ಭಾರಿ ಮಳೆಯಿಂದ ಭೂ ಕುಸಿತ: ಜಮ್ಮುವಿನಿಂದ ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ
ಶ್ರೀನಗರ, ಜುಲೈ 22: ಪ್ರತಿಕೂಲ ಹವಾಮಾನ ಮತ್ತು 270 ಕಿಮೀ ಉದ್ದದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಂಬನ್‌ನಲ್ಲಿ ಮಳೆಯ ಕಾರಣ ಉಂಟಾದ ಭೂಕುಸಿತದಿಂದಾಗಿ ಶುಕ್ರವಾರ ಜಮ್ಮುವಿನಿಂದ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಜಮ್ಮು ನಗರದ ಬೇಸ್ ಕ್ಯಾಂಪ್‌ನಿಂದ ಹೊರಹೋಗಲು ಯಾವುದೇ ಹೊಸ ಬ್ಯಾಚ್‌ಗೆ ಅನುಮತಿ ನೀಡದಿದ್ದರೂ, ರಂಬನ್‌ನ ಯಾತ್ರಿ ನಿವಾಸದಲ್ಲಿ ತಂಗಿದ್ದ ಸುಮಾರು 5,000 ಭಕ್ತರಿಗೆ ಶ್ರೀನಗರ ಹೆದ್ದಾರಿ ದುರಸ್ಥಿಯ ನಂತರ ಜಮ್ಮುವಿನಿಂದ ಪಹಲ್ಗಾಮ್ ಮತ್ತು ಬಾಲ್ಟಾಲ್ ಬೇಸ್ ಕ್ಯಾಂಪ್‌ಗಳಿಗೆ ಹೋಗಲು ಅನುಮತಿ ನೀಡಲಾಯಿತು.
ಜಮ್ಮುವಿನ ಭಗವತಿ ನಗರದ ಬೇಸ್ ಕ್ಯಾಂಪ್‌ನ ಕರ್ತವ್ಯ ಅಧಿಕಾರಿಯೊಬ್ಬರು ಮಾತನಾಡಿ, "ಪ್ರತಿಕೂಲ ಹವಾಮಾನ ಮತ್ತು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಕೆಟ್ಟ ಸ್ಥಿತಿಯಿಂದಾಗಿ ಶುಕ್ರವಾರ ಬೆಳಿಗ್ಗೆ ಯಾವುದೇ ಹೊಸ ಯಾತ್ರಿಕರು ಜಮ್ಮು ನಗರದ ಯಾತ್ರಿ ನಿವಾಸ ಬೇಸ್ ಕ್ಯಾಂಪ್‌ನಿಂದ ಹೊರಬಂದಿಲ್ಲ. ಉನ್ನತ ಅಧಿಕಾರಿಗಳು ಅನುಮತಿ ನೀಡಿದರೆ ಶನಿವಾರ ಬೆಳಿಗ್ಗೆ ಅವರು ಯಾತ್ರೆ ಮುಂದುವರಿಸಲು ಅನುಮತಿ ನೀಡಲಾಗುವುದು" ಎಂದು ಹೇಳಿದರು.

ಚಂದರಕೋಟೆಯಿಂದ ತೆರಳಲು 5000 ಯಾತ್ರಾರ್ಥಿಗಳಿಗೆ ಅವಕಾಶ
ಅಮರನಾಥ ಯಾತ್ರೆಯ ನೋಡಲ್ ಅಧಿಕಾರಿಯೂ ಆಗಿರುವ ರಂಬನ್ ಹೆಚ್ಚುವರಿ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಹರ್ಬನ್ಸ್ ಲಾಲ್ ಶರ್ಮಾ ಮಾತನಾಡಿ, "ಗುರುವಾರ ಜಮ್ಮುವಿನಿಂದ ರಂಬನ್ ತಲುಪಿ ಚಂದರಕೋಟೆಯ ಯಾತ್ರಿ ನಿವಾಸದಲ್ಲಿ ತಂಗಿದ್ದ ಸುಮಾರು 5,000 ಅಮರನಾಥ ಯಾತ್ರಿಕರಿಗೆ ತೆರಳಲು ಅವಕಾಶ ನೀಡಲಾಗಿದೆ. ಹೆದ್ದಾರಿಯಲ್ಲಿ ಸಂಚಾರ ಆರಂಭವಾದ ನಂತರ ಕಾಶ್ಮೀರದ ಪಹಲ್ಗಾಮ್ ಮತ್ತು ಬಲ್ಟಾಲ್ ಮೂಲ ಶಿಬಿರಗಳಿಂದ ಅವರ ಬೆಂಗಾವಲು ಪಡೆಗಳು ಬೆಳಿಗ್ಗೆ 8.30 ರ ಸುಮಾರಿಗೆ ಹೊರಟವು" ಎಂದು ಮಾಹಿತಿ ನೀಡಿದರು.

ಅಮರನಾಥನ ದರ್ಶನ ಪಡೆದಿರುವ 1,24,714 ಯಾತ್ರಾರ್ಥಿಗಳು
ರಂಬನ್‌ನ ಹಲವಾರು ಸ್ಥಳಗಳಲ್ಲಿ ಭಾರಿ ಮಳೆಯಿಂದ ಉಂಟಾದ ಭೂಕುಸಿತ ಮತ್ತು ಭಾರಿ ಕಲ್ಲುಗಳ ಕುಸಿತದಿಂದಾಗಿ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ನಂತರ ಗುರುವಾರ ರಾತ್ರಿ ಹೆದ್ದಾರಿಯನ್ನು ಏಕಮುಖ ಸಂಚಾರಕ್ಕಾಗಿ ಪುನಃ ತೆರೆಯಲಾಯಿತು. ಜುಲೈ 10 ರಂದು ಪ್ರತಿಕೂಲ ಹವಾಮಾನದಿಂದಾಗಿ ಜಮ್ಮುವಿನಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು ಮತ್ತು ಜುಲೈ 11 ರಂದು ಪುನರಾರಂಭಿಸಲಾಯಿತು.
ಜೂನ್ 29 ರಿಂದ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ 1,24,714 ಯಾತ್ರಾರ್ಥಿಗಳು ಅಮರನಾಥನ ದರ್ಶನಕ್ಕೆ ತೆರಳಿದ್ದಾರೆ. ಯಾತ್ರೆಯು ಆಗಸ್ಟ್ 11 ರಂದು ಮುಕ್ತಾಯಗೊಳ್ಳಲಿದೆ. ಯಾತ್ರೆಯ ಅವಧಿಯಲ್ಲಿ ಈವರೆಗೆ ಸುಮಾರು 50 ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಜುಲೈ 1 ರಂದು ಅಮರನಾಥ ದೇಗುಲದಲ್ಲಿ ಮೇಘಸ್ಫೋಟದಿಂದ ಉಂಟಾದ ಪ್ರವಾಹದಲ್ಲಿ 15 ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದರು.

ಯಾತ್ರಾರ್ಥಿಗಳ ಸೌಲಭ್ಯ ಪರಿಶೀಲನೆ ನಡೆಸಿದ ಅಧಿಕಾರಿಗಳು
ಪೂಂಚ್‌ನ ಮಂಡಿ ಪ್ರದೇಶದಲ್ಲಿ ನಡೆಯುವ ವಾರ್ಷಿಕ ಬಾಬಾ ಬುಧ ಅಮರನಾಥ ಯಾತ್ರೆಯ ವ್ಯವಸ್ಥೆಗಳನ್ನು ಪರಿಶೀಲಿಸಲು ಜಮ್ಮು ವಿಭಾಗೀಯ ಆಯುಕ್ತ ರಮೇಶ್ ಕುಮಾರ್ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಶುಕ್ರವಾರ ನಾಗರಿಕ ಸಮಾಜದ ಸದಸ್ಯರು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿದರು.
ಯಾತ್ರಾರ್ಥಿಗಳಿಗೆ ಭದ್ರತೆ, ಸಾರಿಗೆ ವ್ಯವಸ್ಥೆ, ಲ್ಯಾಂಗರ್‌ಗಳು, ವೈದ್ಯಕೀಯ ಸೌಲಭ್ಯಗಳು, ನೈರ್ಮಲ್ಯ, ನೀರು ಮತ್ತು ವಿದ್ಯುತ್ ಸರಬರಾಜು, ಸಂಚಾರ, ಯಾತ್ರಾರ್ಥಿಗಳ ವಸತಿ ಮತ್ತು ಬೋರ್ಡಿಂಗ್ ವ್ಯವಸ್ಥೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

12 ಸ್ಥಳಗಳಲ್ಲಿ ಯಾತ್ರಾರ್ಥಿಗಳು ತಂಗಲು ಅವಕಾಶ
ಪೂಂಚ್‌ನ ಉಪ ಆಯುಕ್ತರು, 4,000 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವಿರುವ ಸುಮಾರು 12 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ವಿಭಾಗೀಯ ಆಯುಕ್ತರಿಗೆ ತಿಳಿಸಿದರು. ಸಭೆಯಲ್ಲಿ ಪ್ರವಾಸೋದ್ಯಮ ನಿರ್ದೇಶಕ ವಿವೇಕಾನಂದ ರೈ, ಜಮ್ಮು ಉಪ ಆಯುಕ್ತ ಅವ್ನಿ ಲವಾಸಾ, ಪೊಲೀಸ್, ಸಂಚಾರ, ಆರೋಗ್ಯ, ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ಬಾಬಾ ಅಮರನಾಥ್ ಮತ್ತು ಬುಧಾ ಅಮರನಾಥ ಯಾತ್ರಿ ನಿಯಾಸ್ ಇತರರು ಉಪಸ್ಥಿತರಿದ್ದರು. ಪೂಂಚ್, ರಜೌರಿ ಮತ್ತು ರಿಯಾಸಿ ಉಪ ಕಮಿಷನರ್‌ಗಳು ಮತ್ತು ಎಸ್‌ಎಸ್‌ಪಿಗಳು ಸಭೆಯಲ್ಲಿ ಹಾಜರಿದ್ದರು.
ಎರಡು ವರ್ಷಗಳ ವಿರಾಮದ ನಂತರ ನಡೆಯಲಿರುವ ಯಾತ್ರೆಯು ಜುಲೈ 29 ರಂದು ಜಮ್ಮುವಿನ ಯಾತ್ರಿ ನಿವಾಸ ಭಗವತಿ ನಗರದಿಂದ ಪ್ರಾರಂಭವಾಗುತ್ತದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications