Get Updates
Get notified of breaking news, exclusive insights, and must-see stories!

Sanju Samson Net Worth 2026: ಟೀಂ ಇಂಡಿಯಾ ಸ್ಟಾರ್ ಸಂಜು ಸ್ಯಾಮ್ಸನ್ ಆಸ್ತಿ, ಕಾರುಗಳ ಕಲೆಕ್ಷನ್

Sanju Samson Net Worth 2026: ಟಿ20 ವಿಶ್ವಕಪ್ 2026ರ ಕೊನೆಯ ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಪರ ಸಂಜು ಸ್ಯಾಮ್ಸನ್‌ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ಎಲ್ಲಾ ಕಡೆಯೂ ಇವರದ್ದೇ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ. ಅದರಲ್ಲೂ ಇವರ ಆಸ್ತಿ ಮೌಲ್ಯ ಎಷ್ಟು ಎನ್ನುವ ಪ್ರಶ್ನಗಳು ಕೂಡ ಎದ್ದಿವೆ. ಇವೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ವೆಸ್ಟ್‌ ಇಂಡೀಸ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಡಿದ ಬಳಿಕ ಅನೇಕ ಅಭಿಮಾನಿಗಳು ಸ್ಯಾಮ್ಸನ್ ಅವರ ಒಟ್ಟು ಆಸ್ತಿ ಮೌಲ್ಯ, ಬಿಸಿಸಿಐನಿಂದ ಬರುವ ಆದಾಯ, ಕಾರುಗಳ ಸಂಗ್ರಹ ಸೇರಿದಂತೆ ಇತರ ವೈಯಕ್ತಿಕ ಜೀವನದ ವಿವರಗಳ ಬಗ್ಗೆ ಕೇಳುತ್ತಿದ್ದಾರೆ. ಹಾಗಾದ್ರೆ ಸಂಪೂರ್ಣ ವಿವರ ಇಲ್ಲಿದೆ ಕಣ್ಣಾಡಿಸಿ.

Sanju Samson Net Worth 2026 IPL Salary BCCI Earnings Luxury Cars and Assets Revealed Know detail

ಸಂಜು ಸ್ಯಾಮ್ಸನ್ ಆಸ್ತಿ ಮೌಲ್ಯ

ವರದಿಗಳ ಪ್ರಕಾರ, 2026ರಲ್ಲಿ ಸಂಜು ಸ್ಯಾಮ್ಸನ್ ಅವರ ಒಟ್ಟು ಆಸ್ತಿ ಮೌಲ್ಯ 80 ಕೋಟಿಯಿಂದ 86 ಕೋಟಿ ರೂಪಾಯಿಗಳಷ್ಟಿದೆ. ಆಸ್ತಿಗಳ ಮೌಲ್ಯ ಮತ್ತು ಬ್ರ್ಯಾಂಡ್ ಒಪ್ಪಂದಗಳ ಆಧಾರದ ಮೇಲೆ ಇದನ್ನು ಅಂದಾಜಿಸಲಾಗಿದೆ. ಸಂಜು ಸ್ಯಾಮ್ಸನ್ ಬಿಸಿಸಿಐನ ಕೇಂದ್ರ ಒಪ್ಪಂದದ ವ್ಯವಸ್ಥೆಯ ಭಾಗವಾಗಿದ್ದು, ವರದಿಗಳ ಪ್ರಕಾರ ಪಂದ್ಯದ ಶುಲ್ಕವನ್ನು ಹೊರತುಪಡಿಸಿ ವರ್ಷಕ್ಕೆ ಸುಮಾರು 1 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಸಂಜು ಸ್ಯಾಮ್ಸನ್ ಅವರು ಅತಿ ಹೆಚ್ಚು ಪ್ರಚಾರ ಪಡೆಯುವ ಕ್ರಿಕೆಟಿಗರಲ್ಲದಿದ್ದರೂ, ಅವರ ವಿವಾದರಹಿತ ವ್ಯಕ್ತಿತ್ವ ಮತ್ತು ಸರಳತೆಯನ್ನು ಬ್ರಾಂಡ್‌ಗಳು ಅವರನ್ನು ಅರಸಿಬರುತ್ತವೆ. ವಿಶೇಷವಾಗಿ ಕೇರಳ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಇರುವ ಅಪಾರ ಅಭಿಮಾನಿ ಬಳಗವು ಕಂಪನಿಗಳನ್ನು ಅವರತ್ತ ಸೆಳೆಯುವಂತೆ ಮಾಡಿದೆ. ಅವರು ಕೇವಲ ದೊಡ್ಡ ಕಂಪನಿಗಳಲ್ಲದೆ, ತಮ್ಮ ಮೌಲ್ಯಗಳಿಗೆ ಸರಿಹೊಂದುವ ಬ್ರ್ಯಾಂಡ್‌ಗಳ ರಾಯಭಾರಿಯಾಗಲು ಆದ್ಯತೆ ನೀಡಲಾಗುತ್ತದೆ ಎನ್ನುವ ಮಾಹಿತಿಯಿದೆ.

ಸಂಜು ಪ್ರಮುಖ ಆದಾಯದ ಮೂಲ ಐಪಿಎಲ್‌

ಸಂಜು ಸ್ಯಾಮ್ಸನ್ ಅವರ ಆದಾಯದ ಪ್ರಮುಖ ಮೂಲವೆಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್‌. 2012ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಇವರನ್ನು 18 ಲಕ್ಷ ರೂಪಾಯಿಗೆ ಖರೀದಿಸಿತ್ತು, ಆದರೆ ಆ ಸೀಸನ್‌ನಲ್ಲಿ ಇವರು ಪಂದ್ಯ ಆಡಲಿಲ್ಲ. 2013ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಕೇವಲ 10 ಲಕ್ಷ ರೂಪಾಯಿಗೆ ಖರೀದಿ ಮಾಡಿತು. 2014ರ ವೇಳೆಗೆ ಅವರ ಸಂಭಾವನೆ 5 ಕೋಟಿ ರೂಪಾಯಿಗೆ ಏರಿತು. 2021ರ ವೇಳೆಗೆ ಅವರು ಪ್ರತಿ ಸೀಸನ್‌ಗೆ 8 ಕೋಟಿ ರೂಪಾಯಿ ಗಳಿಸುತ್ತಿದ್ದರು.

2022ರಲ್ಲಿ ಅವರ ಸಂಭಾವನೆ 14 ಕೋಟಿ ರೂಪಾಯಿಗೆ ಏರಿತು. ನಂತರದ ದಿನಗಳಲ್ಲಿ ರಾಜಸ್ಥಾನ್ ರಾಯಲ್ಸ್ ಇವರನ್ನು 18 ಕೋಟಿ ರೂಪಾಯಿಗೆ ಉಳಿಸಿಕೊಂಡಿತು. 2026ರ ಐಪಿಎಲ್ ಸೀಸನ್‌ಗಾಗಿ ಅವರನ್ನು ಅದೇ 18 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್‌ ಟ್ರೇಡ್‌ ಮಾಡಿಕೊಂಡಿತು. ಇದು ಅವರ ವೃತ್ತಿಜೀವನದ ಗರಿಷ್ಠ ಸಂಭಾವನೆಯಾಗಿದ್ದು, ಲೀಗ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಲ್ಲಿ ಇವರೂ ಒಬ್ಬರಾಗಿದ್ದಾರೆ.

ಸಂಜು ಬಳಿಯಿರುವ ದುಬಾರಿ ಕಾರುಗಳು, ಬೆಲೆಗಳ ಪಟ್ಟಿ

* ರೇಂಜ್ ರೋವರ್ ಸ್ಪೋರ್ಟ್: ₹1.64- ₹1.84 ಕೋಟಿ
* ಆಡಿ ಎ6: ₹65 ಲಕ್ಷ
* ಲೆಕ್ಸಸ್ ES 300h: ₹62.65ರಿಂದ ₹68.23 ಲಕ್ಷ
* ಬಿಎಂಡಬ್ಲ್ಯೂ 5 ಸೀರೀಸ್: ₹72.9 ಲಕ್ಷ
* ಮರ್ಸಿಡಿಸ್-ಬೆನ್ಜ್ ಸಿ-ಕ್ಲಾಸ್ ₹58.65ರಿಂದ ₹65.60 ಲಕ್ಷ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+