ಒಂದೇ ದಿನ ಇಷ್ಟೆಲ್ಲಾ ಹೊಸ ವಿಶ್ವದಾಖಲೆಗಳು ಆದ್ವಾ? ಅಬ್ಬಾ ಎಂದ ಟೀಮ್ ಇಂಡಿಯಾ ಉಪನಾಯಕಿ ಸ್ಮೃತಿ ಮಂಧನಾ
Smriti Mandhana: ದುಬೈನಲ್ಲಿ ಸೆಪ್ಟೆಂಬರ್ 3ರಂದು ನಡೆದ ಮಹಿಳಾ ಏಷ್ಯಾ ಕಪ್‌ನ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾವು ಸ್ಮೃತಿ ಮಂಧಾನ ಅವರ ಭರ್ಜರಿ ಶತಕದ ನೆರವಿನಿಂದ ಹಾಂಗ್ ಕಾಂಗ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಈ ಬಗ್ಗೆ ಮಾತನಾಡಿದ ಸ್ಮೃತಿ ಅವರು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ದುಬೈನಲ್ಲಿ ನಡೆದ ಮಹಿಳಾ ಏಷ್ಯಾ ಕಪ್ 2026ರ ಹಾಂಗ್ ಕಾಂಗ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತ ತಂಡದ ಉಪನಾಯಕಿ ಸ್ಮೃತಿ ಮಂಧನಾ ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗೈದರು. ಈ ಮೂಲಕ ಅವರು ಒಂದೇ ಹಲವು ವಿಶ್ವದಾಖಲೆಗಳನ್ನು ಉಡೀಸ್ ಮಾಡಿದರು. ಆದರೆ, ಪಂದ್ಯ ಮುಗಿದ ಬಳಿಕ ಮಾತನಾಡಿರುವ ಸ್ಮೃತಿ ಅವರು, 'ನನ್ನ ಇನ್ನಿಂಗ್ಸ್‌ನಿಂದ ಇಷ್ಟೊಂದು ದೊಡ್ಡ ದಾಖಲೆಗಳು ಅಳಿಸಿವೆ ಎನ್ನುವುದು ನನಗೆ ತಿಳಿಯದೇ ಇರಲಿಲ್ಲ,' ಎಂದು ಆಶ್ಚರ್ಯದಿಂದಲೇ ಸಂತಸ ವ್ಯಕ್ತಪಡಿಸಿದರು.

ಸ್ಮೃತಿ ಮಂಧಾನ ಮಾಡಿದ ಅಪರೂಪದ ದಾಖಲೆಗಳು
ಹಾಂಗ್ ಕಾಂಗ್ ವಿರುದ್ಧ ಕೇವಲ 64 ಎಸೆತಗಳನ್ನು ಎದುರಿಸಿದ ಸ್ಮೃತಿ ಮಂಧನಾ 14 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ ಬರೋಬ್ಬರಿ 124 ರನ್ ಚಚ್ಚಿದರು. ಈ ಭರ್ಜರಿ ಶತಕದೊಂದಿಗೆ ಅವರು ಬರೆದ ಪ್ರಮುಖ ದಾಖಲೆಗಳನ್ನು ಮಾಡಿ ಗಮನ ಸೆಳೆದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್: ಸ್ಮೃತಿ ಮಂಧನಾ ಅರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 10,880 ರನ್ ಪೂರೈಸಿದರು. ಈ ಮೂಲಕ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ (10,868 ರನ್) ಅವರ ಸುದೀರ್ಘ ಅವಧಿಯ ದಾಖಲೆಯನ್ನು ಹಿಂದಿಕ್ಕಿ ಅತ್ಯಧಿಕ ರನ್ ಬಾರಿಸಿದ ಜಗತ್ತಿನ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅತೀ ಹೆಚ್ಚು అంತಾರಾಷ್ಟ್ರೀಯ ಶತಕಗಳು: ಇದು ಸ್ಮೃತಿ ಮಂಧಾನ ಅವರ 18ನೇ ಅಂತಾರಾಷ್ಟ್ರೀಯ ಶತಕವಾಗಿದ್ದು, ಈ ಮೂಲಕ ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ (17 ಶತಕ) ಅವರ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಏಷ್ಯಾ ಕಪ್‌ನಲ್ಲಿ ಗರಿಷ್ಠ ವೈಯಕ್ತಿಕ ರನ್: ಮಹಿಳಾ ಟಿ20 ಏಷ್ಯಾ ಕಪ್ ಇತಿಹಾಸದಲ್ಲಿ ಶ್ರೀಲಂಕಾದ ಚಾಮರಿ ಅಥಾಪತ್ತು (119*) ಅವರ ಹೆಸರಿನಲ್ಲಿದ್ದ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಕೂಡ ಮಂಧನಾ (124 ರನ್) ಅವರು ಉಡೀಸ್ ಮಾಡಿದ್ದಾರೆ.
ದಾಖಲೆಗಳ ಬಗ್ಗೆ ಸ್ಮೃತಿ ಮಂಧನಾ ಹೇಳಿದ್ದೇನು?
ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ 30 ವರ್ಷದ ಸ್ಮೃತಿ ಮಂಧನಾ ಅವರು, 'ಪಂದ್ಯ ಮುಗಿದ ನಂತರವೇ ನನಗೆ ಈ ಎಲ್ಲಾ ದಾಖಲೆಗಳ ಮಾಹಿತಿ ಸಿಕ್ಕಿದ್ದು. ನಿಜ ಹೇಳಬೇಕೆಂದರೆ ಇದೆಲ್ಲವೂ ಒಂದೇ ದಿನ ಆಗಿದೆ ಎಂದು ನನಗೆ ತಿಳಿದಿರಲಿಲ್ಲ. ನಾನು ಕೇವಲ ಮೈದಾನಕ್ಕಿಳಿದು ಬ್ಯಾಟಿಂಗ್ ಮಾಡುವುದನ್ನು ಆನಂದಿಸುತ್ತೇನೆ ಮತ್ತು ತಂಡದ ಗೆಲುವಿಗೆ ಕೊಡುಗೆ ನೀಡಲು ಸಾಧ್ಯವಾಗಿದ್ದಕ್ಕೆ ಅತ್ಯಂತ ಸಂತೋಷವಾಗಿದೆ,' ಎಂದು ಹೇಳಿದರು.
ಅಷ್ಟೇ ಅಲ್ಲದೆ ಎದುರಾಳಿ ಹಾಂಗ್ ಕಾಂಗ್ ತಂಡದ ಬೌಲಿಂಗ್ ದಾಳಿಯನ್ನು ಶ್ಲಾಘಿಸಿದ ಅವರು, 'ಪವರ್‌ಪ್ಲೇನಲ್ಲಿ ಎದುರಾಳಿ ಬೌಲರ್‌ಗಳು ಕಟ್ಟುನಿಟ್ಟಿನ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನ ಮಾಡಿದರು. ಅವರಿಂದ ಕಲಿಯುವುದು ಬಹಳಷ್ಟಿದೆ. ಮೊದಲ ಬಾರಿಗೆ ಅವರ ವಿರುದ್ಧ ಆಡುತ್ತಿದ್ದು, ಅವರಿಗೂ ಇದು ಸ್ಮರಣೀಯ ಕ್ಷಣವಾಗಿದೆ,' ಎಂದು ಹೇಳಿದರು. ಇನ್ನೂ ತಮ್ಮ ಈ ಹೊಸ ಮೈಲಿಗಲ್ಲನ್ನು ಸ್ಮೃತಿ ತಮ್ಮ ಕುಟುಂಬಕ್ಕೆ ಸಮರ್ಪಿಸಿದ್ದಾರೆ.
ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟ ಸ್ಮೃತಿ
ಸ್ಮೃತಿ ಮಂಧನಾ ಸಿಡಿಸಿದ 124 ರನ್‌ಗಳ ನೆರವಿನಿಂದ ಟೀಮ್ ಇಂಡಿಯಾವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಬಳಿಕ ಬ್ಯಾಟ್‌ಗ್‌ಗೆ ಇಳಿದ ಹಾಂಗ್ ಕಾಂಗ್ ತಂಡವನ್ನು ಭಾರತವು ಕೇವಲ 56 ರನ್‌ಗಳಿಗೆ ಆಲೌಟ್ ಮಾಡಿತು. ಈ ಮೂಲಕ 137 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಏಷ್ಯಾ ಕಪ್‌ನ ಸೆಮಿಫೈನಲ್ ಹಂತಕ್ಕೆ ಲಗ್ಗೆ ಇಟ್ಟಿತು. ಒಟ್ಟಿನಲ್ಲಿ ಸ್ಮೃತಿ ಅವರ ಈ ಐತಿಹಾಸಿಕ ಸಾಧನೆ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.


Click it and Unblock the Notifications
