ಜಮ್ಮು ಕಾಶ್ಮೀರ ಸ್ಥಿತಿ ಅಧ್ಯಯನಕ್ಕೆ ಜಾಗತಿಕ ನಿಯೋಗ ಭೇಟಿ, ಐರೋಪ್ಯ ಒಕ್ಕೂಟದಿಂದ ಬಹಿಷ್ಕಾರ

ಶ್ರೀನಗರ, ಜನವರಿ 09: ಜಮ್ಮು ಕಾಶ್ಮೀರ ಸ್ಥಿತಿ ಪರಾಮರ್ಶಿಸಲು ಜಾಗತಿಕ ನಿಯೋಗವು ಇಂದು ಭೇಟಿ ನೀಡಲಿದೆ. ವಿವಿಧ ದೇಶಗಳ 16 ಮಂದಿ ರಾಜತಾಂತ್ರಿಕರು ಈ ನಿಯೋಗದಲ್ಲಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನ-ಮಾನವನ್ನು ರದ್ದು ಗೊಳಿಸಿದ ನಂತರ ಕಣಿವೆ ರಾಜ್ಯದಲ್ಲಿ ಸಾಕಷ್ಟು ಸಾಮಾಜಿಕ, ರಾಜಕೀಯ ಬದಲಾವಣೆಗಳು ನಡೆದಿವೆ. ಇದರ ಪರಾಮರ್ಶೆಗೆಂದು ನಿಯೋಗವು ಈಗ ಭೇಟಿ ನೀಡುತ್ತಿದೆ.

ಆದರೆ ಈ ನಿಯೋಗದಿಂದ ಐರೋಪ್ಯ ರಾಷ್ಟ್ರಗಳು ಹಿಂದೆ ಸರಿದಿವೆ. 'ಪೂರ್ವ ನಿರ್ಧಾರಿತ' ಭೇಟಿಯ ಅಗತ್ಯ ತಮಗಿಲ್ಲ, ಎಂದು ಐರೋಪ್ಯ ಒಕ್ಕೂಟ ಹೇಳಿದೆ.

Foreign Delegates Team Visiting Jammu And Kashmir

ಈ ಜಾಗತಿಕ ನಿಯೋಗವು ಜಮ್ಮು ಕಾಶ್ಮೀರದಲ್ಲಿ ಎರಡು ದಿನಗಳ ಸುತ್ತಾಡಿ ರಾಜ್ಯದ ಸ್ಥಿತಿ-ಗತಿಗಳ ಬಗ್ಗೆ ಅಧ್ಯಯನ ಮಾಡಲಿದೆ. ಈ ನಿಯೋಗದಲ್ಲಿ ಅಮೆರಿಕ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾ ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಆಸ್ಟ್ರೇಲಿಯಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ರಾಜತಾಂತ್ರಿಕ ಸಿಬ್ಬಂದಿ ಸಮಯದ ಕಾರಣದಿಂದ ಈ ನಿಯೋಗದೊಂದಿಗೆ ಭೇಟಿ ನೀಡಲಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜಮ್ಮು ಕಾಶ್ಮೀರದಲ್ಲಿ ಹಲವು ತಿಂಗಳಿನಿಂದ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಈ ವಿಷಯಗಳು ಕಾಶ್ಮೀರದ ಹೊರಗೆ ಚರ್ಚೆಯಾಗಿತ್ತಿದೆ. ಈ ಬಗ್ಗೆ ಜಾಗತಿಕ ನಿಯೋಗವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲಿದೆಯೇ ಎಂಬುದನ್ನು ನೋಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+