ಜಮ್ಮು ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ವಾಹನದ ಬಳಿ ಕಾರು ಸ್ಫೋಟ

ಜಮ್ಮು ಮತ್ತು ಕಾಶ್ಮೀರ, ಮಾರ್ಚ್ 30: ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಫೋಟ ಸಂಭವಿಸಿದೆ.

A blast has occurred in a car near CRPF vehicle in Banihal Ramban

ಜಮ್ಮು ಹೆದ್ದಾರಿಯ ಬನಿಹಾಲ್ ಬಳಿ ಘಟನೆ ಸಂಭವಿಸಿದೆ. ಸಿಆರ್‌ಪಿಎಫ್ ವಾಹನ ಬಳಿ ಕಾರಿನಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿದ್ದು, ಕಾರು ಛಿದ್ರ ಛಿದ್ರವಾಗಿದೆ.

ಪುಲ್ವಾಮಾ ಮಾದರಿ ದಾಳಿ ನಡೆಸಲು ಉಗ್ರರು ಯತ್ನಿಸಿದ್ದಾರೇನೋ ಎನ್ನುವ ಅನುಮಾನ ವ್ಯಕ್ತವಾಗಿದೆ. ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸಿಆರ್‌ಪಿಎಫ್ ವಾಹನದ ಸ್ವಲ್ಪವೇ ದೂರದಲ್ಲಿ ಸ್ಫೋಟ ಸಂಭವಿಸಿದೆ.

ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದಾಳಿಗೆ ಸಂಚು ನಡೆದಿತ್ತೇ ಎನ್ನುವ ಅನುಮಾನ ಮೂಡಿದೆ.
ಸಿಆರ್‌ಪಿಎಫ್ ವಾಹನದಿಂದ ಸ್ವಲ್ಪವೇ ಸ್ವಲ್ಪ ದೂರದಲ್ಲಿ ಕಾರು ಸ್ಫೋಟಗೊಂಡಿದೆ.

ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದರೂ ಚಾಲಕ ಪರಾರಿಯಾಗಿರುವುದನ್ನು ಗಮನಿಸಿದಾಗ ಸಂಶಯ ಮೂಡುತ್ತದೆ.

ಕಾರಿನಲ್ಲಿರುವ ಸಿಲಿಂಡರ್ ಸ್ಫೋಟಗೊಂಡಿದೆ. ಇದರ ಹಿಂದೆ ಉಗ್ರರ ಕೈವಾಡವಿದ್ದಂತೆ ತೋರುತ್ತಿಲ್ಲ ಎನ್ನುವ ಮಾಹಿತಿಯೂ ಕೂಡ ಲಭ್ಯವಾಗಿದೆ. ಆದರೆ ಪುಲ್ವಾಮಾದಲ್ಲಿ ನಡೆದ ದಾಳಿ ಬಳಿಕ ಯೋಧರು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ.

ಸಿಆರ್‌ಪಿಎಫ್ ವಾಹನದಲ್ಲಿ ಯೋಧರು ಎಷ್ಟು ಮಂದಿ ಇದ್ದರು, ಅಥವಾ ವಾಹನ ಖಾಲಿ ಚಲಿಸುತ್ತಿತ್ತೇ ಎನ್ನುವ ಕುರಿತು ಮಾಹಿತಿ ಇನ್ನೂ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+