Vinod Kambli: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಜೊತೆ ಕ್ರಿಕೆಟ್ ಆಡಿದ್ದ ವಿನೋದ್ ಕಾಂಬ್ಳಿ ವೃದ್ಧಾಶ್ರಮ ಸೇರಿದ್ದೇಕೆ?

Vinod Kambli: ಕ್ರಿಕೆಟ್‌ ದೇವರೆಂದೇ ಹೆಸರುವಾಸಿಯಾಗಿರುವ ಸಚಿನ್ ತೆಂಡೂಲ್ಕರ್ ಅವರ ಜೊತೆಗೆ ಬ್ಯಾಟ್‌ ಬೀಸಿದ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಅವರು ವೃದ್ಧಾಶ್ರಮ ಸೇರಿದ್ದಾರೆ. ಹಾಗಾದ್ರೆ ಕಾಂಬ್ಳಿಗೆ ಈ ಪರಿಸ್ಥಿತಿ ಬರಲು ಕಾರಣ ಏನು ಹಾಗೂ ಅವರು ಹೇಳುವುದೇನು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಭಾರತೀಯ ಕ್ರಿಕೆಟ್‌ನ ಮಾಜಿ ಆಟಗಾರ, ಎಡಗೈ ಬ್ಯಾಟರ್ ವಿನೋದ್ ಕಾಂಬ್ಳಿ ತಮ್ಮ ಕ್ರಿಕೆಟ್ ಜೀವನದ ಅದ್ಭುತ ನೆನಪುಗಳನ್ನು ಮತ್ತೆ ಮೆಲಕು ಹಾಕುತ್ತಾ ವೃದ್ಧಾಶ್ರಮದಲ್ಲಿ ಜೀವನ ನಡೆಸುತ್ತಿದ್ದಾರೆ. ಮಹಾರಾಷ್ಟ್ರದ ಥಾಣೆಯಲ್ಲಿರುವ 'ನಿಧಾನ್ ಸೆಂಟರ್ ಫಾರ್ ಎಲ್ಡರ್ಲಿ ಕೇರ್' (ವೃದ್ಧಾಪ್ಯ ಆರೈಕೆ ಕೇಂದ್ರ) ಎಂಬಲ್ಲಿ ಇತ್ತೀಚೆಗೆ ಪ್ರವೇಶ ಪಡೆದಿರುವ ಅವರು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿರುವುದಾಗಿ ವಿಡಿಯೋ ಮೂಲಕ ತಿಳಿಸಿದ್ದಾರೆ.

Vinod Kambli in Elderly Care Centre Why He Moved There What He Said Know Complete details

ವೃದ್ಧಾಶ್ರಮಕ್ಕೆ ಸೇರಲು ಕಾರಣ ಏನು?

ಆರೋಗ್ಯದಲ್ಲಿ ಏರುಪೇರಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ, ಆಹಾರ ಮತ್ತು ನೀರನ್ನು ಸೇವಿಸಲು ನಿರಾಕರಿಸುತ್ತಿದ್ದ ಕಾಂಬ್ಳಿ ಅವರನ್ನು ವೈದ್ಯರಾದ ಡಾ.ಶೈಲೇಶ್ ಅಗರ್ವಾಲ್ ಅವರ ಸಲಹೆಯಂತೆ ಈ ಕೇಂದ್ರಕ್ಕೆ ಕರೆತರಲಾಯಿತು. ಮಾನಸಿಕ ಹಾಗೂ ದೈಹಿಕ ಬದಲಾವಣೆ ಮತ್ತು ಹೊಸ ವಾತಾವರಣ ಅವರ ಚೇತರಿಕೆಗೆ ಸಹಕಾರಿಯಾಗಬಹುದು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಮೂರು ವಾರಗಳ ಕಾಲ ಇಲ್ಲಿ ತಂಗಿದ್ದ ಅವರು ಇತ್ತೀಚೆಗೆ ಗಣೇಶ ಪೂಜೆಗಾಗಿ ಮನೆಗೆ ತೆರಳಿದ್ದರು.

ವೃದ್ಧಾಶ್ರಮದಲ್ಲಿ ದಿನಚರಿ ಏನಿದೆ?

ನಿಧಾನ್ ಕೇಂದ್ರದಲ್ಲಿ ಕಾಂಬ್ಳಿ ಅವರ ಆರೈಕೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕೇಂದ್ರದ ಕಾರ್ಯದರ್ಶಿ ಹಾಗೂ ಕಾಂಬ್ಳಿ ಅವರ ಸಹಾಯಕಿ ರಂಜನಾ ಯೋಗೇಶ್ ದಾವಣೆ ನೀಡಿದ ಮಾಹಿತಿ ಪ್ರಕಾರ, ವಾಕಿಂಗ್‌ನೊಂದಿಗೆ ಕಾಂಬ್ಳಿ ಅವರ ದಿನ ಪ್ರಾರಂಭವಾಗುತ್ತದೆ. ನಂತರ ಉಪಹಾರ, ವೈದ್ಯಕೀಯ ತಪಾಸಣೆ, ಯೋಗ ಹಾಗೂ ಮಧ್ಯಾಹ್ನದ ಊಟ ನೆರವೇರುತ್ತದೆ. ಸಂಜೆಯ ವೇಳೆಯಲ್ಲಿ ಫಿಸಿಯೋಥೆರಪಿ ಜೊತೆಗೆ ಸಂಗೀತ ಕಾರ್ಯಕ್ರಮಗಳಲ್ಲೂ ಅವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.

ಕಾಂಬ್ಳಿ ತಮ್ಮ ವಾರ್ಡ್‌ನವ ಸಹವರ್ತಿಗಳೊಂದಿಗೆ ಮುಕ್ತವಾಗಿ ಮಾತನಾಡುತ್ತಾ, ತಮ್ಮ ವೃತ್ತಿಜೀವನದ ಸ್ಮರಣೀಯ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಪಾಕಿಸ್ತಾನದ ಇಕ್ಬಾಲ್ ಸಿಕಂದರ್ ವಿರುದ್ಧ ಬಾರಿಸಿದ ಸಿಕ್ಸರ್, ಗಳಿಸಿದ ಶತಕಗಳು ಹಾಗೂ ದ್ವಿಶತಕಗಳ ಕುರಿತು ಕಥೆಗಳನ್ನು ಹೇಳುತ್ತಾರೆ. ಅವರ ಸಹವರ್ತಿಯಾದ 70 ವರ್ಷದ ಲಕ್ಷ್ಮೀ ನಾರಾಯಣ್ ಅವರು ಮಾತನಾಡಿ, 'ಕಾಂಬ್ಳಿ ಅವರಂತಹ ದಿಗ್ಗಜನ ಜೊತೆ ಇರುವುದು ತುಂಬಾ ಸಂತಸ ತಂದಿದೆ. ಅವರು ತಮ್ಮ ಹಳೆಯ ದಿನಗಳ ಕಥೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ, ಅತ್ಯಂತ ಮುಗ್ಧ ಮತ್ತು ಒಳ್ಳೆಯ ವ್ಯಕ್ತಿ,' ಎಂದು ಹೊಗಳಿದ್ಧಾರೆ.

ವೈರಲ್ ಆದ ವಿಡಿಯೋದಲ್ಲಿ ಏನಿದೆ?

ಸೆಪ್ಟೆಂಬರ್ 23ರಂದು ಈ ಕೇಂದ್ರದಿಂದ ಕಾಂಬ್ಳಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ವಿಡಿಯೋದಲ್ಲಿ ಮಾತನಾಡಿದ್ದ ಅವರು, 'ನಾನಿಲ್ಲಿ ಉತ್ತಮ ಚಿಕಿತ್ಸೆ ಪಡೆಯುತ್ತಿದ್ದೇನೆ. ಕೇಂದ್ರದ ಸ್ವಚ್ಛತೆ ಮತ್ತು ಸೌಲಭ್ಯಗಳು ಅತ್ಯುತ್ತಮವಾಗಿವೆ. ನನಗೆ ಬೇರೆಡೆ ಇದ್ದೇನೆ ಎನಿಸುತ್ತಿಲ್ಲ, ಮನೆಯಂತೆ ಭಾಸವಾಗುತ್ತಿದೆ. ಎಲ್ಲರೂ ಅಪಾರ ಪ್ರೀತಿ, ಗೌರವ ನೀಡುತ್ತಿದ್ದಾರೆ. ಪ್ರತಿಯೊಬ್ಬರೂ ಇಲ್ಲಿನ ನಿಯಮಗಳನ್ನು ಪಾಲಿಸಬೇಕು,' ಎಂದು ಹೇಳಿದ್ದರು.

ವಿನೋದ್ ಕಾಂಬ್ಳಿ ಸಾಧನೆ

ಸಚಿನ್ ತೆಂಡೂಲ್ಕರ್ ಜೊತೆ 664 ರನ್‌ಗಳ ವಿಶ್ವದಾಖಲೆಯ ಪಾಲುದಾರಿಕೆ ನೀಡುವ ಮೂಲಕ ಕಾಂಬ್ಳಿ ಜಗತ್ತಿಗೆ ಪರಿಚಿತರಾಗಿದ್ದರು. ಕೇವಲ 14 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 1,000 ರನ್ ಪೂರೈಸಿ ಅತ್ಯಂತ ವೇಗವಾಗಿ ಈ ಮೈಲಿಗಲ್ಲು ತಲುಪಿದ ಭಾರತೀಯ ಎಂಬ ದಾಖಲೆ ನಿರ್ಮಿಸಿದ್ದರು.

ತಮ್ಮ ವೃತ್ತಿಜೀವನದಲ್ಲಿ 17 ಟೆಸ್ಟ್ (1,084 ರನ್) ಹಾಗೂ 104 ಏಕದಿನ ಪಂದ್ಯಗಳನ್ನು (2,477 ರನ್) ಆಡಿದ್ದಾರೆ. ಆದರೆ, ಆಟದಿಂದ ದೂರವಾದ ನಂತರ ಅವರ ಆರೋಗ್ಯ ಕ್ಷೀಣಿಸಿತು. ಮದ್ಯಪಾನದ ಚಟ, ಹೃದಯಾಘಾತ, ಖಿನ್ನತೆ ಮತ್ತು ನರಸಂಬಂಧಿ ತೊಂದರೆಗಳಿಂದಾಗಿ ಅವರು ಹಲವಾರು ಬಾರಿ ರಿಹ್ಯಾಬ್ ಕೇಂದ್ರಗಳನ್ನು ಸಂಪರ್ಕಿಸಬೇಕಾಯಿತು. ಪ್ರಸ್ತುತ, ನಿಧಾನ್ ಕೇಂದ್ರದ ಮುಖ್ಯಸ್ಥರು ಕಾಂಬ್ಳಿ ಅವರನ್ನು ಒಬ್ಬ ದಿಗ್ಗಜನನ್ನಾಗಿ ಗೌರವಿಸುತ್ತಿದ್ದು, ಅವರು ಯಾವಾಗ ಬೇಕಾದರೂ ಬಂದು ವಿಶ್ರಾಂತಿ ಪಡೆಯಲು ಮುಕ್ತ ಅವಕಾಶ ಕಲ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+