ಮುಂಬೈನಲ್ಲಿ ಬರೋಬ್ಬರಿ 7 ಕೋಟಿ ರೂಪಾಯಿಗೆ ಅಪಾರ್ಟ್‌ಮೆಂಟ್‌ ಬಾಡಿಗೆಗೆ ಪಡೆದ ಶ್ರೇಯಸ್ ಅಯ್ಯರ್: ಹೀಗಿದೆ ಲೆಕ್ಕಾಚಾರ

Shreyas Iyer: ಇತ್ತೀಚೆಗಷ್ಟೇ ಬಿಸಿಸಿಐಯು ಭಾರತ ಟಿ20 ತಂಡ ಪ್ರಕಟ ಮಾಡಿದ್ದು, ನಾಯಕತ್ವದ ಸ್ಥಾನಕ್ಕೆ ಶ್ರೇಯಸ್‌ ಅಯ್ಯರ್‌ ಅವರನ್ನು ಆಯ್ಕೆ ಮಾಡಿದೆ. ಇದರ ಬೆನ್ನಲ್ಲೇ ಅಯ್ಯರ್ ಅವರು ಮುಂಬೈನಲ್ಲಿ ದುಬಾರಿ ಮೊತ್ತಕ್ಕೆ ಐಷಾರಾಮಿ ಅಪಾರ್ಟ್‌ಮೆಂಟ್‌ವೊಂದನ್ನು ಬಾಡಿಗೆ ಪಡೆದಿರುವ ವಿಚಾರ ಮುನ್ನಲೆಗೆ ಬಂದಿದೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ಇತ್ತೀಚೆಗಷ್ಟೇ ಟಿ20 ತಂಡದ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಅವರು ಮುಂಬೈನ ಅತ್ಯಂತ ಶ್ರೀಮಂತ ವಸತಿ ಪ್ರದೇಶವಾದ ವರ್ಲಿಯಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಒಂದನ್ನು ಬಾಡಿಗೆಗೆ ಪಡೆದಿದ್ದಾರೆ. ರಿಯಲ್ ಎಸ್ಟೇಟ್ ಡೇಟಾ ವಿಶ್ಲೇಷಣಾ ಸಂಸ್ಥೆಯಾದ ಸ್ಕ್ವೇರ್ ಯಾರ್ಡ್ಸ್ ಪ್ರಕಾರ, ಈ ಬಾಡಿಗೆ ಒಪ್ಪಂದವು ಜೂನ್ 2026ರಲ್ಲಿ ಅಧಿಕೃತವಾಗಿ ನೋಂದಣಿಯಾಗಿದೆ ಎಂದು ತಿಳಿದುಬಂದಿದೆ.

Shreyas Iyer Rents Luxury Mumbai Apartment For 18 5 Lakh Monthly Cricket Star s Lavish Lifestyle

ಅಪಾರ್ಟ್‌ಮೆಂಟ್‌ನ ವಿಸ್ತೀರ್ಣ, ವಿಶೇಷ ಸೌಲಭ್ಯಗಳು

ಶ್ರೇಯಸ್ ಅಯ್ಯರ್ ಅವರು ಮೂರು ವರ್ಷಗಳ ದೀರ್ಘಾವಧಿಗೆ ಬಾಡಿಗೆಗೆ ಪಡೆದಿರುವ ಈ ಲಕ್ಸುರಿ ಫ್ಲ್ಯಾಟ್ ವರ್ಲಿಯ ಪ್ರಸಿದ್ಧ ಹಾಗೂ ಪ್ರತಿಷ್ಠಿತ ಆರ್ಟೇಸಿಯಾದಲ್ಲಿದೆ. ಈ ಅಪಾರ್ಟ್‌ಮೆಂಟ್ ಬರೋಬ್ಬರಿ 360 ಚದರ ಮೀಟರ್ (ಅಂದರೆ ಸರಿಸುಮಾರು 3,875 ಚದರ ಅಡಿ) ವಿಸ್ತೀರ್ಣವನ್ನು ಹೊಂದಿದೆ. ಇದನ್ನಯ ರಮೇಶ್ ಭಾಟಿಯಾ ಮತ್ತು ವಿಜಯಾ ಭಾಟಿಯಾ ಎಂಬ ಮಾಲೀಕರಿಂದ ಅಯ್ಯರ್ ಲೀಸ್ ಒಪ್ಪಂದದ ಮೂಲಕ ಪಡೆದಿದ್ದಾರೆ. ಈ ದುಬಾರಿ ಮನೆಯ ಜೊತೆಗೆ ಕ್ರಿಕೆಟಿಗನಿಗೆ ಬಳಸಲು ವೈಯಕ್ತಿಕವಾಗಿ 4 ಪ್ರತ್ಯೇಕ ವಾಹನ ನಿಲುಗಡೆ ಜಾಗಗಳನ್ನು ಸಹ ನೀಡಲಾಗಿದೆ.

ವರ್ಷದಿಂದ ವರ್ಷಕ್ಕೆ ಎಷ್ಟು ಹೆಚ್ಚಾಗಲಿದೆ ಬಾಡಿಗೆ?

ದಕ್ಷಿಣ ಮುಂಬೈನ ಹೈ-ಎಂಡ್ ರಿಯಲ್ ಎಸ್ಟೇಟ್ ಮಾರುಕಟ್ಟೆಯ ನಿಯಮಗಳಂತೆ, ಈ ಒಪ್ಪಂದದಲ್ಲೂ ಪ್ರತಿ ವರ್ಷ ಬಾಡಿಗೆ ದರ ಏರಿಕೆಯಾಗುವ (7% ವಾರ್ಷಿಕ ಏರಿಕೆ) ಷರತ್ತನ್ನು ವಿಧಿಸಲಾಗಿದೆ. ಇದರ ಪ್ರಕಾರ, ಶ್ರೇಯಸ್ ಅಯ್ಯರ್ ಅವರು ಪ್ರತಿ ತಿಂಗಳಿಗೆ ₹18.50 ಲಕ್ಷ ಬಾಡಿಗೆ ಪಾವತಿಸಲಿದ್ದಾರೆ. ಎರಡನೇ ವರ್ಷದಲ್ಲಿ ಶೇಕಡ 7ರಷ್ಟು ಹೆಚ್ಚಾಗಿ ₹19.79 ಲಕ್ಷಕ್ಕೆ ಏರಿಕೆಯಾಗಲಿದೆ.

ಮೂರನೇ ವರ್ಷದಲ್ಲಿ ಒಪ್ಪಂದದ ಕೊನೆಯ 12 ತಿಂಗಳುಗಳಲ್ಲಿ ತಿಂಗಳ ಬಾಡಿಗೆ ಬರೋಬ್ಬರಿ ₹21.18 ಲಕ್ಷ ತಲುಪಲಿದೆ. ಮೂರು ವರ್ಷಗಳ ಈ ಒಟ್ಟು ಅವಧಿಯನ್ನು ಲೆಕ್ಕ ಹಾಕಿದರೆ, ಶ್ರೇಯಸ್ ಅಯ್ಯರ್ ಅವರು ಕೇವಲ ಬಾಡಿಗೆ ರೂಪದಲ್ಲೇ ಒಟ್ಟಾರೆಯಾಗಿ ಬರೋಬ್ಬರಿ ₹7.14 ಕೋಟಿ ಹಣವನ್ನು ಮಾಲೀಕರಿಗೆ ಪಾವತಿಸಲಿದ್ದಾರೆ ಎನ್ನಲಾಗುತ್ತಿದೆ.

ಮುಂಗಡ ಹಣ ಮತ್ತು ಸರ್ಕಾರಿ ವೆಚ್ಚಗಳ ವಿವರ

ಈ ದೊಡ್ಡ ಒಪ್ಪಂದಕ್ಕೆ ಸಹಿ ಹಾಕಲು ಶ್ರೇಯಸ್ ಅಯ್ಯರ್ ಅವರು ಬರೋಬ್ಬರಿ ₹74 ಲಕ್ಷ ಭದ್ರತಾ ಠೇವಣಿಯನ್ನು ಮುಂಗಡವಾಗಿ ಪಾವತಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ನೋಂದಣಿ ಮಹಾನಿರೀಕ್ಷಕರ ವೆಬ್‌ಸೈಟ್ ಪ್ರಕಾರ, ಈ ಒಪ್ಪಂದದ ಅಧಿಕೃತ ಪ್ರಕ್ರಿಯೆಗಾಗಿ ₹1.84 ಲಕ್ಷ ಮುದ್ರೆ ಶುಲ್ಕ ಹಾಗೂ ₹1,000 ನೋಂದಣಿ ಶುಲ್ಕವನ್ನು ಪಾವತಿಸಲಾಗಿದೆ.

ವರ್ಲಿ ಪ್ರದೇಶಕ್ಕೆ ಇಷ್ಟೊಂದು ಡಿಮ್ಯಾಂಡ್ ಯಾಕೆ?

ಮುಂಬೈನ ವರ್ಲಿ ಪ್ರದೇಶವು ಭಾರತದ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇದು ಉದ್ಯಮಿಗಳು, ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಹಿರಿಯ ವೃತ್ತಿಪರರ ನೆಚ್ಚಿನ ವಸತಿ ಪ್ರದೇಶವಾಗಿದೆ. ಇಲ್ಲಿಂದ ಅರಬ್ಬಿ ಸಮುದ್ರದ ಸುಂದರ ನೋಟ ಸಿಗುವುದರ ಜೊತೆಗೆ, ಬಾಂದ್ರಾ-ವರ್ಲಿ ಸೀ ಲಿಂಕ್ ಮತ್ತು ಈಸ್ಟರ್ನ್ ಫ್ರೀವೇ ಮೂಲಕ ಮುಂಬೈನ ಪ್ರಮುಖ ಬಿಸಿನೆಸ್ ಹಬ್‌ಗಳಾದ ಬಿಕೆಸಿ, ನಾರಿಮನ್ ಪಾಯಿಂಟ್ ಮತ್ತು ಲೋವರ್ ಪರೆಲ್‌ಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದಾಗಿದೆ.

ಶ್ರೇಯಸ್ ಅಯ್ಯರ್ ಅವರ ಹೂಡಿಕೆಗಳ ವಿವರ

ಶ್ರೇಯಸ್ ಅಯ್ಯರ್ ಕೇವಲ ಮನೆ ಬಾಡಿಗೆಗೆ ಪಡೆಯುತ್ತಿಲ್ಲ, ಬದಲಿಗೆ ಮುಂಬೈನಲ್ಲಿ ಹಲವು ಸ್ವಂತ ಆಸ್ತಿಗಳನ್ನು ಹೊಂದಿದ್ದಾರೆ. ಅವರು ಈಗಾಗಲೇ ಪರೆಲ್‌ನಲ್ಲಿರುವ ಪ್ರಸಿದ್ಧ 'ಲೋಧಾ ವರ್ಲ್ಡ್ ಟವರ್ಸ್'ನಲ್ಲಿ ₹11.85 ಕೋಟಿ ಮೌಲ್ಯದ ಸ್ವಂತ ಫ್ಲ್ಯಾಟ್ ಹೊಂದಿದ್ದಾರೆ. ಇದರ ಜೊತೆಗೆ ವರ್ಲಿ ಪ್ರದೇಶದಲ್ಲೇ ₹2.90 ಕೋಟಿ ಮೌಲ್ಯದ ಕಮರ್ಷಿಯಲ್ (ವಾಣಿಜ್ಯ) ಆಸ್ತಿಯನ್ನು ಹಾಗೂ ತಾಯಿ ರೋಹಿಣಿ ಅಯ್ಯರ್ ಅವರೊಂದಿಗೆ ಜಂಟಿಯಾಗಿ ಮತ್ತೊಂದು ಅಪಾರ್ಟ್‌ಮೆಂಟ್ ಅನ್ನು ಸಹ ಖರೀದಿ ಮಾಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಶ್ರೇಯಸ್‌ ಅಯ್ಯರ್ ಅವರು ಮುಂಬೈನ ಅತ್ಯಂತ ಐಷಾರಾಮಿ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+