ಕ್ರಿಕೆಟ್ ಲೋಕಕ್ಕೆ ಮತ್ತೊಂದು ಆಘಾತ: ವಿರಾಟ್, ರೋಹಿತ್ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ ದಿಢೀರ್ ವಿದಾಯ ಘೋಷಣೆ
Nicholas Pooran: ಕ್ರಿಕೆಟ್‌ನಲ್ಲಿ ಸರದಿ ಲೆಕ್ಕದಲ್ಲಿ ನಿವೃತ್ತಿ ಘೋಷಣೆಗಳು ಮುಂದುವರೆದಿವೆ. ಇದೀಗ ವೆಸ್ಟ್ ಇಂಡೀಸ್ ಹಾಗೂ ಎಲ್‌ಎಸ್‌ಜಿ ತಂಡದ ಸ್ಪೋಟಕ ಬ್ಯಾಟರ್ ನಿಕೋಲಸ್ ಪೂರನ್ ಅವರು ತಮ್ಮ 29ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಹಾಗಾದ್ರೆ ಇವರ ಈ ನಿರ್ಧಾರಕ್ಕೆ ಕಾರಣ ಹಾಗೂ ದಾಖಲೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವೆಸ್ಟ್ ಇಂಡೀಸ್ ತಂಡದ ಮಾಜಿ ಟಿ-20 ನಾಯಕ ಹಾಗೂ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ಪರ ಆಡಿದ್ದ ಸ್ಟಾರ್ ಕ್ರಿಕೆಟಿಗ ನಿಕೋಲಸ್ ಪೂರನ್ ತಮ್ಮ 29ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿ ಶಾಕ್ ನೀಡಿದ್ದಾರೆ. ಎಡಗೈ ಬ್ಯಾಟರ್ ನಿಕೊಲಸ್ ಪೂರನ್ ಅವರು ನಿವೃತ್ತಿಯ ಘೋಷಣೆಯ ನಿರ್ಧಾರವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ನಿಕೋಲಸ್ ಪೂರನ್ ಎಡಗೈ ಬ್ಯಾಟರ್ ಆಗಿದ್ದು, ಇವರು ಬ್ಯಾಟ್ ಹಿಡಿದು ಫೀಲ್ಡ್‌ಗಿಳಿದರೆಂದರೆ ಬರೀ ಬೌಂಡರಿ ಸಿಕ್ಸ್‌ಗಳ ಸುರಿಮಳೆಯನ್ನೇ ಹರಿಸುತ್ತಿದ್ದರು. ಹೀಗೆ ಹೊಡಿ ಬಡಿ ಆಟ ಆಡುತ್ತಿದ್ದರು. ಈ ಬಾರಿ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದರು. ಇನ್ನೂ ಇವರು ಅಬ್ಬರದ ಬ್ಯಾಟಿಂಗ್ ಮೂಲಕ ಬರೀ ವೆಸ್ ಇಂಡೀಸ್ ಅಲ್ಲದೇ ಇಂಡಿಯಾದಲ್ಲೂ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದರು. ಆದರೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿರುವುದು ಅಭಿಮಾನಿಗಳಿಗೆ ಶಾಕ್ ಕೊಟ್ಟಂತಾಗಿದೆ.
ಇತ್ತೀಚೆಗಷ್ಟೇ ಟೀಂ ಇಡಿಯಾದ ಸ್ಟಾರ್ ಪ್ಲೇಯರ್‌ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದರು. ಬಳಿಕ ಆಸ್ಟ್ರೇಲಿಯಾ ತಂಡದ ಗ್ಲೇನ್ ಮ್ಯಾಕ್ಸ್‌ವೆಲ್ ಏಕದಿನ ಕ್ರಿಕೆಟ್‌ಗೆ, ದಕ್ಷಿಣ ಆಫ್ರೀಕಾದ ಹೆನ್ರಿಕ್ ಕ್ಲಾಸೆನ್ ಅವರು 33ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು. ಇದೀಗ ಇಂದು (ಜೂನ್ 10) ವೆಸ್ಟ್ ಇಂಡೀಸ್ ತಂಡದ ಸ್ಟಾಟ್ ಆಟಗಾರ ನಿಕೋಲಸ್ ಪೂರನ್ ವಿದಾಯ ಹೇಳಿ ಶಾಕ್ ಕೊಟ್ಟಿದ್ದಾರೆ.
ಈ ನಿರ್ಧಾರವನ್ನು ಕಷ್ಟಕರ ಎಂದು ಹೇಳಿರುವ ನಿಕೋಲಸ್ ಪೂರನ್, ತಂಡ ಮುನ್ನಡೆಸಿದ ಅವಕಾಶ ನನಗೆ ಸಿಕ್ಕ ಸವಲತ್ತು ಎಂದು ಹೇಳಿದರು. ಇನ್ನು ಪೂರನ್ 61 ಟಿ-20 ಮತ್ತು 106 ಏಕದಿನ ಪಂದ್ಯಗಳನ್ನು ಆಡಿದ ನಂತರ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದರು ಮತ್ತು ಎರಡೂ ಸ್ವರೂಪಗಳಲ್ಲಿ 4,000ಕ್ಕೂ ಹೆಚ್ಚು ರನ್‌ಗಳನ್ನು ಕಲೆಹಾಕಿದ್ದಾರೆ.
ವಿಶ್ರಾಂತಿ ಬಯಸಿದ್ದರಿಂದ ಇಂಗ್ಲೆಂಡ್ ವಿರುದ್ಧದ ವೈಟ್-ಬಾಲ್ ಸರಣಿಗೆ ತಮ್ಮನ್ನು ಪರಿಗಣಿಸದಂತೆ ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯುಐ)ಗೆ ವಿನಂತಿಸಿದ ಕೆಲವು ದಿನಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. 'ಆಲೋಚನೆ ಮಾಡಿದ ನಂತರವೇ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ," ಎಂದು ಪೂರನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೆ ಕೇವಲ ಎಂಟು ತಿಂಗಳುಗಳು ಉಳಿದಿದ್ದು, ಇದಕ್ಕೂ ಮುಂಚೆಯೇ ನಿಕೋಲಸ್ ಪೂರನ್ ಅವರ ನಿವೃತ್ತಿಯಿಂದ ವೆಸ್ಟ್ ಇಂಡೀಸ್ ತಂಕ್ಕೆ ಆಘಾತ ಎದುರಾದಂತಾಗಿದೆ. ಇನ್ನು ನಿಕೋಲಸ್ ಪೂರನ್ 2016ರಲ್ಲಿ ದುಬೈನಲ್ಲಿ ಪಾಕಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ ಪರ ಟಿ-20ಐ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.
ಮೂರು ವರ್ಷಗಳ ನಂತರ, ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದರು. ಕಳೆದ ವರ್ಷ ವೆಸ್ಟ್ ಇಂಡೀಸ್‌ನ ಟಿ-20 ವಿಶ್ವಕಪ್ ತಂಡದ ಭಾಗ ಆಗಿದ್ದರು. ನಿಕೋಲಸ್ ಪೂರನ್ ಅವರನ್ನು ಮೇ 2022ರಲ್ಲಿ ವೆಸ್ಟ್ ಇಂಡೀಸ್ ವೈಟ್-ಬಾಲ್ ನಾಯಕನನ್ನಾಗಿ ಮಾಡಲಾಯಿತು. ಆದರೆ, ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಅವರು ನಾಯಕತ್ವ ಸ್ಥಾನದಿಂದ ದೂರ ಉಳಿದರು.












Click it and Unblock the Notifications