ಎಸ್‌ಆರ್‌ಎಚ್ ಬ್ಯಾಟಿಂಗ್ ಅಬ್ಬರಕ್ಕೆ ದಂಗಾದ ₹12.50 ಕೋಟಿ ಬೆಲೆಯ ರಾಜಸ್ತಾನದ ಸ್ಟಾರ್ ಬೌಲರ್: ಸಂಪೂರ್ಣ ಪಟ್ಟಿ ಇಲ್ಲಿದೆ
SRH Vs RR: ಇದೀಗ ಐಪಿಎಲ್ 18ನೇ ಆವೃತ್ತಿ ನಡೆಯುತ್ತಿದೆ. ಇನ್ನು ನಿನ್ನೆ (ಮಾರ್ಚ್ 23) ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ರಾಜಸ್ತಾನ್ ರಾಯಲ್ಸ್ ವಿರುದ್ಧ ರನ್‌ಗಳ ಸುರಿಮಳೆಯನ್ನೇ ಹರಿಸಿದೆ. ಎಸ್‌ಆರ್‌ಎಚ್ ಬೌಲರ್‌ಗಳಂತೂ ವಿಕೆಟ್ ತೆಗೆಯಲು ಆಗಲಾರದೆ ಹಾಗೂ ರನ್‌ಗಳಿಗೆ ಕಡಿವಾಣ ಹಾಕುವುದರಲ್ಲಿಯೂ ವಿಫಲರಾಗಿದರು.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ತಾನ ರಾಯಲ್ಸ್ ನಡುವೆ ಪಂದ್ಯ ನಡೆಯಿತು. ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಎಚ್ ತಂಡ ನಿಗದಿತ 20 ಓವರ್‌ಗಳಲ್ಲಿ ಬರೋಬ್ಬರಿ 286 ಗರಿಷ್ಠ ರನ್‌ಗಳನ್ನು ಕಲೆಹಾಕಿತು. ಈ ಗುರಿ ಬೆನ್ನತ್ತಿದ ಆರ್‌ಆರ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 242 ರನ್‌ಗಳನ್ನಷ್ಟೇ ಕಲೆಹಾಕಿ ಸೋಲನುಭವಿಸಿತು.

ಹೈದರಾಬಾದ್ ತಂಡದ ಬ್ಯಾಟರ್‌ಗಳ ಬಾಟಿಂಗ್ ಅಬ್ಬರಕ್ಕೆ ರಾಜಸ್ಥಾನ್ ರಾಯಲ್ಸ್ ಬೌಲರ್‌ಗಳು ಸಸ್ತುಹೊಡೆದು ಹೋಗಿದ್ದಾರೆ. ಅದರಲ್ಲೂ ವೇಗಿ ಜೋಪ್ರಾ ಆರ್ಚರ್ ಒಂದ ವಿಕೆಟ್ ತೆಗೆಯದೇ ಬರೀ 4 ಓವರ್‌ಗಳಿಗೆ ಬರೋಬ್ಬರಿ 76 ರನ್‌ಗಳನ್ನು ಕೊಟ್ಟಿದ್ದಾರೆ. ಈ ಮೂಲಕ ಅವರು ಐಪಿಎಲ್‌ನಲ್ಲಿ ಯಾವುದೇ ರನ್ ವಿಕೆಟ್ ಇಲ್ಲದೆ, ಅತೀ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟ ಬೌಲರ್ ಎಂಬ ಪಟ್ಟವನ್ನು ಪಡೆದುಕೊಂಡಿದ್ದಾರೆ.
ಈ ಪಂದ್ಯದಲ್ಲಿ ಪ್ರಬಲ ತಂಡದ ಇಬ್ಬರು ವೇಗಿಗಳು ದುಬಾರಿ ಎನಿಸಿಕೊಂಡಿದ್ದಾರೆ. ಆರ್‌ಆರ್ ತಂಡದ ಜೋಫ್ರಾ ಆರ್ಚರ್ ಕೇವಲ 4 ಓವರ್‌ಗಳಲ್ಲಿ ಎಚ್‌ಆರ್‌ಎಚ್ ಬ್ಯಾಟರ್‌ಗಳಿಗೆ ಬರೋಬ್ಬರಿ 76 ರನ್‌ಗಳನ್ನು ನೀಡಿ ದುಬಾರಿ ಎನಿಸಿಕೊಂಡ್ರು. ಮತ್ತೊಂದೆಡೆ ರಾಜಸ್ತಾನ ರಾಯಲ್ಸ್ ಬ್ಯಾಟಿಂಗ್ ವೇಳೆ ಎಸ್‌ಆರ್‌ಎಚ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಸಹ 4 ಓವರ್‌ನಲ್ಲಿ 60 ರನ್‌ಗಳನ್ನು ನೀಡಿ ದುಬಾರಿ ಆದರು. ಇನ್ನು ಈ ಪಂದ್ಯದಲ್ಲಿ ಆರ್ಚರ್ ಯಾವುದೇ ವಿಕೆಟ್ ಪಡೆದಿಲ್ಲ.
ರಾಜಸ್ತಾನ ರಾಯಲ್ಸ್ ಇಂಗ್ಲೆಂಡ್ ತಂಡದ ಈ ಸ್ಟಾರ್ ವೇಗಿ ಜೋಫ್ರಾ ಆರ್ಚರ್‌ನನನ್ನು ಬರೊಬ್ಬರಿ 12.5 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಆದರೆ ಅವರು ಇದೀಗ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ದುಬಾರಿಗಳನ್ನು ನೀಡಿದಲ್ಲದೆ, ವಿಕೆಟ್ ತೆಗೆಯುವಲ್ಲಿಯೂ ವಿಫಲರಾಗಿದ್ದಾರೆ. ಯಾವುದೇ ವಿಕೆಟ್ ತೆಗೆಯದೇ ಅತೀ ಹೆಚ್ಚು ರನ್ ಕೊಟ್ಟ ಬೌಲರ್‌ಗಳ ವಿವರ ಇಲ್ಲಿದೆ ತಿಳಿಯಿರಿ.
ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್ ನೀಡಿದ ಬೌಲರ್‌ಗಳು
* ಜೋಫ್ರಾ ಆರ್ಚರ್: 2025ರಲ್ಲಿ ಎರ್‌ಎಚ್ ವಿರುದ್ಧ ಯಾವುದೇ ವಿಕೆಟ್ ಇಲ್ಲದೆ 76 ರನ್‌ಗಳನ್ನು ನೀಡಿದ್ದಾರೆ
* ಮೋಹಿತ್ ಶರ್ಮಾ: 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯಾವುದೇ ವಿಕೆಟ್ ಇಲ್ಲದೆ 73 ರನ್‌ಗಳನ್ನು ನೀಡಿದ್ದಾರೆ.
* ಬೇಸಿಲ್ ಥಂಪಿ: 2018ರಲ್ಲಿ ಆರ್‌ಸಿಬಿ ವಿರುದ್ಧ ಯಾವುದೇ ವಿಕೆಟ್ ಇಲ್ಲದೆ 70 ರನ್‌ಗಳನ್ನು ನೀಡಿದ್ದಾರೆ.
* ಯಶ್ ದಯಾಳ್: 2023ರಲ್ಲಿ ಕೆಕೆಆರ್ ವಿರುದ್ಧ ಯಾವುದೇ ವಿಕೆಟ್ ಇಲ್ಲದೆ 69 ರನ್‌ಗಳನ್ನು ನೀಡಿದ್ದಾರೆ.
* ಲ್ಯೂಕ್ ವುಡ್: 2024ಎಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 1 ವಿಕೆಟ್ ತೆಗೆದು ಬರೋಬ್ಬರಿ 68 ರನ್‌ಗಳನ್ನು ನೀಡಿದ್ದಾರೆ.
* ರೀಸ್ ಟೋಪ್ಲಿ: 2024ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 1 ವಿಕೆಟ್ ತೆಗೆದು 68 ರನ್‌ಗಳನ್ನು ನೀಡಿದ್ದಾರೆ.












Click it and Unblock the Notifications