Virat Kohli: ಎಸ್‌ಆರ್‌ಎಚ್ ವಿರುದ್ಧ ಕೇವಲ 57 ರನ್‌ಗಳತ್ತ ಕಣ್ಣಿಟ್ಟ ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ
Virat Kohli: ಹೈದರಾಬಾದ್‌ನಲ್ಲಿ ಶುಕ್ರವಾರ (ಮೇ 22) ನಡೆಯುವ ಐಪಿಎಲ್ 2026ರ ಹೈವೋಲ್ಟೇಜ್ ಕಾಳಗದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ. ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಮತ್ತೊಂದು ಹೊಸ ದಾಖಲೆ ಮಾಡಲು ಸಜ್ಜಾಗಿದೆ. ಈ ಸಾಧನೆಗೆ ಬೇಕಿರುವುದು ಕೇವಲ 58 ರನ್‌ಗಳು ಮಾತ್ರ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ 2026ರಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿನ ಅಂಚಿನಲ್ಲಿ ನಿಂತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಲೀಗ್ ಹಂತದ ಕೊನೆಯ ಪಂದ್ಯಕ್ಕೂ ಮುನ್ನ ವಿಶೇಷ ದಾಖಲೆ ಬರೆಯಲು ಕೇವಲ 58 ರನ್‌ಗಳ ದೂರದಲ್ಲಿದ್ದಾರೆ.

ಹೊಸ ದಾಖಲೆಗೆ ಸಜ್ಜಾದ ವಿರಾಟ್ ಕೊಹ್ಲಿ
ಪ್ರಸ್ತುತ ಸೀಸನ್‌ನಲ್ಲಿ ಕೊಹ್ಲಿ 13 ಇನ್ನಿಂಗ್ಸ್‌ಗಳಲ್ಲಿ 542 ರನ್‌ಗಳನ್ನು ಗಳಿಸಿದ್ದಾರೆ. ಅವರು ಐಪಿಎಲ್‌ನ ಒಟ್ಟು 5 ಸೀಸನ್‌ಗಳಲ್ಲಿ 500ಕ್ಕೂ ಹೆಚ್ಚು ರನ್‌ಗಳನ್ನು ಪೂರೈಸಿದ್ದಾರೆ. ಇದೀಗ ಇಂದಿನ ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ 58 ರನ್ ಗಳಿಸಿದರೆ ಐಪಿಎಲ್ ಇತಿಹಾಸದಲ್ಲಿ 6ನೇ ಬಾರಿ 600ಕ್ಕೂ ಅಧಿಕ ರನ್‌ಗಳನ್ನು ದಾಖಲಿಸಿದ ಮೊದಲ ಬ್ಯಾಟರ್ ಎನ್ನುವ ಅಪರೂಪದ ಸಾಧನೆ ಮಾಡಲಿದ್ದಾರೆ.
5 ಬಾರಿ 600ಕ್ಕೂ ಅಧಿಕ ರನ್ ಸಿಡಿಸಿದ ವಿರಾಟ್
* 2013
* 2016
* 2023
* 2024
* 2025
ಈ ದಾಖಲೆ ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿ ಕ್ರಿಸ್ ಗೇಲ್, ಡೇವಿಡ್ ವಾರ್ನರ್ ಮತ್ತು ಕೆಎಲ್ ರಾಹುಲ್ ಇದ್ದಾರೆ. ಈ ಸೀಸನ್‌ನಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪ್ಲೇಆಫ್‌ಗೆ ಈಗಾಗಲೇ ಪ್ರವೇಶ ಮಾಡಿದೆ. ತಂಡದ ಯಶಸ್ಸಿನಲ್ಲಿ ಕೊಹ್ಲಿ ಬ್ಯಾಟಿಂಗ್ ಪ್ರಮುಖ ಪಾತ್ರವಹಿಸಿದೆ ಅಂದ್ರೆ ತಪ್ಪಾಗಲಾರದು.
ಸತತ ಸೀಸನ್‌ಗಳಲ್ಲಿ 600ಕ್ಕೂ ಅಧಿಕ ರನ್ ಗಳಿಸಿದವರು
* ಕ್ರಿಸ್ ಗೇಲ್ - ಮೂರು ಸೀಸನ್ (2011, 2012 ಮತ್ತು 2013)
* ಕೆ. ಎಲ್. ರಾಹುಲ್ - ಮೂರು ಸೀಸನ್ (2020, 2021 ಮತ್ತು 2022)












Click it and Unblock the Notifications