ಜಮ್ಮು-ಕಾಶ್ಮೀರದಲ್ಲಿ IED ಸ್ಫೋಟ, ಓರ್ವ ಸೈನಿಕ ಹುತಾತ್ಮ
ಶ್ರೀನಗರ, ಮೇ 22: ಜಮ್ಮು-ಕಾಶ್ಮೀರದ ಪೂಂಚ್ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಸಿಡಿಸಿದ ಕಾರಣ ಓರ್ವ ಸೈನಿಕ ಹುತಾತ್ಮರಾಗಿದ್ದಾರೆ.
ಗಡಿನಿಯಂತ್ರಣ ರೇಖೆ ಬಳಿಯ ಮೆಂದರ್ ಎಂಬಲ್ಲಿ ಐಇಡಿ ಸ್ಫೋಟಗೊಂಡಿದ್ದು, ಐವರು ಸೈನಿಕರು ಗಾಯಗೊಂಡಿದ್ದಾರೆ. ಸ್ಫೋಟದ ಕುರಿತು ಹೆಚ್ಚಿನಮಾಹಿತಿ ಲಭ್ಯವಾಗಬೇಕಿದೆ.
ಬುಧವಾರ ಬೆಳಿಗ್ಗೆಯಷ್ಟೇ, ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲಪೊರ ಎಂಬಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿತ್ತು.

ಭಾರತೀಯ ಸೇನೆಯೆ 34 ಆರ್ ಆರ್ ಮತ್ತು ಎಸ್ ಒಗಿ ತಂಡಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಆದರೆ ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಣಿವೆ ರಾಜ್ಯದಲ್ಲಿ ಐಇಡಿ ಸ್ಫೋಟವಾಗಿದೆ.












Click it and Unblock the Notifications