ಜಮ್ಮು ಕಾಶ್ಮೀರ: ಗೃಹ ಬಂಧನದಲ್ಲಿದ್ದ ಫಾರೂಕ್ ಅಬ್ದಾಲ್ಲಾಗೆ ಬಿಡುಗಡೆ ಭಾಗ್ಯ
ಶ್ರೀನಗರ, ಮಾರ್ಚ್ 13: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಸುಮಾರು 7 ತಿಂಗಳ ಬಳಿಕ ಗೃಹಬಂಧನದಿಂದ ಬಿಡುಗಡೆಯಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷಿತಾ ಕಾಯ್ದೆ 1978ರ ಸೆಕ್ಷನ್ 19(1) ಅಡಿಯಲ್ಲಿ ಫಾರೂಖ್ ಅಬ್ದುಲ್ಲಾ ಅವರ ಗೃಹಬಂಧನದ ಆದೇಶವನ್ನು ರದ್ದು ಪಡಿಸಿದೆ ಎಂದು ಶ್ರೀನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಗೃಹ ಬಂಧನದಿಂದ ಹೊರ ಬಂದ ಬಳಿಕ ಮಾತನಾಡಿದ ಫಾರೂಕ್ ಅಬ್ದುಲ್ಲಾ ''ನಾನು ರಾಜಕೀಯದ ಬಗ್ಗೆ ಏನು ಮಾತನಾಡಲ್ಲ, ಎಲ್ಲರೂ ಬಿಡುಗಡೆಯಾದ ನಂತರ ಮಾತನಾಡುತ್ತೇನೆ'' ಎಂದು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷಿತಾ ಕಾಯ್ದೆಯಡಿ ಫಾರೂಕ್ ಅಬ್ದುಲ್ಲಾ, ಅವರ ಮಗ ಓಮರ್ ಅಬ್ದುಲ್ಲಾ, ಪಿಡಿಪಿ ಮೆಹಬೂಬ್ ಮಫ್ತಿ ಸೇರಿದಂತೆ ಹಲವು ನಾಯರನ್ನು 371ನೇ ವಿಧಿ ರದ್ದು ಮಾಡಿದ ಹಿನ್ನೆಲೆ ಆಗಸ್ಟ್ 5 ರಂದು ಗೃಹ ಬಂಧನದಲ್ಲಿರಿಸಲಾಗಿತ್ತು.












Click it and Unblock the Notifications