ಜಮ್ಮು ಕಾಶ್ಮೀರದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ

ಶ್ರೀನಗರ, ಮೇ 29: ಜಮ್ಮು ಕಾಶ್ಮೀರದಲ್ಲಿ ಇಬ್ಬರು ಶಂಕಿತ ಉಗ್ರರರನ್ನು ಭಾರತೀಯ ಸೇನೆ ಬಂಧಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಜಮ್ಮುವಿನ ರತ್ನುಚಕ್ ಸನಾ ಕ್ಯಾಂಪ್ ಬಳಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.

ಬಂಧಿತರ ಬ್ಯಾಗ್ ನಲ್ಲಿ ಮಿಲಿಟರಿ ಬೇಸ್ ಮ್ಯಾಪ್ ಮತ್ತು ಫೋಟೋಗಳುಇನ್ನು ಬಂಧಿತ ಶಂಕಿತ ಉಗ್ರರ ಬ್ಯಾಗ್ ನಲ್ಲಿ ರತ್ನಚುಕ್ ಸೇನಾ ಕ್ಯಾಂಪ್ ನ ಮ್ಯಾಪ್ ಮತ್ತು ಫೋಟೋಗಳು ಲಭ್ಯವಾಗಿವೆ ಎನ್ನಲಾಗಿದೆ. ಇದಲ್ಲದೆ ಕೆಲ ವಿಡಿಯೋಗಳೂ ಕೂಡ ಲಭ್ಯವಾಗಿದ್ದು, ಈ ವಿಡಿಯೋ ಮತ್ತು ಫೋಟೋಗಳನ್ನು ಶಂಕಿತರು ಪಾಕಿಸ್ತಾನಕ್ಕೆ ರವಾನೆ ಮಾಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಗೆಯೇ ಇಬ್ಬರೂ ಬಂಧಿತರಿಂದ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಇಬ್ಬರೂ ಇತ್ತೀಚೆಗಷ್ಟೇ ಪಾಕಿಸ್ತಾನ ಮೂಲದ ವ್ಯಕ್ತಿಯೊಂದಿಗೆ ಮಾತನಾಡಿರುವ ಮತ್ತು ಪಾಕ್ ಮೂಲದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ.

2 detained near military station in Ratnuchak of Jammu and kashmir

ಸೇನಾ ಕ್ಯಾಂಪ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ. ಇನ್ನು ಬಂಧಿತರು ರತ್ನುಚಕ್ ಸೇನಾ ಕ್ಯಾಂಪ್ ಅನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಹೀಗಾಗಿ ಅನುಮಾನಗೊಂಡ ಭದ್ರತಾ ಪಡೆಗಳು ಅವರನ್ನು ಬಂಧಿಸಿ ರಹಸ್ಯ ಪ್ರದೇಶದಲ್ಲಿ ತೀವ್ರ ವಿಚಾರಣೆಗೊಳಪಡಿಸಿದೆ. ಇನ್ನು ಬಂಧಿತರನ್ನು ಕಥುವಾ ನಿವಾಸಿ ಮುಷ್ತಾಕ್ ಅಹ್ಮದ್ ಮತ್ತು ರಜೌರಿ ನಿವಾಸಿಯಾದ ನಸೀಮ್ ಅಖ್ತರ್ ಎಂದು ಗುರುತಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+