Champions Trophy: ಬಾಂಗ್ಲಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಕೊಹ್ಲಿ, ಶಮಿ ವಿಶೇಷ ದಾಖಲೆ
Champions Trophy 2025: ನಿನ್ನೆ (ಫೆಬ್ರವರಿ 20) ನಡೆದ ಚಾಂಪಿಯನ್ಸ್ ಟ್ರೋಪಿ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾ ದೇಶದ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. ಇದೇ ವೇಳೆ ಟೀಂ ಇಂಡಿಯಾ ತಂಡದ ವೇಗಿ ಮೊಹಮ್ಮದ್ ಶಮಿ ಹಾಗೂ ವಿರಾಟ್ ಕೊಹ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಹಾಗಾದರೆ ಸಾಧನೆಗಳು ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ದುಬೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೂರು ವಿಕೆಟ್ ಕೀಳುವ ಮೂಲಕ ಮೊಹಮ್ಮದ್ ಶಮಿ ಈ ವಿಶೇಷ ಸಾಧನೆ ಮಾಡಿದರೆ, ವಿರಾಟ್ ಕೊಹ್ಲಿ ಅವರು ಎರಡಯ ಕ್ಯಾಚ್ ಹಿಡಿಡಿಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

ಶಮಿ ಸಾಧನೆ ಏನು?: ನಿನ್ನೆ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಬೌಲರ್ ಮೊಹಮ್ಮದ್ ಶಮಿ ಸೌಮ್ಯ ಸರ್ಕಾರ್, ಮೆಹಿದಿ ಹಸನ್ ಮತ್ತು ಜಾಕಿರ್ ಅಲಿ ಮಿರಾಜ್ ವಿಕೆಟ್ ಕೀಳುವ ಮೂಲಕ ಏಕದಿನ ಪಂದ್ಯಗಳಲ್ಲಿ 200 ವಿಕೆಟ್‌ಗಳನ್ನು ಪಡೆದ ಅತ್ಯಂತ ವೇಗದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಅಜಿತ್ ಅಗರ್ಕರ್ ಮತ್ತು ಜಹೀರ್ ಖಾನ್ ಅವರ ದಾಖಲೆಗಳನ್ನು ಮುರಿದರು.
ಏಕದಿನ ಪಂದ್ಯಗಳಲ್ಲಿ 200 ವಿಕೆಟ್ ಪಡೆಯಲು ಅಜಿತ್ ಅಗರ್ಕರ್ 133 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರೆ, ಶಮಿ ಕೇವಲ 103 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಮೊಹಮ್ಮದ್ ಶಮಿ, ಅಜಿತ್ ಅಗರ್ಕರ್ ಹೊರೆತುಪಡಿಸಿ ಹೊರೆತುಪಡಿಸಿದರೆ, ಜಹೀರ್ ಖಾನ್ 144 ಇನ್ನಿಂಗ್ಸ್, ಅನಿಲ್ ಕುಂಬ್ಳೆ 147 ಇನ್ನಿಂಗ್ಸ್, ಜಾವಗಲ್ ಶ್ರೀನಾಥ್ 147 ಇನ್ನಿಂಗ್ಸ್, ಕಪಿಲ್ ದೇವ್ 166 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಅಲ್ಲದೆ, ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ವೇಗವಾಗಿ 200 ವಿಕೆಟ್ ಪಡೆದ ವಿಶ್ವದ 2ನೇ ಬೌಲರ್ ಎಂಬ ಹೆಗ್ಗಳಿಗೆ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 102 ಇನ್ನಿಂಗ್ಸ್‌ಗಳಲ್ಲಿ 200 ವಿಕೆಟ್ ಪಡೆದರೆ, ಶಮಿ 103 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿ 2ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಸಕ್ಲೈನ್ ಮುಷ್ತಾಕ್ 104 ಇನ್ನಿಂಗ್ಸ್, ನ್ಯೂಜಿಲ್ಯಾಂಡ್ ಟ್ರೆಂಟ್ ಬೌಲ್ಟ್ 107, ಆಸ್ಟ್ರೇಲಿಯಾದ ಬ್ರೆಟ್ ಲೀ 112 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ನಿನ್ನೆ ಬಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲಿ ಮೊಹಮ್ಮದ್ ಶಮಿ 10 ಓವರ್ ಬೌಲಿಂಗ್ ಮಾಡುವ ಮೂಲಕ 53 ರನ್ ನೀಡಿ 5 ವಿಕೆಟ್ ಕಿತ್ತರು. ಹರ್ಷಿತ್ ರಾಣಾ 3ವಿಕೆಟ್, ಅಕ್ಷರ್ ಪಟೇಲ್ 2 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಇವರು 49. 3 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಿತ್ತು ಬಾಂಗ್ಲಾ ದೇಶವನ್ನು 228 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ವಿರಾಟ್ ಕೊಹ್ಲಿ ಸಾಧನೆ ಏನು?: ನಿನ್ನೆ ಬಾಂಗ್ಲಾ ದೇಶದ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಎರಡು ಕ್ಯಾಚ್‌ಗಳನ್ನು ಪಡೆಯುವ ಮೂಲಕ ವಿಶೇಷ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಬಾಂಗ್ಲಾ ತಂಡದ ನಾಯಕ ನಜ್ಮುಲ್ ಹಸನ್ ಶ್ಯಾಂಟೋ, ಜಾಕರ್ ಅಲಿ ಅವರ ಕ್ಯಾಚ್‌ಗಳನ್ನು ಪಡೆದ ಕೊಹ್ಲಿ, ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಕ್ಯಾಚ್‌ಗಳನ್ನು ಪಡೆದಿದ್ದಾರೆ.
ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಮೊಹಮ್ಮದ್ ಅಜರುದ್ದೀನ್ ಅವರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ. ಈವರೆಗೂ ಒಟ್ಟು 298 ಪಂದ್ಯಗಳಲ್ಲಿ ಆಡಿರುವ ವಿರಾಟ್ ಕೊಹ್ಲಿ 156 ಕ್ಯಾಚ್ ಪಡೆದಿದ್ದಾರೆ. ಮಾಜಿಕ ಕ್ರಿಕೆಕೆಟಿಗ ಅಜರುದ್ದೀನ್ 334 ಪಂದ್ಯಗಳಲ್ಲಿ ಇಷ್ಟೇ ಕ್ಯಾಚ್ ಪಡೆದಿದ್ದಾರೆ.
ಭಾರತ ಪರ ನಂತರ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ 463 ಪಂದ್ಯಗಳಲ್ಲಿ 140, ರಾಹುಲ್ ದ್ರಾವಿಡ್ 344 ಪಂದ್ಯಗಳಲ್ಲಿ 124 ಕ್ಯಾಚ್ ಹಾಗೂ ಸುರೇಶ್ ರೈನಾ ಅವರು 226 ಪಂದ್ಯಗಳಲ್ಲಿ 102 ಕ್ಯಾಚ್ ಪಡೆದಿದ್ದಾರೆ.
ಅತೀ ಹೆಚ್ಚು ಕ್ಯಾಚ್ ಪಡೆದವರ ಪಟ್ಟಿ
* ಶ್ರೀಲಂಕಾದ ಜಯವರ್ಧನೆ - 448 ಪಂದ್ಯಗಳಲ್ಲಿ 218 ಕ್ಯಾಚ್
* ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ - 375 ಪಂದ್ಯಗಳಲ್ಲಿ 160 ಕ್ಯಾಚ್
* ಭಾರತದ ವಿರಾಟ್ ಕೊಹ್ಲಿ - 298 ಪಂದ್ಯಗಳಲ್ಲಿ 156 ಕ್ಯಾಚ್












Click it and Unblock the Notifications