ಪಾಕಿಸ್ತಾನ ಪರ 70 ಕಟ್ಟರ್ ಉಗ್ರಗಾಮಿಗಳು ಕಾಶ್ಮೀರದಿಂದ ಆಗ್ರಾಗೆ ಸ್ಥಳಾಂತರ
ಶ್ರೀನಗರ್, ಆಗಸ್ಟ್ 8: ಪಾಕಿಸ್ತಾನ ಪರವಾದ ಎಪ್ಪತ್ತರಷ್ಟು ಕಟ್ಟರ್ ಭಯೋತ್ಪಾದಕರನ್ನು ಕಾಶ್ಮೀರ ಕಣಿವೆಯಿಂದ ಉತ್ತರಪ್ರದೇಶದ ಆಗ್ರಾಗೆ ಸ್ಥಳಾಂತರ ಮಾಡಲಾಗಿದೆ. ಭಾರತೀಯ ವಾಯು ಸೇನೆ ಒದಗಿಸಿರುವ ವಿಶೇಷ ವಿಮಾನದಲ್ಲಿ ಕಟ್ಟರ್ ಉಗ್ರಗಾಮಿಗಳನ್ನು ಕಣಿವೆ ರಾಜ್ಯದಿಂದ ಆಗ್ರಾಗೆ ಸ್ಥಳಾಂತರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿ, ಲಡಾಖ್ ಹಾಗೂ ಜಮ್ಮು ಮತ್ತು ಕಾಶ್ಮೀರ ಎಂದು ಎರಡು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿದ ಮೇಲೆ ನೆರೆಯ ಪಾಕಿಸ್ತಾನದಿಂದ ಆಕ್ರೋಶ ವ್ಯಕ್ತವಾಗಿದೆ. ಭಾರತದ ಈ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪಾಕ್, ಭಾರತದ ಜತೆಗಿನ ವ್ಯಾವಹಾರಿಕ ಒಪ್ಪಂದವನ್ನು ಕಡಿತಗೊಳಿಸುವುದಾಗಿ ಹೇಳಿದೆ.

ಇನ್ನು ಜಮ್ಮು- ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ಸೇನೆ ನಿಯೋಜನೆ ಮಾಡಲಾಗಿದೆ. ಸದ್ಯಕ್ಕೆ ಸಣ್ಣ ಮಟ್ಟಕ್ಕೆ ಆಕ್ರೋಶವು ಜಮ್ಮು- ಕಾಶ್ಮೀರದಲ್ಲಿ ವ್ಯಕ್ತವಾಗಿದ್ದರೂ ಆತಂಕದ ಮಟ್ಟದಲ್ಲಿ ಪರಿಸ್ಥಿತಿ ಇಲ್ಲ. "ಒಂದು ಸಲ ಎಲ್ಲವೂ ಸಹಜ ಸ್ಥಿತಿಗೆ ಮರಳಿದ ಮೇಲೆ ಜಮ್ಮು- ಕಾಶ್ಮೀರದಲ್ಲಿ ಮತ್ತೆ ಪರಿಸ್ಥಿತಿ ಬಿಗಡಾಯಿಸುತ್ತದೆ" ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು, ಭಾರತದ ನಿರ್ಧಾರದ ವಿರುದ್ಧ ವಿಶ್ವಸಂಸ್ಥೆಗೆ ತೆರಳುವುದಾಗಿ ತಿಳಿಸಿದ್ದಾರೆ.












Click it and Unblock the Notifications