Uma Kashvi: ಡಬ್ಲ್ಯೂಪಿಎಲ್‌ 2027 ಹರಾಜಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಕರ್ನಾಟಕದ 15 ವರ್ಷದ ಉಮಾ ಕಾಶ್ವಿ

Uma Kashvi: ಈಗಾಗಲೇ 15 ವರ್ಷದ ವೈಭವ್ ಸೂರ್ಯವಂಶಿ ಅವರು ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ ಪರ ಹಾಗೂ ಟೀಮ್ ಇಂಡಿಯಾದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಇದೇ ರೀತಿಯ ಮತ್ತೋರ್ವ ಯುವ ಪ್ರತಿಭೆ ಕರ್ನಾಟಕದ 15 ವರ್ಷದ ಉಮಾ ಕಾಶ್ವಿ ಅವರು ಡಬ್ಲ್ಯೂಪಿಎಲ್‌ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರ್ಪಡೆಯಾಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಕರ್ನಾಟಕದ 15 ವರ್ಷದ ಯುವ ಆಲ್ ರೌಂಡರ್ ಉಮಾ ಕಾಶ್ವಿ ಅವರು ಮಹಿಳಾ ಪ್ರೀಮಿಯರ್ ಲೀಗ್ (WPL) 2027ರ ಹರಾಜಿನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪುರುಷರ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ಹೊಸ ಸಂಚಲನ ಸೃಷ್ಟಿಸಿದಂತೆ, ಉಮಾ ಕಾಶ್ವಿ ಅವರು ಭಾರತದ ಮಹಿಳಾ ಕ್ರಿಕೆಟ್‌ನ ಮುಂದಿನ ಭರವಸೆಯ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.

Uma Kashvi 15-Year-Old Karnataka All-Rounder Joins Delhi Capitals in WPL 2027 Auction Huge Viral

ಡಬ್ಲ್ಯೂಪಿಎಲ್‌ 2027 ಹರಾಜಿನಲ್ಲಿ ಹೊಸ ದಾಖಲೆ

ಕೊಚ್ಚಿಯಲ್ಲಿ ನಡೆದ ಡಬ್ಲ್ಯೂಪಿಎಲ್‌ 2027ರ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 15 ವರ್ಷ 202 ದಿನ ವಯಸ್ಸಿನ ಉಮಾ ಕಾಶ್ವಿ ಅವರನ್ನು ₹10 ಲಕ್ಷದ ಮೂಲ ಬೆಲೆಗೆ ಖರೀದಿಸಿದೆ. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಹರಾಜಾದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 16ನೇ ವಯಸ್ಸಿನಲ್ಲಿ ಹರಾಜಾಗಿದ್ದ ದೀಯಾ ಯಾದವ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನೂ ಕೂಡ ಬ್ರೇಕ್ ಮಾಡಿದ್ದಾರೆ.

ಉಮಾ ಕಾಶ್ವಿ ಸಾಧನೆಗಳು

ಬೆಂಗಳೂರಿನ ಬೆಳ್ಳಂದೂರಿನಲ್ಲಿನ ಅಕಾಡೆಮಿಯಲ್ಲಿ ತಮ್ಮ 7-8ನೇ ವಯಸ್ಸಿನಲ್ಲೇ ಕ್ರಿಕೆಟ್ ಅಭ್ಯಾಸ ಪ್ರಾರಂಭಿಸಿದ ಉಮಾ, 12ನೇ ವಯಸ್ಸಿನಲ್ಲೇ ಶಾಲಾ ಮಟ್ಟದ ಪಂದ್ಯಾವಳಿಯಲ್ಲಿ ಅಜೇಯ 217 ರನ್ ಗಳಿಸಿ ಮಿಂಚಿದ್ದರು. ಇವರು ಬಲಗೈ ಆಫ್ ಸ್ಪಿನ್ ಬೌಲರ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಬಲ್ಲ ಬ್ಯಾಟರ್ ಆಗಿದ್ದಾರೆ.

ಕರ್ನಾಟಕ ಅಂಡರ್-15 ತಂಡದ ನಾಯಕಿಯಾಗಿ ಹಾಗೂ ರಾಜ್ಯದ ಮಹಿಳಾ ಟಿ20 ಪಂದ್ಯಾವಳಿಯಾದ ಮಹಾರಾಣಿ ಟ್ರೋಫಿಯಲ್ಲಿ 'ಬೆಂಗಳೂರು ಬ್ಲಾಸ್ಟರ್ಸ್' ತಂಡವನ್ನು ನಾಯಕಿಯಾಗಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಬಿಸಿಸಿಐ ಅಂಡರ್-15 ಏಕದಿನ ಪಂದ್ಯಾವಳಿಯಲ್ಲಿ ಒಟ್ಟು 516 ರನ್ (ಸರಾಸರಿ 172, 3 ಶತಕಗಳು, 1 ಅರ್ಧಶತಕ) ಬಾರಿಸುವ ಮೂಲಕ ಪಂದ್ಯಾವಳಿಯ ಗರಿಷ್ಠ ರನ್ ಬಾರಿಸಿ ಕೀರ್ತಿ ಇವರದ್ದಾಗಿದೆ.

ಕೊಲ್ಕತ್ತಾದಲ್ಲಿ ಮಣಿಪುರ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 66 ಎಸೆತಗಳಲ್ಲಿ 23 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ ಅಜೇಯ 158 ರನ್ ಗಳಿಸಿ ತಂಡಕ್ಕೆ 275 ರನ್‌ಗಳ ಬೃಹತ್ ಗೆಲುವು ತಂದುಕೊಟ್ಟಿದ್ದರು. ಜೊತೆಗೆ ಕರ್ನಾಟಕ ಅಂಡರ್-19 ಟಿ20 ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ನಲ್ಲಿ ವಿದರ್ಭ ವಿರುದ್ಧ 18 ರನ್‌ಗೆ 3 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಅಲ್ಲದೆ 2026ರ ಜೂನ್-ಜುಲೈನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಸರಣಿಯಲ್ಲಿ ಭಾರತ ಅಂಡರ್-19 ತಂಡವನ್ನು ಪ್ರತಿನಿಧಿಸಿ ಮಿಂಚಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ದೃಷ್ಟಿಕೋನ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ತರಬೇತುದಾರ ಜೊನಾಥನ್ ಬ್ಯಾಟಿ ಪ್ರಕಾರ, ಉಮಾ ಕಾಶ್ವಿ ಅವರನ್ನು ಭವಿಷ್ಯದಲ್ಲಿ ಉತ್ತಮ ಆಟಗಾರ್ತಿಯಾಗಲಿದ್ದಾರೆ. ಇನ್ನೂ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟಿಗರು ಹಾಗೂ ತರಬೇತುದಾರರೊಂದಿಗೆ ತರಬೇತಿ ಪಡೆಯುವ ಅವಕಾಶ ಸಿಗುವುದರಿಂದ ಅವರ ಆಟದಲ್ಲಿ ಮುಂಬರುವ ದಿನಗಳಲ್ಲಿ ಇನ್ನಷ್ಟು ಬದಲಾವಣೆಯಾಗಲಿದೆ ಎಂದು ತಂಡದ ಆಡಳಿತ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.

ಉಮಾ ಕಾಶ್ವಿ ಬಗ್ಗೆ ತಿಳಿದುಕೊಳ್ಳಬೇಕಾದ ಮಹತ್ವದ ಅಂಶಗಳು

* ಉಮಾ ಕಾಶ್ವಿ ಬಲಗೈ ಬ್ಯಾಟರ್ ಹಾಗೂ ಆಫ್ ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಯುವ ಆಲ್ ರೌಂಡರ್ ಆಗಿದ್ದಾರೆ.

* 7-8ನೇ ವಯಸ್ಸಿನಲ್ಲೇ ಬೆಂಗಳೂರಿನ ಬೆಳ್ಳಂದೂರು ಬಳಿಯ ಅಕಾಡೆಮಿಯಲ್ಲಿ ಕ್ರಿಕೆಟ್ ತರಬೇತಿ ಆರಂಭಿಸಿದರು. 12ನೇ ವಯಸ್ಸಿನಲ್ಲಿ ಶಾಲಾ ಮಟ್ಟದ ಪಂದ್ಯಾವಳಿಯಲ್ಲಿ ಅಜೇಯ 217 ರನ್ ಗಳಿಸಿ ಮಿಂಚಿದ್ದರು.

* ಕರ್ನಾಟಕ ಅಂಡರ್-15 ತಂಡದ ನಾಯಕಿಯಾಗಿ ಹಾಗೂ ಮಹಾರಾಣಿ ಟ್ರೋಫಿ (ಟಿ20) ಪಂದ್ಯಾವಳಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

* ಬಿಸಿಸಿಐ ಅಂಡರ್-15 ಪಂದ್ಯಾವಳಿಯಲ್ಲಿ 172ರ ಸರಾಸರಿಯಲ್ಲಿ ಒಟ್ಟು 516 ರನ್ ಗಳಿಸಿ ಟೂರ್ನಿಯ ಟಾಪ್ ಸ್ಕೋರರ್ ಎನಿಸಿಕೊಂಡರು (3 ಶತಕ, 1 ಅರ್ಧಶತಕ). ಇದರಲ್ಲಿ ಮಣಿಪುರ ವಿರುದ್ಧ ಕೇವಲ 66 ಎಸೆತಗಳಲ್ಲಿ ಅಜೇಯ 158 ರನ್ ಬಾರಿಸಿದ್ದು ವಿಶೇಷವಾಗಿತ್ತು.

* 2026ರ ಜೂನ್-ಜುಲೈನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಸರಣಿಯಲ್ಲಿ ಭಾರತ ಅಂಡರ್-19 ತಂಡವನ್ನು ಪ್ರತಿನಿಧಿಸಿ, ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+