ವೈರಲ್ ವಿಡಿಯೋ: ಜಮ್ಮುವಿನಲ್ಲಿ ಸೇನಾ ಶ್ವಾನಗಳಿಂದ ಯೋಗ ಪ್ರದರ್ಶನ

ಶ್ರೀನಗರ, ಜೂನ್ 21: ಅಂತಾರಾಷ್ಟ್ರೀಯ ಯೋಗದಿನದ ನಿಮಿತ್ತ ಜಮ್ಮುವಿನಲ್ಲಿ ಗಡಿ ರಕ್ಷಣಾ ದಳದ ಶ್ವಾನಗಳು ತಮ್ಮ ತರಬೇತುದಾರರ ಜೊತೆ ಯೋಗ ಪ್ರದರ್ಶನ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಮ್ಮ ತರಬೇತುದಾರರು ಯೋಗ ಪ್ರದರ್ಶನ ಮಾಡಿದ್ದನ್ನೇ ನಾಯಿಗಳೂ ಅನುಸರಿಸಿ, ವಿಶಿಷ್ಟ ರೀತಿಯ ಯೋಗ ದಿನಕ್ಕೆ ಸಾಕ್ಷಿಯಾದವು.

ಇಂದು ಐದನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದ್ದು, ವಿಶ್ವದೆಲ್ಲೆಡೆ ಯೋಗ ಪ್ರದರ್ಶನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ ನ ರಾಂಚಿಯಲ್ಲಿ ಯೋಗದಿನ ಆಚರಿಸಿದರು.

ಭಾರತೀಯ ಸೇನೆಯ ಸಿಬ್ಬಂದಿ ಹಿಮಾಲಯ ಪರ್ವತದ ಮೇಲೆ, ಆಯಕಟ್ಟಿನ ಸ್ಥಳಗಳಲ್ಲಿ ಯೋಗ ಪ್ರದರ್ಶನ ಮಾಡಿ ಯೋಗ ದಿನದ ಮಹತ್ವ ಸಾರಿದರು. ನೌಕಾಸೇನೆಯ ಸಿಬ್ಬಂದಿ ಸಬ್ ಮರಿನ್ ನೌಕೆಯಲ್ಲೂ ಯೋಗಾಭ್ಯಾಸ ಮಾಡುವ ಮೂಲಕ ಗಮನ ಸೆಳೆದರು.

International Yoga Day: Viral Video of Dogs performing Yoga

ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ 18000 ಅಡಿ ಎತ್ತರದ ಉತ್ತರ ಲಡಾಕ್ ಪ್ರದೇಶದಲ್ಲಿ ಯೋಗಾಸನ ಮಾಡಿದರು. ಇಲ್ಲಿನ ತಾಪಮಾನ -20 ಡಿಗ್ರಿ ಸೆಲ್ಷಿಯಸ್!

ಒಟ್ಟಿನಲ್ಲಿ ದೇಶದಾದ್ಯಂತ ವಿಭಿನ್ನ ರೀತಿಯ ಯೋಗ ಪ್ರದರ್ಶನಕ್ಕೆ ಯೋಗದಿನ ಸಾಕ್ಷಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+