Get Updates
Get notified of breaking news, exclusive insights, and must-see stories!

Condoms Winter Olympics: ಚಳಿಗಾಲದ ಒಲಿಂಪಿಕ್ಸ್‌ 2026: ಮಿಲನ್​ನಲ್ಲಿ 3 ದಿನದಲ್ಲಿ 10,000 ಕಾಂಡೋಮ್ ಖಾಲಿ

Condoms Winter Olympics: ಇಟಲಿಯ ಮಿಲನ್‌ನಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆಯುತ್ತಿದ್ದು, ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಹೊಸ ಹಾಗೂ ವಿಚಿತ್ರವಾದ ಸಮಸ್ಯೆಯೊಂದು ಎದುರಾಗಿದ್ದು, ಇದು ಜನರ ಗಮನ ಸೆಳೆಯುತ್ತಿದೆ. ಒಲಿಂಪಿಕ್ಸ್‌ನಲ್ಲಿ ಪ್ರತಿ ಬಾರಿಯೂ ಈ ವಿಷಯಕ್ಕೆ ಸಮಸ್ಯೆ ಅಥವಾ ಹೆಚ್ಚು ಚರ್ಚೆ ಆಗುವುದು ಇದೆ. 2026ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ 92 ದೇಶಗಳಿಂದ 2,800ಕ್ಕೂ ಹೆಚ್ಚು ಕ್ರೀಡಾಪಟುಗಳು 116 ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ರೀತಿ ಇರುವಾಗಲೇ ಹೊಸದೊಂದು ತಲೆನೋವು ಶುರುವಾಗಿದೆ. ಅದೇ ಕಾಂಡೋಮ್ ಸಮಸ್ಯೆ ಆಗಿರುವುದು.

ಇಟಲಿಯ ಮಿಲನ್​ನಲ್ಲಿ ಮಿಲನ ಹಬ್ಬ ಶುರುವಾಗಿದೆ ಅಂತಲೇ ಹೇಳಲಾಗುತ್ತಿದೆ. 2026ರ ಮಿಲನ್ ಕೊರ್ಟಿನಾ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಯಾರೂ ಅಂದಾಜು ಮಾಡದ ಸಮಸ್ಯೆಯೊಂದು ಎದುರಾಗಿದೆ. ಸ್ಪರ್ಧೆಯ ಮೊದಲ ಕೆಲವ ಮೂರು ದಿನಗಳಲ್ಲಿ ಕ್ರೀಡಾಪಟುಗಳು ಇರುವ ಪ್ರದೇಶದಲ್ಲಿ ಉಚಿತ ಕಾಂಡೋಮ್‌ಗಳು ಖಾಲಿಯಾಗುತ್ತಿವೆ. ಮೊದಲ ಹಂತದಲ್ಲಿ ಹಂಚಿಕೆ ಮಾಡಲಾಗಿದ್ದ 10,000 ಪ್ಯಾಕ್‌ಗಳ ಕಾಂಡೋಮ್ ಆರಂಭಿಕ ಸ್ಟಾಕ್ ಬೇಗನೆ ಖಾಲಿಯಾಗಿದೆ. ಅಧಿಕಾರಿಗಳು ಅನಿರೀಕ್ಷಿತ ಕಾಂಡೋಮ್ ಕೊರತೆಯನ್ನು ನೀಗಿಸಲು ಪರದಾಡುತ್ತಿದ್ದಾರೆ.

Winter Olympics 2026 10 000 Condoms Vanish in Just 3 Days at Milan Athletes Village

Condoms Winter Olympics: 10,000 ಕಾಂಡೋಮ್‌ ಖಾಲಿ

ಒಲಿಂಪಿಕ್ಸ್‌ ನಡೆಯುತ್ತಿರುವ ಪ್ರದೇಶದಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಒಲಿಂಪಿಕ್ಸ್‌ನಲ್ಲಿ ಸಾಮಾನ್ಯವಾಗಿ ಹೊಸ ವಿಶ್ವ ದಾಖಲೆಗಳನ್ನು ಮುರಿಯುವುದು ಮತ್ತು ಸೃಷ್ಟಿಸುವುದು ಸಾಮಾನ್ಯ ಸಂಗತಿ. ಆದರೆ, ಅದು ಕ್ರೀಡೆಯ ವಿಚಾರದಲ್ಲಿ ಆಗದೆ ಕಾಂಡೋಮ್‌ ವಿಚಾರದಲ್ಲಿ ಆಗುತ್ತಿದೆ ಎಂದು ನೆಟ್ಟಿಗರು ಹಾಸ್ಯ ಮಾಡಿದ್ದಾರೆ. ಇಟಲಿಯ ಮಿಲನ್-ಕೊರ್ಟಿನಾ 2026ರ ಚಳಿಗಾಲದ ಕ್ರೀಡಾಕೂಟದಲ್ಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟ ಪ್ರಾರಂಭವಾದ ಮೂರು ದಿನಗಳಲ್ಲೇ ಸಂಗ್ರಹವಾಗಿದ್ದ ಎಲ್ಲಾ ಕಾಂಡೋಮ್‌ಗಳು ಸಹ ಖಾಲಿಯಾಗಿವೆ. ಸಂಘಟಕರು ಕ್ರೀಡಾಪಟುಗಳಿಗೆ ಒದಗಿಸಿದ್ದ ಎಲ್ಲಾ 10,000 ಉಚಿತ ಕಾಂಡೋಮ್‌ಗಳು ಖಾಲಿಯಾಗಿವೆ ಎಂದು ವರದಿಯಾಗಿದೆ.

ಸಾಮಾನ್ಯವಾಗಿ ಒಲಿಂಪಿಕ್ಸ್‌ ಕ್ರೀಡೆ ನಡೆಯುವ ಸಂದರ್ಭಗಳಲ್ಲಿ ಕಾಂಡೋಮ್ ಬಳಕೆ ಹೆಚ್ಚಾಗುವುದು ಅಥವಾ ಬೇಡಿಕೆ ಹೆಚ್ಚಾಗುವುದು ಇದೆ. ಆದರೆ ಇದೇ ಮೊದಲ ಬಾರಿ ಎನ್ನುವಂತೆ ಕ್ರೀಡಾಕೂಟ ಪ್ರಾರಂಭವಾದ ಕೇವಲ ಮೂರು ದಿನಗಳಲ್ಲಿ ಕಾಂಡೋಮ್ ಸಂಪೂರ್ಣವಾಗಿ ಖಾಲಿಯಾಗಿವೆ ಎನ್ನುವ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ. ಕ್ರೀಡಾಪಟುಗಳು ಕಾಂಡೋಮ್ ಕೊರತೆಯ ಬಗ್ಗೆ ದೂರು ನೀಡಿದ್ದರಿಂದಾಗಿ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಲಾಗಿದೆ.

ಇಟಲಿಯ ಮಿಲನ್‌ನಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆಯುತ್ತಿದೆ. ಫೆಬ್ರವರಿ 6 ರಂದು ಪ್ರಾರಂಭವಾದ ಮಿಲನ್ - ಕೊರ್ಟಿನಾ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು 10,000 ಕಾಂಡೋಮ್‌ಗಳನ್ನು ಖರೀದಿಸಿದ್ದಾರೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ದೃಢಪಡಿಸಿದೆ. 2,800 ಕ್ರೀಡಾಪಟುಗಳಿಗೆ 10,000 ಬಳಸಲಾಗಿದೆ. 2026ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ 92 ದೇಶಗಳಿಂದ 2,800 ಕ್ಕೂ ಹೆಚ್ಚು ಕ್ರೀಡಾಪಟುಗಳು 116 ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಲ್ಲಾ ಸ್ಪರ್ಧಿಗಳಲ್ಲಿ 47% ಮಹಿಳೆಯರು ಇದ್ದಾರೆ. ಇದು ಚಳಿಗಾಲದ ಕ್ರೀಡಾಕೂಟದ ಇತಿಹಾಸದಲ್ಲಿ ಅತ್ಯಧಿಕ ಶೇಕಡಾವಾರು ಪ್ರಮಾಣವಾಗಿದೆ ಎಂದು ಹೇಳಲಾಗಿದೆ.

ಇನ್ನಷ್ಟು ಕಾಂಡೋಮ್ ಬೇಡಿಕೆ ನಿರೀಕ್ಷೆ

ಇನ್ನು ಈ ಬಾರಿಯು ಚಳಿಗಾಲದ ಒಲಂಪಿಕ್ಸ್‌ನಲ್ಲಿ ಕ್ರೀಡಾಕೂಟ ಮುಕ್ತಾಯವಾಗುವುದರ ಒಳಗೆ ಇನ್ನಷ್ಟು ಕಾಂಡೋಮ್‌ಗಳ ಬೇಡಿಕೆ ಬರುವ ನಿರೀಕ್ಷೆ ಇದೆ ಎಂದೂ ಹೇಳಲಾಗಿದೆ. ಎರಡು ವಾರಗಳಿಗಿಂತ ಹೆಚ್ಚು ಸ್ಪರ್ಧೆ ಉಳಿದಿರುವುದರಿಂದ ಹೆಚ್ಚುವರಿ ಕಾಂಡೋಮ್‌ಗಳನ್ನು ಸರಬರಾಜು ಮಾಡುವ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಸಂಘಟಕರು ಮುಂದಾಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಈ ಬಾರಿ ಕ್ರೀಡಾಕೂಟಕ್ಕಿಂತಲೂ ಈ ವಿಚಾರ ಭಾರೀ ಗಮನ ಸೆಳೆದಿದೆ.

ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

ಇನ್ನು ಈ ವಿಚಾರವು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಟ್ರೋಲ್‌ಗಳ ಸುರಿಮಳೆ ಶುರುವಾಗಿದೆ. ಕ್ರೀಡಾಕೂಟಕ್ಕಿಂತಲೂ ಈ ವಿಚಾರವೇ ಹೆಚ್ಚು ಸದ್ದು ಮಾಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+