Virat Kohli: ಇನ್‌ಸ್ಟಾಗ್ರಾಮ್ ಪೋಸ್ಟ್‌ ಮೂಲಕ ಭಾವನಾತ್ಮಕ ವಿಷಯ ಹಂಚಿಕೊಂಡ ವಿರಾಟ್‌ ಕೊಹ್ಲಿ!

Virat Kohli: ಆರ್‌ಸಿಬಿ ಅಭಿಮಾನಿಗಳು ಸಂತೋಷದ ಸಮುದ್ರದಲ್ಲಿ ಮಿಂದೇಳುತ್ತಿರುವಾಗಲೇ ಆರ್‌ಸಿಬಿಯ ಮಾಜಿ ನಾಯಕ ಹಾಗೂ ಆರ್‌ಸಿಬಿಯ ಆಟಗಾರ ಕಿಂಗ್‌ ವಿರಾಟ್‌ ಕೊಹ್ಲಿ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ನ ಮೂಲಕ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಬೆಂಗಳೂರಿನ ಬಗ್ಗೆಯೂ ವಿರಾಟ್‌ ಕೊಹ್ಲಿ ಅವರು ಮಾತನಾಡಿದ್ದಾರೆ. ಡ್ರಸ್ಸಿಂಗ್‌ ರೂಮ್‌ನ ವಿಡಿಯೋ ಸಹ ವೈರಲ್‌ ಆಗುತ್ತಿದೆ. ಇದೆಲ್ಲದರ ವಿವರ ಈ ಸುದ್ದಿಯಲ್ಲಿದೆ. ಆರ್‌ಸಿಬಿಯ ಗೆಲುವಿನ ನಂತರ ವಿರಾಟ್‌ ಹೇಳುತ್ತಿರುವ ಪ್ರತಿಯೊಂದು ಮಾತೂ ಸಹ ಅವರ ಅಭಿಮಾನಿಗಳು, ಆರ್‌ಸಿಬಿ & ಬೆಂಗಳೂರಿನೊಂದಿಗೆ ಯಾವ ರೀತಿ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ.

ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್ ಪೋಸ್ಟ್‌: ವಿರಾಟ್ ಕೊಹ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ತಂಡವು ನನ್ನ ಕನಸನ್ನು ಸಾಧ್ಯವಾಗಿಸಿತು. ನಾನು ಎಂದಿಗೂ ಮರೆಯದ ಸೀಸನ್ ಇದಾಗಿದೆ. ಕಳೆದ 2.5 ತಿಂಗಳುಗಳಲ್ಲಿ ನಾವು ಈ ಪ್ರಯಾಣವನ್ನು ಸಂಪೂರ್ಣವಾಗಿ ಆನಂದಿಸಿದ್ದೇವೆ. ಕೆಟ್ಟ ಸಮಯದಲ್ಲಿ ನಮ್ಮ ಆರ್‌ಸಿಬಿ ತಂಡವನ್ನು ಎಂದಿಗೂ ಬಿಟ್ಟು ಕೊಡದ ಆರ್‌ಸಿಬಿ ಅಭಿಮಾನಿಗಳಿಗಾಗಿ ಇದು ಅರ್ಪಣೆ. ಈ ಗೆಲುವು ಸುದೀರ್ಘ 18 ವರ್ಷಗಳ ನೋವು, ಹತಾಶೆ ಹಾಗೂ ಸೋಲಿನ ಆಘಾತಗಳಿಗೆ ಮದ್ದು. ಈ ತಂಡಕ್ಕಾಗಿ ಆಡುವಾಗ ಮೈದಾನದಲ್ಲಿ ಸರ್ವ ಸನ್ನತ ಪ್ರಯತ್ನವನ್ನೂ ಮಾಡಿದವರಿಗೆ ಈ ಗೆಲುವು ಅರ್ಪಣೆ. ಐಪಿಎಲ್ ಟ್ರೋಫಿಗೆ ಸಂಬಂಧಿಸಿದಂತೆ ಈ ಸಂಭ್ರವನ್ನು ಆಚರಿಸುವುದಕ್ಕೆ ನಾವು ಸುದೀರ್ಘ 18 ವರ್ಷಗಳ ಕಾಲ ಕಾದಿದ್ದೇವೆ. ಈ ಸಂಭ್ರಮ ನಿಜಕ್ಕೂ ಅವಿಸ್ಮರಣೀಯ ಅಂತ ಹೇಳಿದ್ದಾರೆ. ❤️ 🏆@royalchallengers.bengaluru

Virat Kohli shared an emotional message through an Instagram post

ವಿರಾಟ್‌ ಕೊಹ್ಲಿ ಅವರ ಪೋಸ್ಟ್‌ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದರೊಂದಿಗೆ ವಿರಾಟ್‌ ಕೊಹ್ಲಿ ಅವರು ಡ್ರಸ್ಸಿಂಗ್‌ ರೂಮ್‌ನಲ್ಲಿ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡದ ನಾಯಕ ರಜತ್‌ ಪಾಟಿದಾರ್‌ ಅವರೊಂದಿಗೆ ಮಾತನಾಡಿರುವ ವಿಡಿಯೋ ಸಹ ವೈರಲ್‌ ಆಗುತ್ತಿದೆ.

ಈ ವಿಡಿಯೋದಲ್ಲಿ ವಿರಾಟ್‌ ಕೊಹ್ಲಿ ಅವರು ತಮ್ಮ ಬ್ಯಾಟ್‌ ಅನ್ನು ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಕೊಟ್ಟಿದ್ದು ವಿರಾಟ್‌ ಬ್ಯಾಗ್‌ಗೆ ರಜತ್‌ ಪಾಟಿದಾರ್‌ ಮುತ್ತಿಟ್ಟಿರುವ ವಿಡಿಯೋ ವೈರಲ್‌ ಆಗುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ವಿರಾಟ್‌ ಕೊಹ್ಲಿ ಅವರು, ಈ ಸಂರ್ಭದ ಸಂತೋಷವನ್ನು ಪದಗಳಲ್ಲಿ ವಿವರಿಸುವುದಕ್ಕೆ ಅಸಾಧ್ಯ. ನಾನು ಈ ಸಂಭ್ರಮವನ್ನು ಕೇವಲ ಪದಗಳಲ್ಲಿ ಹೇಳಲಾರೆ. ನಾನು ನಿಜವಾಗಿಯೂ ಈ ಸಂಭ್ರಮದ ಸೈಡ್‌ ಎಫೆಕ್ಟ್‌ ಅನ್ನು ನಾಳೆ (ಬುಧವಾರ ಜೂನ್‌ ೪) ರಂದು ಬೆಂಗಳೂರಿನಲ್ಲಿ ಅನುಭವಿಸಲಿದ್ದೇನೆ. ಬೆಂಗಳೂರಿನಲ್ಲಿ ಆರ್‌ಸಿಬಿಯ ಅಭಿಮಾನಿಗಳೊಂದಿಗೆ ಈ ಸಂಭ್ರಮವನ್ನು ಹಂಚಿಕೊಳ್ಳುವುದರಲ್ಲಿ ಇರುವ ಖುಷಿಯೇ ಬೇರೆ. ಬೆಂಗಳೂರಿನಲ್ಲಿ ಆರ್‌ಸಿಬಿಯ ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಮಾಡುವುದು ಕನಸು ಅಂತ ಹೇಳಿಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಆರ್‌ಸಿಬಿಯ ಈ ಪೋಸ್ಟ್‌ ಹಾಗೂ ವಿಡಿಯೋಗಳು ಶೇರ್‌ ಆಗುತ್ತಿವೆ. ಇನ್ನು ಹಲವರು ಆರ್‌ಸಿಬಿಯ ಗೆಲುವಿನ ಫೋಟೋವನ್ನು ತಮ್ಮ ಫೇಸ್‌ಬುಕ್‌ ಮುಖಪುಟವನ್ನಾಗಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+