ಕಾಶ್ಮೀರದಲ್ಲಿ ಎನ್‌ಕೌಂಟರ್, ಇಬ್ಬರು ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ
ಶ್ರೀನಗರ, ಫೆಬ್ರವರಿ 13: ಕಾಶ್ಮೀರದಲ್ಲಿ ಒಳನುಗ್ಗಲು ಯತ್ನಿಸಿದ ಇಬ್ಬರು ಉಗ್ರರನ್ನು ಭಾರತೀಯ ಸೇನಾ ಪಡೆದ ಹೊಡೆದುರುಳಿಸಿದೆ.
ಬದ್ಗಾಮ್ ಜಿಲ್ಲೆಯ ಗೋಪಾಲಪೋರಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿಯನ್ನು ಪಡೆದ ಸಿಆರ್‌ಪಿಎಫ್ ಯೋಧರು ದಾಳಿ ನಡೆಸಿದ್ದಾರೆ. ಇಬ್ಬರು ಉಗ್ರರನ್ನು ಎನ್‌ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ. ಈ ವೇಳೆ ಇಬ್ಬರು ಉಗ್ರರು ಸಾವನ್ನಪ್ಪಿದ್ದು ಮತ್ತಷ್ಟು ಉಗ್ರರು ಅಡಗಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಹೀಗಾಗಿ ಘಟನಾ ಪ್ರದೇಶದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.

ಈ ವೇಳೆ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿದ್ದಾರೆ. ಸೈನಿಕರು ಆಗಮಿಸುತ್ತಿದ್ದಂತೆಯೇ ಉಗ್ರರು ಸೈನಿಕರತ್ತ ಗುಂಡಿನ ದಾಳಿ ನಡೆಸಿದ್ದು, ಸೈನಿಕರೂ ಕೂಡ ಪ್ರತಿದಾಳಿ ನಡೆಸಿದ್ದಾರೆ. ಇನ್ನು ಕಳೆದ ಮೂರು ದಿನಗಳಲ್ಲಿ ಇದು ನಾಲ್ಕನೇ ಎನ್‌ಕೌಂಟ್ ಇದಾಗಿದ್ದು, ಒಟ್ಟು 8 ಉಗ್ರರನ್ನು ಸದೆಬಡಿಯಲಾಗಿದೆ.












Click it and Unblock the Notifications