ಮೈದಾನದಲ್ಲಿ ಲೆಜೆಂಡ್ ಬೌಲರ್‌ಗಳ ಮೇಲೆ ಸವಾರಿ, ಬಸ್‌ನಲ್ಲಿ ಸ್ವಿಚ್, ಲೈಟ್, ಎಸಿ ಜೊತೆ ಕಿಲಾಡಿ ಆಟ; ವೈಭವ್ ವಿಡಿಯೋ ಭಾರಿ ವೈರಲ್
Vaibhav Suryavanshi: ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚುತ್ತಿರುವ ವೈಭವ್ ಸೂರ್ಯವಂಶಿ, ಮೈದಾನದ ಹೊರಗೆ ಇನ್ನೂ ಅಪ್ಪಟ ಬಾಲಕನೇ. ಹೈದರಾಬಾದ್‌ಗೆ ಪ್ರಯಾಣಿಸುವಾಗ ತಮ್ಮ ಆರ್‌ಆರ್ ತಂಡದ ಬಸ್ಸಿನಲ್ಲಿ ಲೈಟ್ ಆನ್-ಆಫ್ ಮಾಡುತ್ತಾ ಆಟವಾಡುತ್ತಿರುವ ಅವರ ವಿಡಿಯೋ ಈಗ ಸಾಮಾಜಿಕ ಜಾಲಯಾಣದಲ್ಲಿ ಸಖತ್ ಭಾರಿ ವೈರಲ್ ಆಗಿದೆ.
ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್ 2026ರಲ್ಲಿ ಅದ್ಭುತ ಆರಂಭವನ್ನು ಪಡೆದಿದ್ದು, ಸತತ ನಾಲ್ಕು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಸೋಲಿಸುವ ಮೂಲಕ ಅಭಿಯಾನ ಆರಂಭಿಸಿದ ಅವರು, ನಂತರ ಗುಜರಾತ್ ಟೈಟಾನ್ಸ್ ವಿರುದ್ಧವೂ ಜಯಗಳಿಸಿದರು.

ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ಆರ್‌ಆರ್
ರಿಯಾನ್ ಪರಾಗ್ ನಾಯಕತ್ವದ ಈ ತಂಡವು, ತವರಿನಲ್ಲಿ ನಡೆದ 11 ಓವರ್‌ಗಳ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿತು. ಅದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸುಲಭ ಜಯ ದಾಖಲಿಸಿತು. ಸದ್ಯ ಭರ್ಜರಿ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್, ಟೂರ್ನಿಯ ಮಧ್ಯಭಾಗದಲ್ಲೂ ಇದೇ ರೀತಿಯ ಪ್ರಾಬಲ್ಯವನ್ನು ಮುಂದುವರಿಸುವ ಗುರಿ ಹೊಂದಿದೆ.
ಎರಡು ಅರ್ಧಶತಕ ಬಾರಿಸಿದ ವೈಭವ್
ಅದರಲ್ಲೂ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಎರಡು ಅರ್ಧಶತಕಗಳನ್ನು ಬಾರಿಸಿರುವ ಈ ಎಡಗೈ ಆರಂಭಿಕ ಆಟಗಾರ, ಮುಂದಿನ ಪಂದ್ಯಗಳಲ್ಲೂ ಅಬ್ಬರಿಸುವ ಭರವಸೆ ಮೂಡಿಸಿದ್ದಾರೆ. ಇವೆಲ್ಲದರ ನಡುವೆಯೇ ಇವರ ಮತ್ತೊಂದು ಆಟದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಬಸ್‌ನಲ್ಲಿ ಆಟ ಆಡಿದ ವೈಭವ್ ಸೂರ್ಯವಂಶಿ
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಮುಂದಿನ ಪಂದ್ಯಕ್ಕಾಗಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ತೆರಳಲು ಸಜ್ಜಾಗುತ್ತಿದ್ದಾಗ, ಸೂರ್ಯವಂಶಿ ತಂಡದ ಬಸ್ ಒಳಗೊನ ಲೈಟ್ ಜೊತೆ ಆಟವಾಡುತ್ತಿರುವುದು ಕಂಡುಬಂದಿದೆ. ಇವರು ಪದೇ ಪದೇ ಲೈಟ್ ಆನ್ ಮತ್ತು ಆಫ್ ಮಾಡುತ್ತಿದ್ದರು. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು, "ಮೈದಾನದಲ್ಲಿ ಅಬ್ಬರಿಸುವ ಈತ ನಿಜಕ್ಕೂ ಮಗು" ಎಂದು ಬರೆದುಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಕೇವಲ 26 ಎಸೆತಗಳಲ್ಲಿ 78 ರನ್ ಚಚ್ಚಿ ಮಿಂಚಿದ್ದರು. ತಮ್ಮ ಈ ಸ್ಫೋಟಕ ಇನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಕ್ರಿಕೆಟ್ ದಿಗ್ಗಜರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
How can someone doubt his age. 😭 pic.twitter.com/GZ5mxmYMMk
— Selfless⁴⁵ (@SelflessCricket) April 12, 2026
ಸ್ಟಾರ್ ಬೌಲರ್‌ಗಳ ವಿರುದ್ಧ ವೈಭವ್ ದಂಡಯಾತ್ರೆ
ಜೋಶ್ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಅಂತಹ ಅಂತಾರಾಷ್ಟ್ರೀಯ ಮಟ್ಟದ ಬೌಲರ್‌ಗಳ ಎಸೆತಗಳನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿ ಗಮನ ಸೆಳೆದಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ಈ ಯುವಕ ಮೈದಾನದ ಹೊರಹಗಡೆ ಏನೇ ಮಾಡಿದರೂ ಕೂಡ ಕಾಮಿಡಿಯಾಗಿರುತ್ತದೆ. ಇದರಿಂದ ಅಭಿಮಾನಿಗಳಿಗೂ ಮನರಂಜನೆ ಸಿಗುತ್ತದೆ ಎನ್ನುವುದಕ್ಕೆ ಬಸ್‌ನಲ್ಲಿ ನಡೆದ ಘಟನೆಯೇ ಪ್ರಮುಖ ಸಾಕ್ಷಿಯಾಗಿದೆ.
-
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ಬೌಲರ್ಗಳಿಗೆ ಬೆವರಿಳಿಸಿದ ಆರ್ಸಿಬಿ ಫಿಲ್ ಸಾಲ್ಟ್ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
ಆಶಾ ಭೋಸ್ಲೆಗೆ ಮುಂಬೈ ಇಂಡಿಯನ್ಸ್-ಆರ್ಸಿಬಿ ಪಂದ್ಯದಲ್ಲಿ ಗೌರವ ನಮನ, ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದ ಆಟಗಾರರು -
ಆರ್ಸಿಬಿ ಜಯದ ಕನಸಿಗೆ ತಣ್ಣೀರೆರಚಿದ ವೈಭವ್ ಸೂರ್ಯವಂಶಿ; ಆರ್‌ಆರ್ ಪಾಲಿಗೆ ಹೀರೋ ಆದ 15 ವರ್ಷದ ಬಾಲಕ -
ಒಂದೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಒಲಿದ ಮೂರು ಮರೆಯಲಾಗದ ಗೌರವಗಳು; ಕಿಂಗ್ ಕೊಹ್ಲಿ ಸಂದೇಶ ಭಾರೀ ವೈರಲ್ -
Vaibhav Suryavanshi: ನನ್ನ ಕನಸು ಕೊನೆಗೂ ನನಸಾಯಿತು; ವಿರಾಟ್ ಕೊಹ್ಲಿಗೆ ವಿಶೇಷ ಧನ್ಯವಾದ ಹೇಳಿದ ವೈಭವ್ ಸೂರ್ಯವಂಶಿ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
PBKS VS SRH: ಹೈದರಾಬಾದ್ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡ ಪಂಜಾಬ್ ಕಿಂಗ್ಸ್ -
IPL 2026: ಸಿಎಸ್‌ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೆ ಮಳೆ ಭೀತಿ ಇದ್ಯಾ? ಹವಾಮಾನ ಇಲಾಖೆ ಹೇಳೋದೇನು -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ?












Click it and Unblock the Notifications