ವಿರಾಟ್ ಕೊಹ್ಲಿ ತಿರುಗಿಯೂ ನೋಡಲಿಲ್ಲ, ಆಟೋಗ್ರಾಫ್ ಹಾಕಲಿಲ್ಲವೆಂದು ಹೋಟೆಲ್‌ನಲ್ಲಿ ಬ್ಯಾಟ್ ಎಸೆದು ಕಣ್ಣೀರಿಟ್ಟ ಪುಟ್ಟ ಬಾಲಕ

Virat Kohli Fan: ವಿರಾಟ್ ಕೊಹ್ಲಿ ವಿಶ್ವದಾದ್ಯಂತ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗ. ಅವರು ಹೋದಲ್ಲೆಲ್ಲಾ ಅವರನ್ನು ನೋಡಲಿಕ್ಕಾಗಿಯೇ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಕೊಹ್ಲಿ ಸಹ ಬಿಡುವಿನ ಸಮಯದಲ್ಲಿ ಅಭಿಮಾನಿಗಳಿಗೆ ಆಟೋಗ್ರಾಫ್ ಮತ್ತು ಸೆಲ್ಫಿ ನೀಡುತ್ತಿರುತ್ತಾರೆ. ಈ ಎಲ್ಲರದ ನಡುವೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋವೊಂದು ಭಾರಿ ಚರ್ಚೆಗೆ ಕಾರಣವಾಗಿದೆ.

ಮಾಹಿತಿ ಪ್ರಕಾರ, ಇತ್ತೀಚೆಗೆ ಆರ್‌ಸಿಬಿ ತಂಡ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಒಬ್ಬ ಪುಟ್ಟ ಬಾಲಕ ತನ್ನ ಬ್ಯಾಟ್ ಮೇಲೆ ವಿರಾಟ್ ಕೊಹ್ಲಿ ಅವರ ಆಟೋಗ್ರಾಫ್ ಪಡೆಯಲು ಹೋಟೆಲ್‌ನಲ್ಲಿ ತುಂಬಾ ಹೊತ್ತಿನಿಂದ ಕಾಯುತ್ತಿದ್ದ. ವಿರಾಟ್ ಕೊಹ್ಲಿ ತಮ್ಮ ರೂಂ ಕಡೆಗೆ ನಡೆದುಕೊಂಡು ಹೋಗುವ ವೇಳೆ ಆತುರದಲ್ಲಿದ್ದ ಕಾರಣವೋ ಏನೋ ಅಲ್ಲಿ ಕಾಯುತ್ತಿದ್ದ ಆ ಬಾಲಕನನ್ನು ಗಮನಿಸದೆ ಮುಂದೆ ಸಾಗಿದ್ದಾರೆ.

Virat Kohli Viral Video Little Boy Cries Throws Bat After Missing Autograph of Team India Legend

ವಿರಾಟ್‌ ತನ್ನತ್ತ ನೋಡದಿದ್ದಕ್ಕೆ ಪುಟ್ಟ ಬಾಲಕ ಆಕ್ರೋಶ

ತನ್ನ ನೆಚ್ಚಿನ ಆಟಗಾರ ತನ್ನನ್ನು ಗಮನಿಸದೆ ಹೋದದ್ದನ್ನು ಕಂಡು ಆ ಬಾಲಕ ತೀವ್ರ ನಿರಾಸೆಗೊಂಡಿದ್ದಾನೆ. ಬಳಿಕ ಬೇಸರದಿಂದ ತನ್ನ ಕೈಯಲ್ಲಿದ್ದ ಬ್ಯಾಟನ್ನು ನೆಲಕ್ಕೆ ಎಸೆದು ಜೋರಾಗಿ ಅಳಲು ಪ್ರಾರಂಭಿಸಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವು

ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ಬೆನ್ನಲ್ಲೇ ನ್ಯೂಜಿಲೆಂಡ್‌ನ ಮಾಜಿ ವೇಗಿ ಮಿಚೆಲ್ ಮೆಕ್ಲೆನಾಘನ್ ಆರ್‌ಸಿಬಿ ಆಟಗಾರರ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ ಅವರ ಆಕ್ರಮಣಕಾರಿ ಬ್ಯಾಟಿಂಗ್‌ ಬಗ್ಗೆ ಮೆಕ್ಲೆನಗನ್ ಕೊಂಡಾಡಿದ್ದಾರೆ.

ಕೊಹ್ಲಿ ಬಗ್ಗೆ ಮಿಚೆಲ್ ಮೆಕ್ಲೆನಾಘನ್ ಹೇಳಿದ್ದೇನು?

"ಸತತವಾಗಿ ರನ್ ಮಳೆ ಸುರಿಸುತ್ತಿರುವ ಕೊಹ್ಲಿ ಅವರ ಉತ್ತಮ ಫಾರ್ಮ್ ತಂಡದ ಯಶಸ್ಸಿಗೆ ಮುಖ್ಯ ಕಾರಣ," ಎಂದು ಹೇಳಿದ್ದಾರೆ. ಈ ಗೆಲುವಿನಲ್ಲಿ ಬೌಲರ್‌ಗಳ ಪಾತ್ರದ ಬಗ್ಗೆ ಮಾತನಾಡಿದ ಅವರು, "ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರ ಉತ್ತಮ ಬೌಲಿಂಗ್ ದಾಳಿಯು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಕಡಿಮೆ ರನ್‌ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿತು," ಎಂದು ಹೇಳಿದರು.

ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೇವಲ 75 ರನ್‌ಗಳಿಗೆ ಆಲೌಟ್ ಆಯಿತು. ಇದು ಈ ಬಾರಿಯ ಐಪಿಎಲ್ ಸೀಸನ್‌ನ ಅತ್ಯಂತ ಕಡಿಮೆ ಮೊತ್ತವಾಗಿದೆ. ಈ ಸಾಧಾರಣ ಮೊತ್ತದ ಗುರಿಯನ್ನು ಆರ್‌ಸಿಬಿ ಬ್ಯಾಟರ್‌ಗಳು ಯಾವುದೇ ಶ್ರಮವಿಲ್ಲದೆ ತಲುಪಿದರು.

ಮಿಚೆಲ್ ಮೆಕ್ಲೆನಾಘನ್ ಭವಿಷ್ಯ

"ವಿರಾಟ್ ಕೊಹ್ಲಿ ಅವರು ಈ ಸೀಸನ್‌ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದಾರೆ. ವಿಶ್ವದ ಶ್ರೇಷ್ಠ ಬೌಲರ್‌ಗಳ ವಿರುದ್ಧ ಐಪಿಎಲ್‌ನಲ್ಲಿ 9,000 ರನ್ ಗಳಿಸುವುದು ಸುಲಭದ ಮಾತಲ್ಲ. ಇದು ಅವರ ರನ್ ಹಸಿವು, ಶಿಸ್ತು ಮತ್ತು ಪ್ರತಿ ವರ್ಷ ಬದಲಾಗುತ್ತಿರುವ ಪರಿಸ್ಥಿತಿಗೆ ತಕ್ಕಂತೆ ತಮ್ಮನ್ನು ತಾವು ಬದಲಿಸಿಕೊಳ್ಳುವ ಗುಣವನ್ನು ಎತ್ತಿ ತೋರಿಸುತ್ತದೆ, ಎಂದು ಮಿಚೆಲ್ ಮೆಕ್ಲೆನಾಘನ್ ಹೇಳಿದರು.

"ವಿರಾಟ್‌ ಕೊಹ್ಲಿ ಅವರು 2008ರಿಂದ ಐಪಿಎಲ್ ಆಡುತ್ತಿದ್ದಾರೆ. ಮೊದಲು ಕೆಳ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾ ತಮ್ಮ ಸ್ಥಾನಕ್ಕಾಗಿ ಹೋರಾಡಿದರು. ನಂತರ ಮೂರನೇ ಕ್ರಮಾಂಕಕ್ಕೆ ಬಂದರು. ಆ ಬಳಿಕ ಕ್ರಿಸ್ ಗೇಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದು ಅವರ ಆಟವನ್ನೇ ಸಂಪೂರ್ಣವಾಗಿ ಬದಲಿಸಿತು. ಅವರು ಶೀಘ್ರದಲ್ಲೇ 10,000 ರನ್ ತಲುಪುವುದರಲ್ಲಿ ಸಂಶಯವಿಲ್ಲ," ಎಂದು ಮೆಕ್ಲೆನಗನ್ ಭವಿಷ್ಯ ನುಡಿದಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಆಕ್ರಮಣಕಾರಿ ಆಟದ ಮೂಲಕ ಉತ್ತಮ ಆರಂಭ ನೀಡಿದರೆ, ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್‌ ಮತ್ತು ಹ್ಯಾಜಲ್‌ವುಡ್ ಉತ್ತಮ ಪ್ರದರ್ಶನ ತೋರಿದ್ದು ಬೌಲಿಂಗ್ ವಿಭಾಗಕ್ಕೆ ಆನೆಬಲ ಬಂದಿದೆ. ಈ ಮೂಲಕ ಮುಂದಿನ ಎಲ್ಲಾ ಪಂದ್ಯಗಳಲ್ಲೂ ಅವರು ಇದೇ ಲಯ ಉಳಿಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+