ಯುಎಇ ಮೂಲದ ಯಶ್ ರಾಜ್ ಪುಂಜಾಗಿದೆ ಕರ್ನಾಟಕದ ನಂಟು; ಇಲ್ಲಿದೆ ಆರ್‌ಆರ್‌ ಸೇರಿದ ಹೊಸ ಪ್ರತಿಭೆಯ ರೋಚಕ ಕಥೆ

Yash Raj Punja: ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಮೊದಲಿನಿಂದಲೂ ಹೊಸ ಪ್ರತಿಭೆಗಳನ್ನು ಹುಡುಕಿ ಹೊರತರುವಲ್ಲಿ ಹೆಸರುವಾಸಿಯಾಗಿದೆ. ಆ ಪಟ್ಟಿಗೆ ಈಗ ಸೇರ್ಪಡೆಯಾಗಿರುವ ಹೊಸ ಹೆಸರು ಯಶ್ ರಾಜ್ ಪುಂಜಾ. ಮೂಲತಃ ಅಬುಧಾಬಿಯವರಾದ ಇವರಿಗೆ ಕರ್ನಾಟಕದ ನಂಟಿದೆ. ಹಾಗಾದ್ರೆ ಈ ಆಟಗಾರನ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಐಪಿಎಲ್‌ 2026ರ ಮಿನಿ ಹರಾಜಿನ ವೇಳೆ ಈ ಯುವ ಲೆಗ್ ಸ್ಪಿನ್ನರ್ ಅನ್ನು ರಾಜಸ್ಥಾನ್ ರಾಯಲ್ಸ್ ತಂಡವು 30 ಲಕ್ಷ ರೂಪಾಯಿಗಳಿಗೆ ಖರೀದಿ ಮಾಡಿತ್ತು. ಇವರುವ ಮೂಲತಃ ಅಬುಧಾಬಿಯಲ್ಲಿ ಜನಿಸಿದವರಾಗಿದ್ದರೂ ಸಹ, ಇದುವರೆಗೆ ಯಾವುದೇ ಹಂತದಲ್ಲಿ ಯುಎಇ ತಂಡವನ್ನು ಪ್ರತಿನಿಧಿಸಿಲ್ಲ.

Who is Yash Raj Punja Rajasthan royals s New IPL 2026 Leg-Spin Talent from Abu Dhabi Know details

ಮತ್ತೊಬ್ಬ ಹೊಸ ಪ್ರತಿಭೆ ಪರಿಚಯಿಸಿದ ಆರ್‌ಆರ್‌

ಯಾವುದೇ ಅಂತಾರಾಷ್ಟ್ರೀಯ ಪಂದ್ಯದ ಅನುಭವವಿಲ್ಲದಿದ್ದರೂ, ಅವರ ವಿಶಿಷ್ಟ ಬೌಲಿಂಗ್ ಶೈಲಿ ಮತ್ತು ಕೌಶಲ್ಯವನ್ನು ಗುರುತಿಸಿದ ಆರ್‌ಆರ್ ಫ್ರಾಂಚೈಸಿ ಅವರಿಗೆ ಮನ್ನಣೆ ನೀಡಿದೆ. ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ರಾಜಸ್ಥಾನ್ ರಾಯಲ್ಸ್‌ನ ಈ ನಿರ್ಧಾರವು ಮತ್ತೊಬ್ಬ ಯುವ ತಾರೆಯನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಲು ಮುಂದಾಗಿದೆ.

ಯಶ್ ರಾಜ್ ಪುಂಜಾಗೆ ಆಸರೆಯಾದ ಸಹೋದರ

ಯಶ್ ರಾಜ್ ಪುಂಜಾ ಅವರ ಕ್ರಿಕೆಟ್‌ ಬದುಕಿಗೆ ಆಸರೆಯಾಗಿದ್ದು ಅವರ ಸಹೋದರ ಯೋಧಿನ್ ಪುಂಜಾ. ಯೋಧಿನ್ ಪುಂಜಾ ಅವರು ಯುಎಇ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಯಶ್ ಅವರ ವೃತ್ತಿಜೀವನದ ಆರಂಭಿಕ ಹಂತದಿಂದಲೂ ಯೋಧಿನ್ ಅವರು ಒಬ್ಬ ಮಾರ್ಗದರ್ಶಕರಾಗಿ ಬೆನ್ನೆಲುಬಾಗಿ ನಿಂತಿದ್ದಾರೆ. ತನ್ನ ಸಹೋದರನ ಅನುಭವ ಮತ್ತು ಮಾರ್ಗದರ್ಶನದಲ್ಲಿ ಬೆಳೆದಿರುವ ಯಶ್, ಈಗ ಐಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಆರ್‌ಆರ್ ಪರ ಮಿಂಚಲು ಸಜ್ಜಾಗಿದ್ದಾರೆ.

ರಾಹುಲ್ ದ್ರಾವಿಡ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ

ಯಶ್ ರಾಜ್ ಪುಂಜಾ ಅವರ ವೃತ್ತಿಪರ ಕ್ರಿಕೆಟ್ ಬದುಕು 2023ರಲ್ಲಿ ಒಂದು ಮಹತ್ವದ ತಿರುವು ಪಡೆಯಿತು. ಶಾಲಾ ಶಿಕ್ಷಣ ಮುಗಿಸಿದ ನಂತರ ಅವರು ಬೆಂಗಳೂರಿಗೆ ಸ್ಥಳಾಂತರಗೊಂಡರು. ಅಲ್ಲಿ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನವಿರುವ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಆರಂಭಿಸಿದರು. ಬಳಿಕ ರಾಜಸ್ಥಾನ್ ರಾಯಲ್ಸ್ ಆಯೋಜಿಸಿದ್ದ ಶಿಬಿರವೊಂದರಲ್ಲಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದಾಗ, ಅಲ್ಲಿನ ಕೋಚ್‌ವೊಬ್ಬರ ಕಣ್ಣಿಗೆ ಬಿದ್ದರು.

ಯಶ್ ಬೌಲಿಂಗ್ ಕೌಶಲ್ಯಕ್ಕೆ ಮಾರುಹೋದ ಆರ್‌ಆರ್‌ ಕೋಚ್

ಯಶ್ ಅವರ ಬೌಲಿಂಗ್ ಕೌಶಲ್ಯಕ್ಕೆ ಮಾರುಹೋದ ಆ ಕೋಚ್, ಅವರನ್ನು ನಾಲ್ಕು ದಿನಗಳ ಸುದೀರ್ಘ ತರಬೇತಿ ಶಿಬಿರಕ್ಕೆ ಆಹ್ವಾನಿಸಿದರು. ಈ ಒಂದು ಸುವರ್ಣ ಅವಕಾಶವೇ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಲು ಭದ್ರವಾದ ಅಡಿಪಾಯ ಹಾಕಿಕೊಟ್ಟಿತು ಅಂದ್ರೆ ತಪ್ಪಾಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+