WPL 2026 RCB: ಉದ್ಘಾಟನಾ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ 11 ಭವಿಷ್ಯ
WPL 2026 RCB: ಕೆಲವೇ ದಿನಗಳಲ್ಲಿ ಡಬ್ಲ್ಯೂಪಿಎಲ್ 2026 ಹಬ್ಬ ಆರಂಭವಾಗಲಿದೆ. ಉದ್ಘಾಟನಾ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ. ಹಾಗಾದ್ರೆ, ಸ್ಮೃತಿ ಮಂದಾನ ನಾಯಕತ್ವದ ಬೆಂಗಳೂರು ತಂಡ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಡಬ್ಯೂಪಿಎಲ್ 2026ರ ಆವೃತ್ತಿ ಜನವರಿ 9ರಿಂದ ಪ್ರಾರಂಭವಾಗಲಿದೆ. ನವಿ ಮುಂಬೈನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಸ್ಮೃತಿ ಮಂದಾನ ನೇತೃತ್ವದ ಆರ್‌ಸಿಬಿಯು ಹಾಲಿ ಚಾಂಪಿಯನ್ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಆವೃತ್ತಿಯಲ್ಲಿ ಆರ್‌ಸಿಬಿಯ ಪಂದ್ಯಗಳು ನವಿ ಮುಂಬೈ ಮತ್ತು ವಡೋದರದಲ್ಲಿ ನಡೆಯಲಿವೆ.

ಕಳೆದ ಬಾರಿ ಅಂದರೆ 2025ರಲ್ಲಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಟ್ರೋಫಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದೆ. 2024ರಲ್ಲಿ ಚಾಂಪಿಯನ್ ಆಗಿದ್ದ ಆರ್‌ಸಿಬಿಯು ಕಳೆದ ಬಾರಿ ಸೋಲನುಭವಿಸಿ ಹೊರಗುಳಿಯುವ ಮೂಲಕ ಟ್ರೋಫಿಗೆ ಮುತ್ತಿಡುವಲ್ಲಿ ವಿಫಲವಾಯಿತು. ಈ ಬಾರಿ ಕಪ್ ಎತ್ತಲೇಬೇಕು ಎನ್ನುವ ಹಠದಲ್ಲಿದೆ. ಹಾಗಾದ್ರೆ, ಈ ಬಾರಿ ಆರ್‌ಸಿಬಿ ತಂಡ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆರ್‌ಸಿಬಿ ತಂಡ: ಸ್ಮೃತಿ ಮಂದಾನ (ನಾಯಕಿ), ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ಲಾರೆನ್ ಬೆಲ್, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಅರುಂಧತಿ ರೆಡ್ಡಿ, ರಾಧಾ ಯಾದವ್, ನಡಿನ್ ಡಿ ಕ್ಲರ್ಕ್, ಜಾರ್ಜಿಯಾ ವೋಲ್, ಲಿನ್ಸೆ ಸ್ಮಿತ್, ದಯಾಲನ್ ಹೇಮಲತಾ, ಪ್ರೇಮಾ ರಾವತ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11: ಸ್ಮೃತಿ ಮಂಧಾನ (ನಾಯಕಿ), ಜಾರ್ಜಿಯಾ ವೋಲ್, ಎಲ್ಲಿಸ್ ಪೆರ್ರಿ, ಗ್ರೇಸ್ ಹ್ಯಾರಿಸ್, ರಿಚಾ ಘೋಷ್ (ವಿಕೆಟ್ ಕೀಪರ್), ನಾಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ಶ್ರೇಯಾಂಕ ಪಾಟೀಲ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಲಾರೆನ್ ಬೆಲ್.
ಎರಡು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ 2026ರ ಆವೃತ್ತಿಗೆ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. "ಈ ಜೆರ್ಸಿ ಮುಂಬೈನ ಜನರು ಮತ್ತು ನಾಡಿಮಿಡಿತಕ್ಕೆ ಗೌರವವಾಗಿದೆ. ಇದು ಕೇವಲ ಕಿಟ್‌ಗಿಂತ ಹೆಚ್ಚಿನದಾಗಿದೆ. ಇದು ನಮ್ಮ ನಗರದ ಚೈತನ್ಯ, ಅದರ ಶಕ್ತಿಯ ಪ್ರತಿಬಿಂಬವಾಗಿದೆ," ಎಂದು ಜೆರ್ಸಿ ಅನಾವರಣ ಸಮಾರಂಭದಲ್ಲಿ ಮುಂಬೈ ಇಂಡಿಯನ್ಸ್ ವಕ್ತಾರರು ಹೇಳಿದರು. ಹಾಗಾದ್ರೆ ಈ ಬಾರಿ ಮುಂಬೈ ಇಂಡಿಯನ್ಸ್ ತಂಡ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ
ಮುಂಬೈ ಇಂಡಿಯನ್ಸ್ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್, ಹೇಲಿ ಮ್ಯಾಥ್ಯೂಸ್, ನಲ್ಲ ಕ್ರಾಂತಿ ರೆಡ್ಡಿ, ನಟಾಲಿ ಸ್ಕಿವರ್, ನಿಕೋಲಾ ಕ್ಯಾರಿ, ಪೂನಂ ಖೇಮ್ನಾರ್, ಸಜೀವನ್ ಸಜನಾ, ಸಂಸ್ಕೃತಿ ಗುಪ್ತಾ, ತ್ರಿವೇಣಿ ವಸಿಷ್ಠ, ಜಿ.ಕಮಲಿನಿ (ವಿಕೆಟ್ ಕೀಪರ್), ರಹಿಲಾ ಫಿರ್ದೌಸ್ (ವಿಕೆಟ್ ಕೀಪರ್), ಮಿಲ್ಲಿ ಇಲಿಂಗ್‌ವರ್ತ್, ಸೈಕಾ ಇಶಾಕ್, ಸುಬ್ನಿಮ್ ಇಸ್ಮಾಯಿಲ್.
ಒಟ್ಟಿನಲ್ಲಿ ಹೇಳುವುದಾದರೆ, ಈ ಬಾರಿ ಡಬ್ಲ್ಯೂಪಿಎಲ್ ಟ್ರೋಫಿ ಗೆಲ್ಲುವ ಸಾಲಿನಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಂಚೂಣಿಯಲ್ಲಿವೆ. ಅದಲ್ಲೂ ಕಳೆದ ಬಾರಿ ಸೋಲನುಭವಿಸಿ ಹೊರಬಿದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಈ ಬಾರಿ ಟ್ರೋಫಿ ಗೆದ್ದೇ ಗೆಲ್ಲಬೇಕು ಎಂದು ಪಣತುಟ್ಟು ನಿಂತಿದೆ. ಈ ಬಾರಿ ಉದ್ಘಾಟನಾ ಪಂದ್ಯ ಜನವರಿ 9ರಂದು ಮುಂಬೈನಲ್ಲಿ ನಡೆಯಲಿದ್ದು, ಈ ಕ್ಷಣಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
-
Nandini: ಆರ್‌ಸಿಬಿ ಜೊತೆ ರಾರಾಜಿಸಲಿದೆ ನಮ್ಮ ಹೆಮ್ಮೆಯ 'ನಂದಿನಿ': ಐಪಿಎಲ್-2026ರಲ್ಲಿ ಕನ್ನಡಿಗರಿಗೆ ಡಬಲ್ ಧಮಾಕಾ -
RCB Yash Dayal: ಐಪಿಎಲ್ 2026ರ ಸೀಸನ್ನಿಂದ ಸ್ಟಾರ್ ವೇಗಿ ಯಶ್ ದಯಾಳ್ ಔಟ್; ಆರ್‌ಸಿಬಿ ಅಧಿಕೃತ ಮಾಹಿತಿ -
ಐಪಿಎಲ್ಗೂ ಮುನ್ನ ಆರ್‌ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Ananya Birla: ಆರ್‌ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ಐಪಿಎಲ್ ಇತಿಹಾಸದಲ್ಲೇ ಆರ್‌ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
IPL 2026: ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯ, ಮಾರ್ಚ್ 28ಕ್ಕೆ ಬೆಂಗಳೂರಿನ ಯಾವ ರಸ್ತೆಗಳೆಲ್ಲ ಬಂದ್ ಆಗಲಿದೆ? ಇಲ್ಲಿದೆ ಮಾಹಿತಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ












Click it and Unblock the Notifications