Virat Kohli: 'ಕಿಂಗ್' ಎಂಬ ಟೈಟಲ್ ವಿರಾಟ್ ಕೊಹ್ಲಿಗೆ ಮಾತ್ರ ಸೂಕ್ತ, ಬಾಬರ್ ಅಜಮ್‌ಗಲ್ಲ ಎಂದ ವಾಸೀಂ ಜಾಫರ್
Virat Kohli: ವಿರಾಟ್ ಕೊಹ್ಲಿ ಅವರು ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ನಡುವೆಯೇ ಪಾಕಿಸ್ತಾನದ ಕ್ರಿಕೆಟಿಗ ಬಾಬರ್ ಅಜಮ್ ಮತ್ತು ಭಾರತದ ವಿರಾಟ್ ಕೊಹ್ಲಿ ನಡುವಿನ ಹೋಲಿಕೆಯ ಬಗ್ಗೆ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಪ್ರತಿಕ್ರಿಯಿಸಿದ್ದು, 'ಕಿಂಗ್' ಟ್ಯಾಗ್ ಯಾರಿಗೆ ಸೂಕ್ತ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಬಾಬರ್ ಅಜಮ್ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಸುವುದು ಮತ್ತು ಅವರಿಗೆ 'ಕಿಂಗ್' ಎಂಬ ಬಿರುದು ನೀಡಿರುವುದು ಅತಿಯಾದ ಹೈಪ್ ಎಂದು ವಸೀಮ್ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. "ಬಾಬರ್ ಉತ್ತಮ ಆಟಗಾರ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅವರಿಗೆ ಅವರ ಮಿತಿಗಿಂತ ಹೆಚ್ಚಿನ ಪ್ರಚಾರ ಸಿಕ್ಕಿದೆ. ಈ ಅತಿಯಾದ ಪ್ರಚಾರವೇ ಅವರ ಮೇಲೆ ಅನಗತ್ಯ ಒತ್ತಡವನ್ನು ಸೃಷ್ಟಿಸಿದೆ," ಎಂದು ವಾಸೀಂ ಜಾಫರ್ ಹೇಳಿದ್ದಾರೆ ಅಂತಾ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

'ಕೊಹ್ಲಿ ಶ್ರೇಷ್ಠ ಆಟಗಾರರಲ್ಲಿ ಒಬ್ಬರು'
ಹೋಲಿಕೆಗಳ ಬಗ್ಗೆ ಮಾತನಾಡಿದ ವಾಸೀಂ ಜಾಫರ್, "ವಿರಾಟ್ ಈ ತಲೆಮಾರಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಬಾಬರ್ ಅವರು ವಿರಾಟ್ ಅವರಂತೆ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ವಿರಾಟ್ ಅವರ ಸ್ಥಾನವೇ ಬೇರೆ. ಇಂತಹ ಹೋಲಿಕೆಗಳಿಂದ ಬಾಬರ್ ಅವರ ಆಟದ ಮೇಲೆ ಪರಿಣಾಮ ಬೀರಿದೆ," ಎಂದು ಹೇಳಿದ್ದಾರೆ.
ಬಾಬರ್ ಕಳಪೆ ಫಾರ್ಮ್‌ಗೆ ಕಾರಣವೇನು?
ಬಾಬರ್ ಅವರ ಫಾರ್ಮ್ ಕುಸಿತಕ್ಕೆ ಅತಿಯಾದ ಹೈಪ್ ಮತ್ತು ನಾಯಕತ್ವ ಎಂಬ ಎರಡು ಪ್ರಮುಖ ಕಾರಣಗಳನ್ನು ವಾಸೀಂ ಜಾಫರ್ ನೀಡಿದ್ದಾರೆ. "ನಾಯಕನಾಗಿ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಾಬರ್ ವಿಫಲರಾಗಿದ್ದಾರೆ ಮತ್ತು ತಂಡದಲ್ಲಿ ನಿರೀಕ್ಷಿತ ಬದಲಾವಣೆ ತರಲು ಸಾಧ್ಯವಾಗಿಲ್ಲ," ಎಂದು ಅವರು ಹೇಳಿದ್ದಾರೆ.
ಬಾಬರ್ ಬಾಬರ್ ಅಜಮ್ ಅಸಮಾಧಾನ
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, ವಿರಾಟ್ ಕೊಹ್ಲಿ ಪಂದ್ಯಗಳನ್ನು ಫಿನಿಶ್ ಮಾಡಿದಂತೆ ನೀವು ಮಾಡುತ್ತಿಲ್ಲ ಏಕೆ? ಎಂದು ಪ್ರಶ್ನೆ ಕೇಳಿದಾಗ ಬಾಬರ್ ಅಸಮಾಧಾನಗೊಂಡಿದ್ದರು. "ಈ ಹೋಲಿಕೆಗಳನ್ನು ಇಲ್ಲಿಗೇ ನಿಲ್ಲಿಸಿ, ನಾನು ಕೂಡ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದೇನೆ, ಅದು ನಿಮ್ಮ ತಪ್ಪು ಕಲ್ಪನೆ," ಎಂದು ಬಾಬರ್ ತೀಕ್ಷ್ಣವಾಗಿ ಉತ್ತರಿಸಿದ್ದರು.
ಟೀಕೆಗಳ ನಡುವೆಯೂ ವಾಸೀಂ ಬಾಬರ್ ಅಜಮ್ ಇತ್ತೀಚೆಗೆ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 12,000 ರನ್ ಪೂರೈಸಿದ ದಾಖಲೆ ಹೊಂದಿದ್ದಾರೆ. ಈ ಸಾಧನೆಯಲ್ಲಿ ಅವರು ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ಬಾಬರ್ ಉತ್ತಮ ಪ್ರತಿಭೆಯಾಗಿದ್ದರೂ, ವಿರಾಟ್ ಕೊಹ್ಲಿಯಂತಹ ದಿಗ್ಗಜರೊಂದಿಗೆ ಮಾಡುವ ಹೋಲಿಕೆಗಳು ಅವರ ಬೆಳವಣಿಗೆಗೆ ಪೂರಕವಾಗುವ ಬದಲು ಒತ್ತಡವನ್ನೇ ಹೆಚ್ಚು ಮಾಡುತ್ತಿವೆ ಎಂಬುದು ವಸೀಮ್ ಜಾಫರ್ ಹಾಗೂ ಹಲವು ಕ್ರಿಕೆಟ್ ದಿಗ್ಗಜರ ಅಭಿಪ್ರಾಯವಾಗಿದೆ.












Click it and Unblock the Notifications