ಆರ್‌ಸಿಬಿಯ ಕ್ರಿಸ್‌ ಗೇಲ್‌ಗೆ ಸೆಡ್ಡು ಹೊಡೆದ 15 ವರ್ಷದ ವೈಭವ್ ಸೂರ್ಯವಂಶಿ; ಯಾರೂ ಮಾಡದ ದಾಖಲೆ ಮೇಲೆ ಕಣ್ಣಿಟ್ಟ ಬಾಲಕ

Vaibhav Sooryavanshi: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ 15 ವರ್ಷದ 'ವಂಡರ್ ಕಿಡ್‌' ವೃಭವ್ ಸೂರ್ಯವಂಶಿ ಅವರು ಘಟಾನುಘಟಿ ಬೌಲರ್‌ಗಳ ವಿರುದ್ಧ ದಂಡಯಾತ್ರೆ ಮುಂದುವರೆಸಿದ್ದಾರೆ. ಇದೀಗ ಅವರು ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಯಾರೂ ಮಾಡದ ಸಾಧನೆಯ ಮೇಲೆ ಕಣ್ಣಿಟ್ಟಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕ್ರಿಸ್ ಗೇಲ್ 2013ರ ಐಪಿಎಲ್‌ನಲ್ಲಿ ಪುಣೆ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವಾಗ ಕೇವಲ 66 ಎಸೆತಗಳಲ್ಲಿ ಅಜೇಯ 175 (13 ಬೌಂಡರಿ ಮತ್ತು 17 ಸಿಕ್ಸ್‌) ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿ ಗೇಲ್ ಕೇವಲ 30 ಎಸೆತಗಳಲ್ಲಿ 100 ರನ್‌ ಗಳಿಸಿ ಅತ್ಯಂತ ವೇಗದ ಟಿ20 ಶತಕವನ್ನು ದಾಖಲಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Vaibhav Sooryavanshi Targets Historic T20 Double Century RR Wonder Kid Eyes Chris Gayle Record

ಗೇಲ್ ದಾಖಲೆ ಮುರಿಯುವುದಾಗಿ ಚಾಲೆಂಜ್

ಗೇಲ್ ಸಿಡಿಸಿದ ಈ ಅಜೇಯ 175 ರನ್‌ಗಳ ದಾಖಲೆಯನ್ನು ಟಿ20ಯಲ್ಲಿ ಇದುವರೆಗೂ ಯಾವ ಆಟಗಾರನೂ ಕೂಡ ಮಾಡಿಲ್ಲ. ಆದರೆ ಇದೀಗ ಈ ಸಾಹಸಕ್ಕೆ 15 ವರ್ಷದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಅವರು ಮುಂದಾಗಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಬಾರಿಸುವ ಮೊದಲ ಆಟಗಾರನಾಗುವುದು ಈ 15 ವರ್ಷದ ಬಾಲಕನ ಈಗಿನ ಗುರಿಯಾಗಿದೆ.

ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ದ್ವಿಶತಕ

ಸಚಿನ್ ತೆಂಡೂಲ್ಕರ್ ಅವರು ಏಕದಿನ ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಬಾರಿಸಿ ಇತಿಹಾಸ ಬರೆದಿದ್ದರು. ಅದರಂತೆಯೇ 16 ವರ್ಷಗಳ ನಂತರ ಸೂರ್ಯವಂಶಿ ಟಿ20 ಮಾದರಿಯಲ್ಲಿ ಅಂತಹದ್ದೇ ಅದ್ಭುತ ದಾಖಲೆ ಮಾಡಲು ಸಜ್ಜಾಗಿದ್ದಾರೆ. ಅವರ ಈ ಸ್ಥಿರ ಪ್ರದರ್ಶನವನ್ನು ಗಮನಿಸಿದರೆ, ಗೇಲ್ ಅವರ ದಾಖಲೆ ಉಡೀಸ್‌ ಆಗುವುದು ಗ್ಯಾರಂಟಿ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ.

ಹೊಸ ದಾಖಲೆ ಬಗ್ಗೆ ವೈಭವ್ ಅಚ್ಚರಿ ಹೇಳಿಕೆ

ದಿ ಸ್ವಿಚ್ ಎಪಿಸೋಡ್‌ನಲ್ಲಿ ಕೆವಿನ್ ಪೀಟರ್ಸನ್ ಅವರೊಂದಿಗೆ ಮಾತನಾಡಿದ ಸೂರ್ಯವಂಶಿ ಅವರು ತಮ್ಮ ಮಹದಾಸೆಯನ್ನು ಬಿಚ್ಚಿಟ್ಟಿದ್ದಾರೆ. 'ನನಗೆ ಟಿ20 ಕ್ರಿಕೆಟ್‌ನಲ್ಲಿ 200 ರನ್ ಗಳಿಸಬೇಕೆಂಬ ಆಸೆಯಿದೆ,' ಎಂದು ವೈಭವ್ ಸೂರ್ಯವಂಶಿ ಹೇಳಿದರು. ಮತ್ತೆ ಪೀಟರ್ಸನ್ ಅವರು ಕ್ರಿಸ್ ಗೇಲ್ ಅವರ ಗರಿಷ್ಠ ಸ್ಕೋರ್ 175 ರನ್ ಎಂಬುದು ನೆನಪಿರಲಿ ಎಂದು ನೆನಪಿಸಿದರು. ಆಗ ವೈಭವ್ 'ಹೌದು ನಾನು ಅವರ ದಾಖಲೆಯನ್ನು ಮುರಿದು 200 ರನ್ ಗಳಿಸಲು ಬಯಸುತ್ತೇನೆ,' ಎಂದು ಹೇಳಿದರು.

ವೈಭವ್ ಸೂರ್ಯವಂಶಿ ದಾಖಲೆಗಳು

ವಿಜಯ್ ಹಜಾರೆ ಟ್ರೋಫಿ ವೇಳೆ ಬಿಹಾರ ತಂಡದ ಪರವಾಗಿ ಅರುಣಾಚಲ ಪ್ರದೇಶದ ವಿರುದ್ಧ ಆಡಿದ್ದ ಅವರು ಕೇವಲ 84 ಎಸೆತಗಳಲ್ಲಿ 190 ರನ್ ಸಿಡಿಸಿದ್ದರು. ಇದು ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ದಾಖಲೆಯಾಗಿದೆ. 2026ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175 ರನ್ ಚಚ್ಚುವ ಮೂಲಕ ಇತಿಹಾಸ ನಿರ್ಮಿಸಿದ್ದರು.

ಟಿ20 ಕ್ರಿಕೆಟ್‌ನಲ್ಲಿ ಅವರ ವೈಯಕ್ತಿಕ ಗರಿಷ್ಠ ಮೊತ್ತ ಸದ್ಯ 144 ರನ್ ಆಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಯುಎಇ ವಿರುದ್ಧ ನಡೆದ ಎಸಿಸಿ ಪುರುಷರ ಅಂಡರ್-19 ಏಷ್ಯಾ ಕಪ್‌ನಲ್ಲಿ ಸೂರ್ಯವಂಶಿ ಕೇವಲ 32 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಮೂಲಕ ಅವರು ರಿಷಭ್ ಪಂತ್, ಅಭಿಷೇಕ್ ಶರ್ಮಾ ಮತ್ತು ಉರ್ವಿಲ್ ಪಟೇಲ್ ಅವರಂತಹ ದಿಗ್ಗಜರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ಇದೀಗ ಸದ್ಯ ಐಪಿಎಲ್‌ನಲ್ಲಿ ಮಿಂಚುತ್ತಿರುವ ವೈಭವ್ ಸೂರ್ಯವಂಶಿ ಅವರು ಮುಂಬರುವ ಟಿ20 ಸರಣಿಗಳಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಲು ಸಜ್ಜಾಗಿದೆ.

2010ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸುವುದು ಅಸಾಧ್ಯ ಎಂದು ಹಲವರು ನಂಬಿದ್ದ ಕಾಲದಲ್ಲಿ ಸಚಿನ್ ತೆಂಡೂಲ್ಕರ್ ಗ್ವಾಲಿಯರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 200 ರನ್ ಸಿಡಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದರು. ಅದಾಗಿ 16 ವರ್ಷಗಳ ನಂತರ ಕ್ರಿಕೆಟ್ ದೇವರು ಸಚಿನ್‌ಗೆ ಹೋಲಿಸಲ್ಪಡುತ್ತಿರುವ ವೈಭವ್ ಸೂರ್ಯವಂಶಿ ಈಗ ಟಿ20 ಕ್ರಿಕೆಟ್‌ನಲ್ಲಿ ಅಂತಹದ್ದೇ ಒಂದು ಮೈಲಿಗಲ್ಲಿನ ಮೇಲೆ ಗುರಿ ಇಟ್ಟಿದ್ದಾರೆ.

ಕಳೆದ ವರ್ಷ ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ ಭರ್ಜರಿ 143 ರನ್ ಸಿಡಿಸಿದ್ದ ಸೂರ್ಯವಂಶಿ, ಕೇವಲ 52 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದು ಯೂತ್ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ದಾಖಲಾದ ಅತಿ ವೇಗದ ಶತಕವಾಗಿತ್ತು. ಆ ಸಮಯದಲ್ಲಿ ಈ ದಾಖಲೆಯ ಬಗ್ಗೆ ಅವರಿಗೆ ಅರಿವಿಲ್ಲದಿದ್ದರೂ ಪಂದ್ಯದ ನಂತರ ಮಾತನಾಡಿದ್ದ ಅವರು 200 ರನ್ ಗಡಿಯನ್ನು ದಾಟುವುದೇ ತಮ್ಮ ನಿಜವಾದ ಆಸೆ ಎಂದು ಬಹಿರಂಗಪಡಿಸಿದ್ದರು. 'ಮುಂದಿನ ಪಂದ್ಯದಲ್ಲಿ ನಾನು 200 ರನ್ ಗಳಿಸಲು ಪ್ರಯತ್ನಿಸುತ್ತೇನೆ. ಪೂರ್ತಿ 50 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಲು ಪ್ರಯತ್ನಿಸುತ್ತೇನೆ. ನಾನು ಎಷ್ಟು ಹೆಚ್ಚು ರನ್ ಗಳಿಸುತ್ತೇನೋ, ಅಷ್ಟು ತಂಡಕ್ಕೆ ಲಾಭವಾಗುತ್ತದೆ,' ಎಂದು ಅವರು ಅಂದು ಹೇಳಿದ್ದರು. ಇದೀಗ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+