Get Updates
Get notified of breaking news, exclusive insights, and must-see stories!

Shivam Dube: ಮುಸ್ಲಿಂ ಮಹಿಳೆಯನ್ನು ವಿವಾಹವಾಗಿರುವ ಶಿವಂ ದುಬೆ ರಂಜಾನ್‌ಗೆ ಉಪವಾಸ ಮಾಡುತ್ತಾರಾ?; ಇಲ್ಲಿದೆ ಮಾಹಿತಿ

Shivam Dube: ಟಿ20 ವಿಶ್ವಕಪ್‌ 2026 ಟೂರ್ನಿ ನಡುವೆಯೂ ವೈಯಕ್ತಿಕ ವಿಚಾರಲ್ಲಿ ಸಖತ್ ಸದ್ದು ಮಾಡುತ್ತಿರುವ ಭಾರತೀಯ ಕ್ರಿಕೆಟಿಗರಲ್ಲಿ ಶಿವಂ ದುಬೆ ಕೂಡ ಒಬ್ಬರಾಗಿದ್ದಾರೆ. ಅದರಲ್ಲೂ ಇದೀಗ ರಂಜಾನ್ ಸಮಯವಾಗಿದ್ದು, ಮುಸ್ಲಿಂ ಸಮುದಾಯದ ಮಹಿಳೆಯನ್ನು ವಿವಾಹ ಆಗಿರುವ ಕಾರಣ ಈ ವೇಳೆ ಅವರು ಉಪವಾಸ ಇರುತ್ತಾರಾ ಎನ್ನುವ ಪ್ರಶ್ನೆಗಳು ಎದ್ದಿವೆ. ಹಾಗಾದ್ರೆ ಈ ಕುರಿತು ವರದಿಗಳು ಹೇಳುವುದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಶಿವಂ ದುಬೆ ಟಿ20 ವಿಶ್ವಕಪ್ 2026ರಲ್ಲಿ ಟೀಂ ಇಂಡಿಯಾ ಪರ ಮಿಂಚುತ್ತಿರುವ ಸ್ಫೋಟಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಸಿಕ್ಸರ್‌ಗಳನ್ನು ಸಿಡಿಸುವಲ್ಲಿ ಪ್ರಸಿದ್ಧರಾಗಿರುವ ಅವರು, ತಮ್ಮ ಪವರ್‌ ಹಿಟ್ಟಿಂಗ್ ಮೂಲಕ ಪಂದ್ಯಗಳ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ದುಬೆ ಮೈದಾನದಲ್ಲಿ ಮಾತ್ರವಲ್ಲ, ಮೈದಾನದ ಹೊರಗೂ ಸದಾ ಚರ್ಚೆಯಲ್ಲಿರುವ ಆಟಗಾರ. ತಮ್ಮ ವೈಯಕ್ತಿಕ ಜೀವನ, ಕುಟುಂಬದ ಬಗ್ಗೆ ಹೊಂದಿರುವ ಮೌಲ್ಯಗಳು ಹಾಗೂ ಎಲ್ಲ ಧರ್ಮಗಳ ಬಗ್ಗೆ ಅವರು ತೋರಿಸುವ ಗೌರವದ ಬಗ್ಗೆ ಅವರು ಹಲವು ಬಾರಿ ಸುದ್ದಿಯಾಗಿದ್ದಾರೆ.

Shivam Dube in T20 World Cup 2026 Does the Indian Star Observe Roza During Ramadan Know details

ದಕ್ಷಿಣ ಆಫ್ರಿಕಾ ವಿರುದ್ಧ ಏಕಾಂಗಿ ಹೋರಾಟ

ವಿಶ್ವಕಪ್‌ ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಟೀಂ ಇಂಡಿಯಾ ಬ್ಯಾಟಿಂಗ್‌ ಪ್ರದರ್ಶನದಲ್ಲಿ ಕುಸಿತ ಕಂಡ ಸಮಯದಲ್ಲಿ ಕೇವಲ ಒಬ್ಬ ಆಟಗಾರ ಮಾತ್ರ ಧೈರ್ಯವಾಗಿ ಕ್ರೀಸ್‌ನಲ್ಲಿ ಏಕಾಂಗಿ ಹೋರಾಟ ನಡೆಸಿ ಗಮನ ಸೆಳೆದಿದ್ದರು. ಅವರು ಇನ್ನಾರು ಅಲ್ಲ, ಶಿವಂ ದುಬೆ ಆಗಿದ್ದಾರೆ.

ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಬೆಂಡೆತ್ತಿದ ದುಬೆ 42 ರನ್‌ಗಳನ್ನು ಕಲೆಹಾಕಿದರು. ಆ ಪಂದ್ಯದಲ್ಲಿ ಭಾರತ ಪರ ಇದೇ ಗರಿಷ್ಠ ವೈಯಕ್ತಿಕ ಮೊತ್ತವಾಗಿತ್ತು. ಸಂಕಷ್ಟದ ಸಂದರ್ಭದಲ್ಲಿ ತೋರಿದ ಈ ಜವಾಬ್ದಾರಿಯುತ ಪ್ರದರ್ಶನವೇ ಅವರನ್ನು ಟೀಂ ಇಂಡಿಯಾದ ಅತ್ಯಂತ ನಂಬಿಕಸ್ತ ಮಿಡಲ್ ಆರ್ಡರ್ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮುವಂತೆ ಮಾಡಿದೆ.

ಶಿವಂ ದುಬೆ ವೈಯಕ್ತಿಕ ಜೀವನ

ಶಿವಂ ದುಬೆ ಅವರ ವೈಯಕ್ತಿಕ ಜೀವನವೇ ಒಂದು ಸಿನಿಮಾ ಕಥೆಯ ರೀತಿಯಲ್ಲಿದೆ. ಅವರು ಜುಲೈ 16, 2021ರಂದು ಮುಂಬೈನಲ್ಲಿ ಅಂಜುಮ್ ಖಾನ್ ಅವರೊಂದಿಗೆ ವಿವಾಹವಾದರು. ಇವರು ಉತ್ತರ ಪ್ರದೇಶದವರಾಗಿದ್ದು, ಮಾಡೆಲ್ ಮತ್ತು ನಟಿಯಾಗಿದ್ದಾರೆ. ಇನ್ನೂ ಇವರಿಬ್ಬರು ಮುಸ್ಲಿಂ ಷರಿಯಾ ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು.

ಶಿವಂ ಮತ್ತು ಅಂಜುಮ್ ಅವರ ಮದುವೆ ವಿಶೇಷವಾಗಿದ್ದು, ಇಬ್ಬರೂ ತಮ್ಮ ತಮ್ಮ ಧಾರ್ಮಿಕ ಸಂಪ್ರದಾಯಗಳಿಗೆ ಗೌರವ ನೀಡಿ ಹಿಂದೂ ಹಾಗೂ ಮುಸ್ಲಿಂ ಎರಡೂ ಸಂಪ್ರಾದಾಯಗಳಂತೆ ಮದುವೆಯಾದರು. ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದರೆ, ಮುಸ್ಲಿಂ ಸಂಪ್ರದಾಯದಂತೆ ನಿಖಾ ಪ್ರಕಾರ ವಿವಾಹವಾಗಿ ಗಮನ ಸೆಳೆದಿದ್ದರು.

ಶಿವಂ ದುಬೆ ವಿವಾಹ ಫೋಟೋಗಳು ಭಾರೀ ವೈರಲ್

ಇನ್ನೂ ಇದೀಗ ರಂಜಾನ್ ಸಮಯ ಆಗಿರುವ ಕಾರಣ ಇವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಎರಡು ಸಂಸ್ಕೃತಿಗಳನ್ನು ಸಮಾನವಾಗಿ ಕಂಡಿರುವ ಈ ಜೋಡಿ ಎಲ್ಲರ ಗಮನ ಸೆಳೆದಿದೆ. ಇವರ ಪ್ರೇಮಕಥೆ ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂಬ ಸಂದೇಶವನ್ನು ನೀಡಿದಂತಾಗಿದೆ.

ಪತ್ನಿಯ ಧಾರ್ಮಿಕ ಆಚರಣೆಗಳಿಗೆ ಗೌರವ

ಶಿವಂ ದುಬೆ ಅವರು ಅಂಜುಂ ಖಾನದ ಅವರನ್ನು ವಿವಾಹವಾದ ಬಳಿಕ, ಅಭಿಮಾನಿಗಳಲ್ಲಿ ಆಗಾಗ್ಗೆ ಒಂದು ಪ್ರಶ್ನೆ ಕಾಡುತ್ತಿರುತ್ತದೆ. ಪತ್ನಿಯ ಜೊತೆ ಅವರು ರಂಜಾನ್ ಸಂದರ್ಭದಲ್ಲಿ ಉಪವಾಸ ಮಾಡುತ್ತಾರೆಯೇ? ಎಂಬುದು. ಈಗ ರಂಜಾನ್ ಸಮಯ ಹಿನ್ನೆಲೆ ಈ ಪ್ರಶ್ನೆ ಮತ್ತೆ ಎದ್ದಿದೆ. ಮಾಹಿತಿಯ ಪ್ರಕಾರ, ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಬ್ಯುಸಿ ಇರುವ ಕಾರಣದಿಂದ ಅವರು ರೋಜಾ ಇರುತ್ತಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಆದರೂ, ಅವರು ಪತ್ನಿಯ ಧಾರ್ಮಿಕ ಆಚರಣೆಗಳಿಗೆ ಗೌರವ ಕೊಡುತ್ತಾರೆ. ಈ ಮೂಲಕ ಎರಡೂ ಧರ್ಮಗಳನ್ನು ಕೂಡ ಸಮಾನವಾಗಿ ಕಾಣುತ್ತಾರೆ ಎನ್ನಲಾಗುತ್ತಿದೆ.

ಅಂಜುಮ್ ಖಾನ್ ಪತಿ ಶಿವಂ ದುಬೆ ಟಿ20 ವಿಶ್ವಕಪ್‌ನಲ್ಲಿ ಬ್ಯುಸಿಯಾಗಿರುವ ಕಾರಣ ಅವರು ಈ ಸಮಯದಲ್ಲಿ ಉಪವಾಸ ಮಾಡುವುದು ದೈಹಿಕವಾಗಿ ಸವಾಲಿನ ವಿಷಯವಾಗಿರುತ್ತದೆ. ತರಬೇತಿ, ಪಂದ್ಯದ ಒತ್ತಡ ಮತ್ತು ಫಿಟ್ನೆಸ್‌ ಕಾಪಾಡಿಕೊಳ್ಳುವ ಅಗತ್ಯ ಇರುವುದರಿಂದ ಇದು ಸುಲಭದ ವಿಚಾರವಲ್ಲ. ಅವರು ರಮಜಾನ್ ತಿಂಗಳಲ್ಲಿ ರೋಜಾ ಇರುತ್ತಾರೆಯೇ ಎಂಬುದರ ಬಗ್ಗೆ ಎಂದಿಗೂ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

ಆದರೆ, ಅವರು ತಮ್ಮ ಪತ್ನಿ ಅಂಜುಮ್ ಖಾನ್ ಅವರ ಧರ್ಮ ಹಾಗೂ ಸಂಪ್ರದಾಯಗಳಿಗೆ ಸಂಪೂರ್ಣ ಗೌರವ ಕೊಡುತ್ತಾರೆ ಎಂಬುದು ಅವರು ಸಾಮಾಜಿಕ ಜಾಲತಾಣ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪೋಸ್ಟ್‌ಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಪರಸ್ಪರದ ನಂಬಿಕೆಗಳಿಗೆ ಮಾನ್ಯತೆ ನೀಡುವ ಈ ಮನೋಭಾವವೇ ಅವರ ವೈಯಕ್ತಿಕ ಬದುಕಿನ ವಿಶೇಷತೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+