ಎಸ್‌ಆರ್‌ಎಚ್ ವಿರುದ್ಧ ಆರ್‌ಸಿಬಿ ಸೋಲಿನ ನಡುವೆಯೂ 211 ನಂಬರ್‌ನಿಂದ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ
Virat Kohli: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 22) ನಡೆದ ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರ್‌ಸಿಬಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಸೋಲಿನ ನಡುವೆಯೂ ಈ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಜೊತೆ ಆರಂಭಿಕ ವಿಕೆಟ್‌ಗೆ 60 ರನ್‌ಗಳ ಜೊತೆಯಾಟ ಆಡಿದ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚು ರನ್‌ಗಳ 211ನೇ ಜೊತೆಯಾಟದಲ್ಲಿ ಭಾಗಿಯಾದ ಆಟಗಾರ ಎಂಬ ವಿಶ್ವದಾಖಲೆ ನಿರ್ಮಿಸಿದರು. ಈ ಸಾಧನೆಯ ಹಾದಿಯಲ್ಲಿ ಕೊಹ್ಲಿ ಇಂಗ್ಲೆಂಡ್‌ನ ಮಾಜಿ ಆಟಗಾರ ಅಲೆಕ್ಸ್ ಹೇಲ್ಸ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಟಿ20ಯಲ್ಲಿ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟಗಳ ಸಂಖ್ಯೆ
* ವಿರಾಟ್ ಕೊಹ್ಲಿ - 211
* ಅಲೆಕ್ಸ್ ಹೇಲ್ಸ್ - 210
* ಡೇವಿಡ್ ವಾರ್ನರ್ - 200
* ಬಾಬರ್ ಅಜಮ್ - 196
* ಕ್ರಿಸ್ ಗೇಲ್ - 191
ಎಸ್‌ಆರ್‌ಎಚ್ ವಿರುದ್ಧ ಆರ್‌ಸಿಬಿ ಸೋಲು
ಶುಕ್ರವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ ರೋಚಕ ಪಂದ್ಯದಲ್ಲಿ ಇಶಾನ್ ಕಿಶನ್ ಅವರ ಸ್ಫೋಟಕ ಬ್ಯಾಟಿಂಗ್ (79 ರನ್) ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು 4 ವಿಕೆಟ್ ನಷ್ಟಕ್ಕೆ 255 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಆದರೆ ಆರ್‌ಸಿಬಿ 256 ರನ್‌ಗಳ ಬೃಹತ್ ಮೊತ್ತವನ್ನು ಮುಟ್ಟಲು ವಿಫಲವಾಗುವ ಮೂಲಕ ಸೋಲನುಭವಿಸಿತು.
ಮಿಂಚಿದ ಇಶಾನ್ ಕಿಶನ್, ಅಭಿಷೇಕ್, ಕ್ಲಾಸೆನ್
ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಅಭಿಷೇಕ್ ಶರ್ಮಾ 56(22), ಹೆನ್ರಿಚ್ ಕ್ಲಾಸೆನ್ 51(24), ಇಶಾನ್ ಕಿಶನ್ 79(46), ಟ್ರಾವಿಟ್ ಹೆಡ್ 26(16), ನಿತೀಶ್ ಕುಮಾರ್ ರೆಡ್ಡಿ ಅಜೇಯ 29(12) ರನ್‌ಗಳನ್ನು ಸಿಡಿಸುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಡಿಸಿದರು.
'ಎಸ್‌ಆರ್‌ಎಚ್ ಬ್ಯಾಟಿಂಗ್ ಬಳಿಕ ಮಾತನಾಡಿದ ಹೆನ್ರಿಕ್ ಕ್ಲಾಸೆನ್ ಇದು ನಿಜಕ್ಕೂ ಒಂದು ಅದ್ಭುತವಾದ ಇನ್ನಿಂಗ್ಸ್ ಆಗಿತ್ತು. ಆರಂಭದ ಕೆಲವು ಎಸೆತಗಳಲ್ಲಿ ನಾನು ಸ್ವಲ್ಪ ಪರದಾಡಿದೆ ಆದರೆ ಹ್ಯಾಜಲ್‌ವುಡ್ ಓವರ್‌ನಲ್ಲಿ ಬಂದ 27 ರನ್‌ಗಳು ನನ್ನ ಲಯವನ್ನು ಮರಳಿ ತಂದುಕೊಟ್ಟವು,' ಎಂದು ಹೇಳಿದರು.
'ಬಳಿಕ 9 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿದ್ದ ನೀವು ನಂತರ ಅಬ್ಬರಿಸಲು ಶುರುವಿಟ್ಟುಕೊಂಡಿದ್ದಕ್ಕೆ ಕಾರಣವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಈ ಫಾರ್ಮ್ಯಾಟ್‌ನಲ್ಲಿ 12 ಎಸೆತಗಳಲ್ಲಿ 5 ರನ್ ಗಳಿಸುವುದು ಒಂದು ರೀತಿ ಒತ್ತಡ. ಬಳಿಕ ನಾನು ಕೂಡ ಅತಿ ಬೇಗ ರನ್ ವೇಗವನ್ನು ಹೆಚ್ಚಿಸಿಕೊಳ್ಳಬೇಕಿತ್ತು. ಆದ್ದರಿಂದ ಇಲ್ಲಿ ಔಟ್ ಆಗುವುದು ಇಲ್ಲವೇ ರನ್ ರೇಟ್‌ಗೆ ಸರಿಸಮನಾಗಿ ಆಡುವುದು ಎಂಬ ಎರಡೇ ಆಯ್ಕೆಗಳಿದ್ದವು,' ಎಂದು ಹೇಳಿದರು.
'ಪಿಚ್ ಸ್ವಲ್ಪ ನಿಧಾನವಾಗಿದೆ ಎನಿಸಿತು, ಆದ್ದರಿಂದ ಆರಂಭದಲ್ಲಿ ರನ್ ಗಳಿಸಲು ತುಸು ಕಷ್ಟವಾಯಿತು, ನಂತರ ಬ್ಯಾಟಿಂಗ್ ಸುಲಭವಾಯಿತು. ಜೊತೆಯಾಟದಲ್ಲಿ ಒಬ್ಬರಿಗೊಬ್ಬರು ಪೂರಕವಾಗಿ ಆಡುವುದು ಬಹಳ ಸಹಾಯ ಮಾಡುತ್ತದೆ. ಈ ಸೀಸನ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ನಾವು ಅದನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದೇವೆ." ಎಂದು ಹೇಳಿದರು. ಒಟ್ಟಾರೆಯಾಗಿ ಹೇಳುವುದಾದರೆ ಸನ್‌ರೈಸರ್ಸ್ ಬ್ಯಾಟರ್‌ಗಳಿಗೆ ಇಂದು ಮೈದಾನದಲ್ಲಿ ಅತ್ಯಂತ ಯಶಸ್ವಿ ದಿನವಾಗಿತ್ತು ಅಂದ್ರೆ ತಪ್ಪಾಗಲಾರದು. ಮತ್ತೊಂದಡೆ ಸೋಲಿನ ನಡುವೆಯೂ ಆರ್‌ಸಿಬಿ ಟಾಪ್ ಎರಡರಲ್ಲಿ ಸ್ಥಾನ ಖಚಿತಪಡಿಸಿಕೊಂಡರೆ, ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯನ್ನೂ ಇದೇ ಪಂದ್ಯದ ಮೂಲಕ ಮಾಡಿರುವುದು ವಿಶೇಷವಾಗಿದೆ.












Click it and Unblock the Notifications