Vaibhav Sooryavanshi: ತಂಡದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿಗೆ ಉಪನಾಯಕನ ಪಟ್ಟ..
Vaibhav Sooryavanshi: ಇತ್ತೀಚೆಗಷ್ಟೇ ಜಿಂಬಾಬೆ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಕಾರಣನಾಗಿದ್ದ 15 ವರ್ಷದ ವೈಭವ್ ಸೂರ್ಯವಂಶಿಗೆ ಇದೀಗ ಉಪನಾಯಕನ ಪಟ್ಟ ಕಟ್ಟಲಾಗಿದೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವೈಭವ್ ಸೂರ್ಯವಂಶಿ ಯಾರಿಗೆ ಗೊತ್ತಿಲ್ಲ ಹೇಳಿ.. ಅದರಲ್ಲೂ ಈಗಿನ ಕಾಲದ ಯಾವ ಚಿಕ್ಕಮಗಳಿಗೆ ಕೇಳಿದರೂ ಇವರ ಸಾಧನೆಗಳನ್ನ ಪಟಾ ಪಟ್ ಅಂತಾ ಹೇಳ್ಬಿಡುತ್ತಾರೆ. ಅಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದ್ದಾರೆ. ಇನ್ನೂ ಇದೀಗ ಪ್ರಥಮ ದರ್ಜೆಯ ಕ್ರಿಕೆಟ್ ಟೂರ್ನಿಯೊಂದಕ್ಕೆ ತಂಡವನ್ನು ಪ್ರಕಟಿಸಲಾಗಿದ್ದು, ವೈಭವ್ ಸೂರ್ಯವಂಶಿ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

ವೈಭವ್ ಸೂರ್ಯವಂಶಿಗೆ ಹೊಸ ಜವಾಬ್ದಾರಿ
ಮುಂಬರುವ 2026-27ನೇ ಸಾಲಿನ ದುಲೀಪ್ ಟ್ರೋಫಿ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಗೆ ಪೂರ್ವ ವಲಯ ತಂಡವನ್ನು ಪ್ರಕಟಿಸಲಾಗಿದೆ. ಭಾರತೀಯ ಕ್ರಿಕೆಟ್‌ನ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ತಂಡದ ನಾಯಕತ್ವ ಜವಾಬ್ದಾರಿ ನೀಡಲಾಗಿದ್ದು, 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಮಿಂಚಿದ ವೈಭವ್
ಬಿಹಾರದ 15 ವರ್ಷದ ವೈಭವ್ ಸೂರ್ಯವಂಶಿ ಅವರಿಗೆ ಈ ಸರಣಿಯಲ್ಲಿ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಇತ್ತೀಚೆಗಷ್ಟೇ ನಡೆದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮತ್ತು ದೇಶೀಯ ಸರಣಿಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ದಿಗ್ಗಜರ ಗಮನ ಸಳೆದಿದ್ದರು. ಅದರಲ್ಲೂ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ 'ಸರಣಿ ಶ್ರೇಷ್ಠ' ಪ್ರಶಸ್ತಿ ಪಡೆದುಕೊಂಡಿದ್ದರು.
ವೈಭವ್ ಸೂರ್ಯವಂಶಿ ಮುಂದೆ ಹೊಸ ಸವಾಲು
ಇದೀಗ ದುಲೀಪ್ ಟ್ರೋಫಿಯ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಅದ್ಭುತ ಪ್ರದರ್ಶನವನ್ನು ಸಾಬೀತುಪಡಿಸಲು ದೊಡ್ಡ ಅವಕಾಶ ಸಿಕ್ಕಿದೆ. ಅನುಭವಿ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ ಜೊತೆಗೆ ವೈಭವ್ ತಂಡದ ಇನಿಂಗ್ಸ್ ಪ್ರಾರಂಭಿಸುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ತಂಡದಲ್ಲಿ ಅನುಭವ ಮತ್ತು ಯುವ ಆಟಗಾರರು ಇದ್ದಾರೆ. ಅನುಭವಿ ಮೊಹಮ್ಮದ್ ಶಮಿ ಅವರು ತಂಡದ ವೇಗದ ವಿಭಾಗವನ್ನು ಮುನ್ನಡೆಸಲಿದ್ದಾರೆ. ಇವರಿಗೆ ಮುಕೇಶ್ ಕುಮಾರ್ ಮತ್ತು ಸುರಜ್ ಸಿಂಧು ಜೈಸ್ವಾಲ್ ಅವರು ಸಾಥ್ ನೀಡಲಿದ್ದಾರೆ. ಇನ್ನೂ ಭಾರತದ ಟೆಸ್ಟ್ ತಂಡಕ್ಕೆ ಮರಳಲು ಕಾಯುತ್ತಿರುವ ನಾಯಕ ಇಶಾನ್ ಕಿಶನ್‌ಗೆ ಈ ಟೂರ್ನಿ ಅತ್ಯಂತ ನಿರ್ಣಾಯಕವಾಗಿದೆ ಎಂದು ಹೇಳಲಾಗುತ್ತಿದೆ.
ಸ್ಟಾರ್ ಆಟಗಾರರ ಅಲಭ್ಯ
ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆಯ ಹಂತದಲ್ಲಿರುವ ಪ್ರಮುಖ ಆಲ್ರೌಂಡರ್ ರಿಯಾನ್ ಪರಾಗ್ ಹಾಗೂ ವೇಗಿ ಆಕಾಶ್ ದೀಪ್ ಅವರು ಗಾಯದ ಸಮಸ್ಯೆಯಿಂದಾಗಿ ತಂಡಕ್ಕೆ ಆಯ್ಕೆ ಆಗದೆ ಹೊರಗುಳಿದಿದ್ದಾರೆ. ಜಾರ್ಖಂಡ್ ಮೂಲದ ಕುಮಾರ್ ಕುಶಾಗ್ರ ಮೀಸಲು ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದಿದ್ದಾರೆ. ಬ್ಯಾಟಿಂಗ್ ಮತ್ತು ಆಲ್ರೌಂಡರ್ ವಿಭಾಗಗಳಲ್ಲಿ ಶಹಬಾಜ್ ಅಹ್ಮದ್, ವಿರಾಟ್ ಸಿಂಗ್, ಅನುಕೂಲ್ ರಾಯ್, ಸುದೀಪ್ ಕುಮಾರ್, ಶಿಕ್ಜರ್ ಮೋಹನ್, ಸುಬ್ರಾಂಶು ಸೇನಾಪತಿ, ಅಭಿಜಿತ್ ಸರ್ಕಾರ್ ಮತ್ತು ಡೆನಿಶ್ ದಾಸ್ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಪೂರ್ವ ವಲಯ ತಂಡದಲ್ಲಿ ಯಾರೆಲ್ಲಾ ಇದ್ದಾರೆ?
ಪೂರ್ವ ವಲಯ (ಈಸ್ಟ್ ಝೋನ್) ತಂಡ: ಇಶಾನ್ ಕಿಶನ್ (ನಾಯಕ ಮತ್ತಿ ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ (ಉಪನಾಯಕ), ಅಭಿಮನ್ಯು ಈಶ್ವರನ್ ಮೊಹಮ್ಮದ್ ಶಮಿ, ಮುಕೇಶ್ ಕುಮಾರ್, ಸುದೀಪ್ ಕುಮಾರ್, ಶಹಬಾಜ್ ಅಹ್ಮದ್, ಸುರಜ್ ಜೈಸ್ವಾಲ್, ವಿರಾಟ್ ಸಿಂಗ್, ಕುಮಾರ್ ಕುಶಾಗ್ರ, (ವಿಕೆಟ್ ಕೀಪರ್), ಶಿಕ್ಚರ್ ಮೋಹನ್, ಸುಭ್ರಾಂಶು ಸೇನಾಪತಿ, ಅಭಿಜಿತ್ ಸರ್ಕಾರ್, ಅನುಕೂಲ್ ರಾಯ್, ಡೆನಿಶ್ ದಾಸ್.
ಒಟ್ಟಿನಲ್ಲಿ 'ವಂಡರ್ ಕಿಡ್' 15 ವರ್ಷದ ವೈಭವ್ ಸೂರ್ಯವಂಶಿ ಅವರಿಗೆ ಉಪನಾಯಕನ ಪಟ್ಟ ಕಟ್ಟಲಾಗಿದ್ದು, ಅವರು ಇದನ್ನು ಹೇಗೆ ನಿಭಾಯಿಸಲಿದ್ದಾರೆ ಎನ್ನುವ ಪ್ರಶ್ನೆಗಳು ಎದ್ದಿವೆ. ಇವರ ಪ್ರದರ್ಶನಕ್ಕಾಗಿಯೇ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಈ ಟೂರ್ನಿಯು ಆಗಸ್ಟ್ 23ರಿಂದ ಸೆಪ್ಟೆಂಬರ್ 6ರ ವರೆಗೂ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯಲಿದೆ.


Click it and Unblock the Notifications
