ಚಿನ್ನ ಗೆದ್ದು ತಾಯ್ನಾಡಿಗೆ ಮರಳಿ ಅನ್ನದಾನ ಮಾಡಿದ ಟೀಮ್ ಇಂಡಿಯಾ ಕ್ರಿಕೆಟರ್ ವಾಷಿಂಗ್ಟನ್ ಸುಂದರ್, ಭಾರಿ ವೈರಲ್

Washington Sundar: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡವು ಐತಿಹಾಸಿಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತ್ತು. ಈ ಮಹತ್ವದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಭಾರತದ ಯುವ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್, ಈ ಚಿನ್ನದ ಪದಕದ ಸಂಭ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

ಏಷ್ಯನ್ ಗೇಮ್ಸ್ ಮುಗಿಸಿ ತಾಯ್ನಾಡಿಗೆ ಮರಳಿದ ವಾಷಿಂಗ್ಟನ್ ಸುಂದರ್, ಚೈನೈನ ಪ್ರಸಿದ್ಧ ದೇವಾಲಯ ತಮಿಳುನಾಡಿನ ಅಣ್ಣಾಮಲೈಯರ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ನಂತರ ದೇವಾಲಯದ ಆವರಣದ ಹೊರಗೆ ಕಾಯುತ್ತಿದ್ದ ನೂರಾರು ಬಡವರು ಹಾಗೂ ಭಕ್ತಾದಿಗಳಿಗೆ ಸ್ವತಃ ತಮ್ಮ ಕೈಯಾರ ಅನ್ನದಾನ ಮಾಡಿದರು. ಈ ವೇಳೆ ಅವರ ತಂದೆ ಎಂ.ಸುಂದರ್ ಹಾಗೂ ಕುಟುಂಬದ ಸದಸ್ಯರು ಸಾಥ್ ನೀಡಿದರು.

Washington Sundar Asian Games Gold Hero Serves Food to Poor at Temple in Tamil Nadu Wins Hearts

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್

ಭಾರತ ತಂಡದ ಸ್ಟಾರ್ ಆಟಗಾರನಾಗಿದ್ದರೂ ಯಾವುದೇ ಹಮ್ಮು-ಬಿಮ್ಮಿಲ್ಲದೆ, ತೀರಾ ಸರಳವಾಗಿ ಸಾರ್ವಜನಿಕರಿಗೆ ಆಹಾರ ಬಡಿಸುತ್ತಿರುವ ವೀಡಿಯೊ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ನೆಟ್ಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ವಾಷಿಂಗ್ಟನ್ ಸುಂದರ್ ಅವರ ಈ ಸರಳತೆ ಮತ್ತು ಧಾರ್ಮಿಕ ಚಟುವಟಿಕೆ ಜೊತೆಗೆ ಉದಾರ ಮನೋಭಾವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ

ಏಷ್ಯನ್ ಗೇಮ್ಸ್ ಟೂರ್ನಿಯುದ್ದಕ್ಕೂ ವಾಷಿಂಗ್ಟನ್ ಸುಂದರ್ ತಮ್ಮ ಶಿಸ್ತುಬದ್ಧ ಆಫ್‌ಸ್ಪಿನ್ ಬೌಲಿಂಗ್ ಹಾಗೂ ಚಾಣಾಕ್ಷ ಆಲ್ರೌಂಡರ್ ಆಟದ ಮೂಲಕ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದರು. ಮನೆಗೆ ಮರಳಿದ ಸುಂದರ್ ಅವರಿಗೆ ಕುಟುಂಬಸ್ಥರು ಹಾಗೂ ಸ್ಥಳೀಯರು ಆತ್ಮೀಯ ಸ್ವಾಗತ ಕೋರಿದ್ದರು.

'ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದು ನನ್ನ ಜೀವನದ ಶ್ರೇಷ್ಠ ಕ್ಷಣಗಳಲ್ಲಿ ಒಂದು. ದೇವರ ಆಶೀರ್ವಾದ ಹಾಗೂ ಅಭಿಮಾನಿಗಳ ಪ್ರೀತಿಯಿಂದ ಇದು ಸಾಧ್ಯವಾಗಿದೆ,' ಎಂದು ಈ ಸಂದರ್ಭದಲ್ಲಿ ವಾಷಿಂಗ್ಟನ್ ಸುಂದರ್ ಹರ್ಷ ವ್ಯಕ್ತಪಡಿಸಿದರು. ಕ್ರೀಡಾಂಗಣದಲ್ಲಿ ಭಾರತದ ಕೀರ್ತಿಪಟಾಕೆಯನ್ನು ಹಾರಿಸಿ, ತಾಯ್ನಾಡಿನಲ್ಲಿ ಬಡವರ ಹಸಿವು ನೀಗಿಸುವ ಮೂಲಕ ಸುಂದರ್ 'ರಿಯಲ್ ಹೀರೋ' ಎನಿಸಿಕೊಂಡಿದ್ದಾರೆ.

2 ವಿಕೆಟ್ ಕಬಳಿಸಿದ ಸುಂದರ್

ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 19 ರನ್‌ಗಳಿಂದ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು. ಮೊದಲು ಬ್ಯಾಟ್ ಮಾಡಿದ ಭಾರತ ತಂಡ 6 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತ್ತು. ನಂತರ ಗುರಿ ಬೆನ್ನಟ್ಟಿದ ಪಾಕಿಸ್ತಾನವನ್ನು 6 ವಿಕೆಟ್‌ಗೆ 192 ರನ್‌ಗಳಿಗೆ ಕಟ್ಟಿಹಾಕಲಾಯಿತು. ಈ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಬೌಲಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ತಮ್ಮ ಸಿಕ್ಕ 4 ಓವರ್‌ಗಲ್ಲಿ 29 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದರು.

ಇನ್ನೂ ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದಕ್ಕಾಗಿ ತಮಿಳುನಾಡು ಸರ್ಕಾರವು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಸನ್ಮಾನಿಸಿ, ಗೌರವಿಸಿದೆ. ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ವಾಷಿಂಗ್ಟನ್‌ಗೆ 75 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದು, ಈ ಸಾಧನೆಗಾಗಿ ಸುಂದರ್ ಮತ್ತು ಭಾರತೀಯ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ, ಸುಂದರ್ ಅವರ ಈ ಯಶಸ್ಸು ಯುವಕರಿಗೆ ಆತ್ಮವಿಶ್ವಾಸ ಮತ್ತು ಪ್ರೇರಣೆ ನೀಡಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಒಟ್ಟಿನಲ್ಲಿ ಹೇಳುವುದಾದರೆ ಯಶಸ್ಸಿನ ನಡುವೆಯೂ ಕ್ರೀಡಾಪಟು ಅತ್ಯಂತ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+