕಾಶ್ಮೀರ ರೇಂಜ್‌ನ ಐಜಿಪಿ ವಿಜಯ್ ಕುಮಾರ್, "ದೇವಿಂದರ್ ಸಿಂಗ್‌ಗೆ ಅಫ್ಜಲ್ ಗುರು ಜೊತೆ ಸಂಪರ್ಕವಿತ್ತೆ ಎಂಬ ಕುರಿತು ತನಿಖೆ ನಡೆಸಲಾಗುತ್ತದೆ. ಅವರನ್ನು ಒಬ್ಬ ಉಗ್ರನಂತೆಯೇ ನೋಡಲಾಗುತ್ತಿದೆ" ಎಂದು ಹೇಳಿದ್ದಾರೆ.

2004ರಲ್ಲಿ ದೆಹಲಿಯ ತಿಹಾರ್‌ ಜೈಲಿನಲ್ಲಿದ್ದ ಅಫ್ಜಲ್ ಗುರು ಬರೆದಿದ್ದ ಪತ್ರವೊಂದರಿಂದ ಜಮ್ಮು ಮತ್ತು ಕಾಶ್ಮೀರದ ಹಲವು ಪೊಲೀಸ್ ಅಧಿಕಾರಿಗಳಿಗೆ ಅವನ ಜೊತೆ ನಂಟಿತ್ತು ಎಂಬ ಮಾಹಿತಿ ಬಹಿರಂಗವಾಗಿತ್ತು. ಈ ಆಯಾಮದಲ್ಲಿಯೂ ಈಗ ತನಿಖೆ ನಡೆಯಲಿದೆ.

ದೇವಿಂದರ್ ಸಿಂಗ್ ವಿಚಾರಣೆ ನಡೆಸುತ್ತಿರುವ ಎನ್‌ಐಎ ಶ್ರೀನಗರದ ಇಂದಿರಾ ನಗರದಲ್ಲಿರುವ ಅವರ ಮನೆಯ ಮೇಲೆ ದಾಳಿಯನ್ನು ನಡೆಸಿತ್ತು. ಜಮ್ಮುವಿನಲ್ಲಿ ಎನ್‌ಐಎ ಸಿಂಗ್ ವಿಚಾರಣೆ ನಡೆಸುತ್ತಿದ್ದು, ನವದೆಹಲಿಗೆ ಕರೆದುಕೊಂಡು ಹೋಗುವ ಸಾಧ್ಯತೆಯೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+