ವಿರಾಟ್ ಕೊಹ್ಲಿ ಅವರು ಕನ್ನಡಿಗ ಕೆಎಲ್ ರಾಹುಲ್ ಕ್ಯಾಚ್ ಹಿಡಿಯುತ್ತಿದ್ದಂತೆ ಖುಷಿಯಲ್ಲಿ ತೇಲಾಡಿದ ಅನುಷ್ಕಾ ಶರ್ಮಾ
RCB Vs DC IPL 2026: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರೋಚಕ ಪಂದ್ಯದಲ್ಲಿ ಆರ್‌ಸಿಬಿ ನೀಡಿದ 176 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಲ್ಕನೇ ವಿಕೆಟ್ ಪತನವಾಗಿದೆ. ಸ್ಪೋಟಕ ಬ್ಯಾಟಿಂಗ್ ಆಡಿದ ಕನ್ನಡಿಗ ಕೆ.ಎಲ್.ರಾಹುಲ್ ಅವರ ವಿಕೆಟ್ ಪಡೆಯುವಲ್ಲಿ ಕೃನಾಲ್ ಪಾಂಡ್ಯ ಯಶಸ್ವಿಯಾಗಿದ್ದಾರೆ. ಕೊಹ್ಲಿ ಅವರು ರಾಹುಲ್ ಅವರ ಕ್ಯಾಚ್ ಹಿಡಿದ ವೇಳೆ ಅನುಷ್ಕಾ ಶರ್ಮಾ ಎಂಜಾಯ್ ಮಾಡಿದ್ದಾರೆ.
ತಮ್ಮ ಹುಟ್ಟುಹಬ್ಬದಂದೇ ತವರು ನೆಲದಲ್ಲಿ ಅಬ್ಬರಿಸಿದ ಕೆ.ಎಲ್.ರಾಹುಲ್ 57 ರನ್ ಗಳಿಸಿ ಔಟಾದರು. ಸದ್ಯ ಕ್ರೀಸ್‌ನಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಅವರಿಗೆ ನಾಯಕ ಅಕ್ಷರ್ ಪಟೇಲ್ ಸಾಥ್ ನೀಡಿದ್ದು, ತಂಡವನ್ನು ಗೆಲುವಿನತ್ತ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ತಂಡವು ಆರಂಭಿಕ ಆಟಗಾರ ಫಿಲ್ ಸಾಲ್ಟ್ (63 ರನ್) ಅವರ ಸ್ಫೋಟಕ ಆಟದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ಲುಂಗಿ ಎನ್ಗಿಡಿ ತಲಾ 2 ವಿಕೆಟ್ ಪಡೆಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್‌ಗಳ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ನಿಯಂತ್ರಿಸಿದ್ದರು. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಮಾಡುವ ನಿರ್ಧಾರ ಆಯ್ಕೆ ಮಾಡಿಕೊಂಡರು.
ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ರೋಚಕ ಪಂದ್ಯವು ಕೇವಲ ಕ್ರಿಕೆಟ್ ಆಟಕ್ಕೆ ಮಾತ್ರವಲ್ಲದೆ, ಮೈದಾನದಲ್ಲಿ ನಡೆದ ಭಾವನಾತ್ಮಕ ಕ್ಷಣಗಳಿಗೂ ಸಾಕ್ಷಿಯಾಯಿತು. ವಿಶೇಷವಾಗಿ, ಬರ್ತ್‌ಡೇ ಬಾಯ್ ಕೆಎಲ್ ರಾಹುಲ್ ಅವರ ನಿರ್ಣಾಯಕ ವಿಕೆಟ್ ಪತನದ ವೇಳೆ ವಿರಾಟ್ ಕೊಹ್ಲಿ ತೋರಿದ ಚುರುಕುತನ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ನೀಡಿದ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ರಾಹುಲ್ ಕ್ಯಾಚ್ ಹಿಡಿದು ಸಂಭ್ರಮಿಸಿದ ಕೊಹ್ಲಿ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿಗಾಗಿ ಹೋರಾಡುತ್ತಿದ್ದ ಕೆಎಲ್ ರಾಹುಲ್ ಅರ್ಧಶತಕ ಬಾರಿಸಿ ಆರ್‌ಸಿಬಿ ಬೌಲರ್‌ಗಳಿಗೆ ದೊಡ್ಡ ಸವಾಲಾಗಿದ್ದರು. ಈ ಹಂತದಲ್ಲಿ ಕೃನಾಲ್ ಪಾಂಡ್ಯ ಎಸೆದ ಓವರ್‌ನಲ್ಲಿ ರಾಹುಲ್ ಹೊಡೆದ ಚೆಂಡನ್ನು ವಿರಾಟ್ ಕೊಹ್ಲಿ ಅವರು ಕ್ಯಾಚ್ ಹಿಡಿದರು. ಪಂದ್ಯದ ಗತಿಯನ್ನೇ ಬದಲಿಸಬಲ್ಲ ಈ ಪ್ರಮುಖ ವಿಕೆಟ್ ಬೀಳುತ್ತಿದ್ದಂತೆ ವಿರಾಟ್ ಕೊಹ್ಲಿ ಸಂಭ್ರಮಿಸಿದರು.
ಅನುಷ್ಕಾ ಶರ್ಮಾ ರಿಯಾಕ್ಷನ್ ಭಾರಿ ವೈರಲ್
ಇನ್ನೂ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ವಿರಾಟ್ ಹಿಡಿದ ಅದ್ಭುತ ಕ್ಯಾಚ್ ಕಂಡು ಸಂತಸಪಟ್ಟರು. ರಾಹುಲ್ ಔಟಾಗುತ್ತಿದ್ದಂತೆ ಅನುಷ್ಕಾ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ, ಮುಗುಳ್ನಗುತ್ತಾ ಸಂಭ್ರಮಿಸಿದ ದೃಶ್ಯ ಕ್ಯಾಮೆರಾದಲ್ಲಿ ವೈರಲ್ ಆಗಿದೆ.
ಒಂದೆಡೆ ಮೈದಾನದಲ್ಲಿ ವಿರಾಟ್ ಕೊಹ್ಲಿಯ ಅದ್ಭುತ ಫೀಲ್ಡಿಂಗ್ ಪ್ರದರ್ಶನ, ಮತ್ತೊಂದೆಡೆ ಪತಿಯ ಸಾಧನೆಯನ್ನು ಕಂಡು ಸಂಭ್ರಮಿಸಿದ ಅನುಷ್ಕಾ ಶರ್ಮಾ ಅವರ ರಿಯಾಕ್ಷನ್ ಅಭಿಮಾನಿಗಳ ಮನ ಗೆದ್ದಿದೆ. ಈ ವಿಡಿಯೋ ಕ್ಲಿಪ್‌ಗಳು "ಕಿಂಗ್ ಮತ್ತು ಕ್ವೀನ್" ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿವೆ.












Click it and Unblock the Notifications