ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ಅಂಡರ್ 19 ತಂಡ ಪ್ರಕಟ: ಸೆಹ್ವಾಗ್, ಕನ್ನಡಿಗ ರಾಹುಲ್ ದ್ರಾವಿಡ್ ಪುತ್ರರ ಆಯ್ಕೆ
ಟೀಮ್ ಇಂಡಿಯಾ ಮಾಜಿ ಸ್ಟಾರ್ ಆಟಗಾರರಾದ ವಿರೇಂದರ್ ಸೆಹ್ವಾಗ್ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಮಕ್ಕಳು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಅಂಡರ್ 19 ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲಗಲಿ ನೀಡಲಾಗಿದೆ ತಿಳಿಯಿರಿ.
ವಿರೇಂದರ್ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಹಾಗೂ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಅಂಡರ್ 19 ಏಕದಿನ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವುದಾಗಿ ಬಿಸಿಸಿಐ ಗುರುವಾರ (ಆಗಸ್ಟ್ 27) ಪ್ರಕಟಿಸಿದೆ. ಈ ಸರಣಿಯು ಮೂರು ಏಕದಿನ ಪಂದ್ಯಗಳು ಮತ್ತು ಎರಡು ಬಹುದಿನಗಳ ಪಂದ್ಯಗಳನ್ನು ಒಳಗೊಂಡಿದೆ.

ಏಕದಿನ, ಬಹುದಿನಗಳ ಪಂದ್ಯಗಳ ದಿನಾಂಕ, ಸಮಯಗಳು
ಏಕದಿನ ಸರಣಿಯು ಸೆಪ್ಟೆಂಬರ್ 18, 21 ಮತ್ತು 23ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಬಹುದಿನಗಳ ಪಂದ್ಯಗಳ ಸರಣಿಯು ಸೆಪ್ಟೆಂಬರ್ 27 - 30 ಹಾಗೂ ಅಕ್ಟೋಬರ್ 5-8ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಎರಡೂ ಸರಣಿಗಳ ಮ್ಯಾಚ್‌ಗಳು ಬೆಳಗ್ಗೆ ಬೆಳಿಗ್ಗೆ 9:30ರಿಂದ ಆರಂಭವಾಗಲಿವೆ.
ಯಾವ ತಂಡಕ್ಕೆ ಯಾರು ನಾಯಕ?
ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯು ಸೆಪ್ಟೆಂಬರ್ 18ರಿಂದ ಆರಂಭವಾಗಲಿದೆ. ಬಿಸಿಸಿಐ ಆಯ್ಕೆ ಸಮಿತಿಯು 3 ಏಕದಿನ ಪಂದ್ಯಗಳು ಹಾಗೂ 2 ಬಹುದಿನಗಳ ಪಂದ್ಯಗಳ ಸರಣಿಗಾಗಿ ಪ್ರತ್ಯೇಕ ತಂಡಗಳನ್ನು ಆಯ್ಕೆ ಮಾಡಿದೆ. ಏಕದಿನ ಸರಣಿಯ ತಂಡವನ್ನು ಲಕ್ಷ್ಯ ರಾಯ್ ಚಂದಾನಿ ಮುನ್ನಡೆಸಿದರೆ, ಮಲ್ಟಿ-ಡೇ ಪಂದ್ಯಗಳ ತಂಡಕ್ಕೆ ಯಶ್‌ವರ್ಧನ್ ಸಿಂಗ್ ಚೌಹಾಣ್ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
ಈ ಸರಣಿಯ ಮೂರು ಏಕದಿನ ಪಂದ್ಯಗಳು ಮತ್ತು ಮೊದಲ ಮಲ್ಟಿ-ಡೇ ಪಂದ್ಯವು ರಾಜ್‌ಕೋಟ್‌ನಲ್ಲಿ ಆಯೋಜನೆಯಾಗಿದೆ. ಸರಣಿಯ ಎರಡನೇ ಹಾಗೂ ಅಂತಿಮ ಮಲ್ಟಿ-ಡೇ ಪಂದ್ಯಕ್ಕೆ ಅಹಮದಾಬಾದ್ ಮೈದಾನ ಆತಿಥ್ಯ ವಹಿಸಲಿದೆ. ಇನ್ನೂ ವಿರೇಂದರ್ ಸೆಹ್ವಾಗ್ ಹಾಗೂ ರಾಹುಲ್ ದ್ರಾವಿಡ್ ಅವರ ಪುತ್ರರ ಸಾಧನೆಗಳ ವಿವರವನ್ನು ಇಲ್ಲಿ ನೀಡಲಾಗಿದೆ ನೋಡಿ.
ಆರ್ಯವೀರ್ ಸೆಹ್ವಾಗ್ ಸಾಧನೆ
18 ವರ್ಷದ ಆರ್ಯವೀರ್ ಸೆಹ್ವಾಗ್ ಬಲಗೈ ಬ್ಯಾಟ್ಸ್‌ಮನ್ ಆಗಿದ್ದು, ಇದೇ ಮೊದಲ ಬಾರಿಗೆ ಭಾರತೀಯ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಇವರು ದೆಹಲಿ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಆಡುತ್ತಿದ್ದು, ತಮ್ಮ ಅದ್ಭುತ ಬ್ಯಾಟಿಂಗ್ ಶೈಲಿ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದಾರೆ.
ಅನ್ವಯ್ ದ್ರಾವಿಡ್ ಸಾಧನೆ
ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ 17 ವರ್ಷದ ಅನ್ವಯ್ ಅವರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕಳೆದ ತಿಂಗಳು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ಅಂಡರ್-19 ತಂಡದಲ್ಲಿಯೂ ಇವರು ಭಾಗವಹಿಸಿದ್ದರು. ಅಲ್ಲಿ ಆಡಿದ ಎರಡು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 14 ಮತ್ತು 87 ರನ್ ಗಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.
ಅನ್ವಯ್ ಮತ್ತು ಆರ್ಯವೀರ್ ಇಬ್ಬರೂ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದು, ತಮ್ಮ ತಂದೆಯಂದಿರಂತೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಮಿಂಚಲು ಸಜ್ಜಾಗಿದ್ದಾರೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ಯುವ ಆಟಗಾರರ ಪ್ರದರ್ಶನವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಭಾರತ ಅಂಡರ್ 19 ಏಕದಿನ ತಂಡ: ಲಕ್ಷ್ಯ ರಾಚಂದಾನಿ (ನಾಯಕ), ಯಶ್‌ಬರ್ಧನ್ ಚೌಹಾಣ್ (ಉಪನಾಯಕ), ರಜತ್ ಭಾಗೇಲ್ (ವಿ.ಕೀ.), ಆರ್ಯವೀರ್ ಸೆಹ್ವಾಗ್, ವಿ.ಕೆ. ವಿನೀತ್, ಕುಶಾಗ್ರ ಓಝಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ವಿ. ಯಶ್ವೀರ್, ರೋಹಿತ್ ಯಾದವ್, ಶಾವಿನ್ ವಿನೋದ್, ಮೋಹಿತ್ ಉಲ್ವಾ, ಚಿಗುರುಪತಿ ವೆಂಕಟ್, ಕಾವ್ಯ ಪಟೇಲ್.
ಭಾರತ ಅಂಡರ್ 19 ಬಹುದಿನ ತಂಡ: ಯಶ್‌ಬರ್ಧನ್ ಚೌಹಾಣ್ (ನಾಯಕ), ಲಕ್ಷ್ಯ ರಾಯ್‌ಚಂದಾನಿ (ಉಪನಾಯಕ), ಸಾಗರ್ ವಿರ್ಕ್, ಕುಶಾಗ್ರ ಓಝಾ, ಮನಾಲ್ ಚೌಹಾಣ್, ಕುಶ್ ಪಟೇಲ್, ಮಾನವ್ ಕೃಷ್ಣ (ವಿ.ಕೀ.), ಅಭಿಪ್ರಾಯ್ ಬಿಸ್ವಾಸ್ (ವಿ.ಕೀ.), ರೋಹಿತ್ ಯಾದವ್, ಇಶಾನ್ ಓಮ್, ಅಯಾನ್ ಅಕ್ರಮ್, ಪ್ರಣವ್ ರಾಘವೇಂದ್ರ, ಪ್ರಿಯಾಂಶು ಸಿಂಗ್, ಮೋಹಿತ್ ಉಲ್ವಾ, ಆರ್ಯನ್ ಯಾದವ್.


Click it and Unblock the Notifications
