Women’s T20 Asia Cup: S,S,S ಮಿಂಚಿಂಗ್‌.. 64, 3,2,2.. ಬಾಂಗ್ಲಾ ಮಣಿಸಿ ಫೈನಲ್‌ ಪ್ರವೇಶಿಸಿದ ಟೀಮ್ ಇಂಡಿಯಾ

India vs Bangladesh: ದುಬೈನಲ್ಲಿ ಗುರುವಾರ (ಸೆಪ್ಟೆಂಬರ್ 10) ನಡೆದ ಮಹಿಳಾ ಟಿ20 ಏಷ್ಯಾಕಪ್ 2026ರ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವು ಬಾಂಗ್ಲಾದೇಶದ ವಿರುದ್ಧ 40 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿತು. ಹಾಗಾದ್ರೆ ಈ ಗೆಲುವಿನ ಪ್ರಮುಖ ರೂವಾರಿಗಳು ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆಯೇ ಮೊದಲು ಬ್ಯಾಟಿಂಗ್‌ಗಿಳಿದ ಭಾರತ ತಂಡವು ಶಫಾಲಿ ವರ್ಮಾ ಅವರ ಆಕ್ರಮಣಕಾರಿ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 149 ರನ್‌ ಪೇರಿಸಿತು. ಆದರೆ 150 ರನ್‌ಗಳ ಸಾಧಾರಣ ಗುರಿಯನ್ನು ಮುಟ್ಟುವಲ್ಲಿ ವಿಫಲವಾದ ಬಾಂಗ್ಲಾ ಸೋಲನುಭವಿಸಿ ಅಧಿಕೃತವಾಗಿ ಟೂರ್ನಿಯಿಂದ ಹೊರನಡೆಯಿತು.

Women s T20 Asia Cup 2026 India Beat Bangladesh by 40 Runs Enters Final on September 10 in Dubai

ಫೈನಲ್‌ ಪ್ರವೇಶಿಸಿದ ಭಾರತ

ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್‌ಪ್ರೀತ್ ಕೌರ್ ಪಡೆ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು. ನಂತರ ಬಾಂಗ್ಲಾದೇಶವನ್ನು 109/7 ರನ್‌ಗಳಿಗೆ ಕಟ್ಟಿಹಾಕಿ ಫೈನಲ್‌ ಪ್ರವೇಶ ಮಾಡಿತು.

ಅಬ್ಬರಿಸಿದ ಶಫಾಲಿ ವರ್ಮಾ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತಕ್ಕೆ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಬಾಂಗ್ಲಾದೇಶದ ಫೀಲ್ಡಿಂಗ್ ತಪ್ಪುಗಳ ಲಾಭ ಪಡೆದು ನೆರವಾದರು. ನಾಲ್ಕು ಜೀವದಾನಗಳ ಅವಕಾಶಗಳನ್ನ ಸರಿಯಾಗಿ ಬಳಸಿಕೊಂಡ ಅವರು 40 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ನೆರವಿನಿಂದ (ಅರ್ಧಶತ) 64 ರನ್ ಬಾರಿಸಿದರು. ಮೂರು ಕ್ಯಾಚ್ ಡ್ರಾಪ್ ಮತ್ತು ಸುಲಭ ರನ್-ಔಟ್‌ನಿಂದ ಪಾರಾದ ಶಫಾಲಿ ಕೇವಲ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಅವಕಾಶಗಳನ್ನ ಸದುಪಯೋಗಪಡಿಸಿಕೊಂಡ ಶಫಾಲಿ

ಬಾಂಗ್ಲಾದೇಶದ ಫೀಲ್ಡರ್‌ಗಳು ಶಫಾಲಿಗೆ ಬರೋಬ್ಬರಿ ನಾಲ್ಕು ಅವಕಾಶಗಳನ್ನು (ಮೂರು ಕ್ಯಾಚ್ ಡ್ರಾಪ್ ಮತ್ತು ಒಂದು ಸುಲಭ ರನ್-ಔಟ್ ಚಾನ್ಸ್) ನೀಡಿ ದೊಡ್ಡ ತಪ್ಪು ಮಾಡಿದರು. 6, 11 ಹಾಗೂ 56 ರನ್‌ಗಳಿದ್ದಾಗ ಬಾಂಗ್ಲಾ ತಂಡ ಶಫಾಲಿ ಅವರ ಕ್ಯಾಚ್‌ಗಳನ್ನು ಕೈಚೆಲ್ಲಿತು. ಈ ಜೀವದಾನಗಳ ಸಂಪೂರ್ಣ ಲಾಭ ಪಡೆದ ಶಫಾಲಿ 160ರ ಸ್ಟ್ರೈಕ್ ರೇಟ್‌ನಲ್ಲಿ ಅಬ್ಬರಿಸಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು.

ಭಾರತದ ಪರ ಯಾರು ಎಷ್ಟು ರನ್‌ ಗಳಿಸಿದರು?

ಭಾರತ ಪವರ್‌ಪ್ಲೇ ಅವಧಿಯಲ್ಲಿ 45 ರನ್ ಗಳಿಸಿ ಉತ್ತಮ ಆರಂಭ ಕಂಡಿತಾದರೂ, ಮಧ್ಯಮ ಓವರ್‌ಗಳಲ್ಲಿ ರನ್ ವೇಗ ಹೆಚ್ಚಿಸಲು ಪರದಾಡಿತು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪತ್ರಿಕಾ ರಾವಲ್ 24 ಎಸೆತಗಳಲ್ಲಿ 20 ರನ್ ಕಲೆಹಾಕಿದರೆ, ರಿಚಾ ಘೋಷ್ 21 ರನ್ ಸೇರಿಸಿದರು. ಸ್ಪಿನ್ನರ್‌ಗಳ ವಿರುದ್ಧ ಕಷ್ಟಪಡುತ್ತಿದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್ ಇನಿಂಗ್ಸ್‌ನ ಕೊನೆಯಲ್ಲಿ ಎರಡು ಪ್ರಮುಖ ಸಿಕ್ಸರ್‌ಗಳನ್ನು ಸಿಡಿಸಿ 28 ಎಸೆತಗಳಲ್ಲಿ 24 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು, ಇದು ತಂಡ 149 ರನ್‌ಗಳ ಗಡಿ ತಲುಪಲು ನೆರವಾಯಿತು

ಭಾರತದ ಬೌಲಿಂಗ್ ದಾಳಿಗೆ ಬಾಂಗ್ಲಾ ತತ್ತರ

ಬಳಿಕ ರನ್ ಚೇಸಿಂಗ್ ವೇಳೆ ಟೀಮ್ ಇಂಡಿಯಾದ ಸ್ಪಿನ್ನರ್‌ಗಳು ಪಂದ್ಯದ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಟೀಮ್ ಇಂಡಿಯಾದ ಸ್ಪಿನ್ನರ್‌ಗಳ ಶಿಸ್ತುಬದ್ಧ ಬೌಲಿಂಗ್‌ ದಾಳಿಗೆ ಬಾಂಗ್ಲಾದೇಶವು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 109 ರನ್ ಗಳಿಸಲಷ್ಟೇ ಶಕ್ತವಾಯಿತು.

ಟೀಮ್ ಇಂಡಿಯಾ ಗೆಲುಗೆ ಕಾರಣಕರ್ತೆಯರು..

150 ರನ್‌ಗಳ ಜಯದ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ. ಆರಂಭಿಕ ಆಟಗಾರ್ತಿಯರಾದ ಜುವೈರಿಯಾ ಫರ್ದೌಸ್ 14(18) ಮತ್ತು ದಿಲಾರಾ ಅಕ್ತರ್ 21(26) ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಭಾರತೀಯ ಸ್ಪಿನ್ನರ್‌ಗಳು ನಿಧಾನಗತೊಯ ಪಿಚ್‌ನ ಪೂರ್ಣ ಲಾಭ ಪಡೆದು ಎದುರಾಳಿ ರನ್ ವೇಗಕ್ಕೆ ಸಂಪೂರ್ಣ ತಡೆ ಒಡ್ಡಿದರು. ದೀಪ್ತಿ ಶರ್ಮಾ 26 ರನ್ ನೀಡಿ 3 ವಿಕೆಟ್ ಕಬಳಿಸಿದರೆ ಬಾಂಗ್ಲಾದ ಬೆನ್ನೆಲುಬು ಮುರಿದರು. ಅವರಿಗೆ ಉತ್ತಮ ಸಾಥ್ ನೀಡಿದ ನಂದನಿ ಶರ್ಮಾ 2, ಶ್ರೀ ಚರಣಿ ಹಾಗೂ ಪ್ರೇಮಾ ರಾವತ್ ತಲಾ 1 ವಿಕೆಟ್‌ ಪಡೆದು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಏಷ್ಯಾ ಕಪ್ ಇತಿಹಾಸದಲ್ಲಿ ಈಗಾಗಲೇ 7 ಬಾರಿ ಚಾಂಪಿಯನ್ ಆಗಿರುವ ಭಾರತೀಯ ಮಹಿಳಾ ತಂಡವು ಮತ್ತೊಮ್ಮೆ ತನ್ನ ಪ್ರಾಬಲ್ಯ ಮೆರೆದಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+