Sanju Samson: ನನ್ನ ಸಾಮರ್ಥ್ಯದ ಬಗ್ಗೆ ಪ್ರೂವ್ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ: ಸಂಜು ಸ್ಯಾಮ್ಸನ್ ಹಿಂಗ್ ಹೇಳಿದ್ಯಾರಿಗೆ?

Sanju Samson: ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದ್ದು, ಇದರ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಪ್ರತಿಕ್ರಿಯಿಸಿ ಟ್ರೋಲಿಗರಿಗೆ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದ ನಂತರ, ಭಾರತೀಯ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ತಮ್ಮ ವಿಮರ್ಶಕರು ಮತ್ತು ಆಟದ ಮೇಲಿನ ತಮ್ಮ ದೃಷ್ಟಿಕೋನದ ಬಗ್ಗೆ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಕೇವಲ 33 ಎಸೆತಗಳಲ್ಲಿ 67 ರನ್ ಬಾರಿಸಿ ಭಾರತದ ಐತಿಹಾಸಿಕ ರನ್ ಚೇಸಿಂಗ್‌ಗೆ ಅಡಿಪಾಯ ಹಾಕಿದ ಅವರು, ಟೀಕೆಗಳಿಗೆ ಉತ್ತರಿಸುವುದಕ್ಕಿಂತ ತಮ್ಮ ಸ್ವಂತ ಪ್ರಕ್ರಿಯೆಗೆ ಬದ್ಧವಾಗಿರುವುದು ಮುಖ್ಯ ಎಂದು ಹೇಳಿದ್ದಾರೆ.

Sanju Samson Hits Back at Critics After India s Record T20I Chase Against New Zealand on October 22

ಟೀಕಾಕಾರರಿಗೆ ಸಂಜು ಸ್ಯಾಮ್ಸನ್ ತಿರುಗೇಟು

ಪಂದ್ಯ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜು, 'ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಹೊರಗಿನ ಜನರು ಏನು ಹೇಳುತ್ತಾರೆ ಎಂಬುದರ ಮೇಲೆ ನಾವು ಗಮನ ಹರಿಸಲು ಸಾಧ್ಯವಿಲ್ಲ. ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವುದು ಸುಲಭದ ಮಾತಲ್ಲ. ಇಲ್ಲಿ ಅಪಾರ ಶಬ್ದ ಹಾಗೂ ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯಗಳಿರುತ್ತವೆ. ಆದರೆ ನಾನು ಯಾರೊಬ್ಬರ ಮಾತು ಸುಳ್ಳು ಅಥವಾ ಅವರು ತಪ್ಪು ಎಂದು ನಿರೂಪಿಸುವ ಉದ್ದೇಶದಿಂದ ಕ್ರಿಕೆಟ್ ಆಡುವುದಿಲ್ಲ,' ಎಂದಿದ್ದಾರೆ.

ತಮ್ಮ ಸಿದ್ಧತೆ ಮತ್ತು ಅಭ್ಯಾಸದ ಬಗ್ಗೆ ಅಪಾರ ಗೌರವವಿದೆ. ಹೊರಗಿನ ಅಭಿಪ್ರಾಯಗಳು ತಮ್ಮ ಮಾನಸಿಕ ಸ್ಥಿತಿಯ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳುವುದಾಗಿ ಹಾಗೂ ವಿಷಯಗಳನ್ನು ಸರಳವಾಗಿಟ್ಟುಕೊಳ್ಳಲು ಇಷ್ಟಪಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ತಂಡದ ಆಕ್ರಮಣಕಾರಿ ಆಟಕ್ಕೆ ಬೆಂಬಲ

ನ್ಯೂಜಿಲೆಂಡ್‌ ನೀಡಿದ್ದ 226 ರನ್‌ಗಳ ಬೃಹತ್ ಗುರಿಯನ್ನು 230/6 ರನ್ ಬಾರಿಸುವ ಮೂಲಕ ಭಾರತ ಯಶಸ್ವಿಯಾಗಿ ಚೇಸ್ ಮಾಡಿತು. ಇದು ಟಿ20 ಇತಿಹಾಸದಲ್ಲಿ ಭಾರತ ಸಾಧಿಸಿದ ಗರಿಷ್ಠ ಯಶಸ್ವಿ ರನ್ ಚೇಸ್ ಆಗಿದೆ. ಈ ಕುರಿತು ಮಾತನಾಡಿದ ಸಂಜು ಸ್ಯಾಮ್ಸನ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಾಮರ್ಥ್ಯಕ್ಕೆ ತಕ್ಕಂತೆ ಆಕ್ರಮಣಕಾರಿ ಆಟ

'ನಾವು ಪವರ್‌ಪ್ಲೇ, ಮಧ್ಯಮ ಓವರ್‌ಗಳು ಮತ್ತು ಡೆತ್ ಓವರ್‌ಗಳಲ್ಲಿ ವಿಭಿನ್ನ ತಂತ್ರ ಬಳಸುತ್ತೇವೆ. ಕೆಲವೊಮ್ಮೆ 170 ರನ್ ಚೇಸ್ ಮಾಡುವಾಗಲೂ ಭರ್ಜರಿ ಆರಂಭ ಸಿಕ್ಕರೆ, ಪವರ್‌ಪ್ಲೇನಲ್ಲೇ ಪಂದ್ಯವನ್ನು ನಮ್ಮತ್ತ ತಿರುಗಿಸಿಕೊಳ್ಳಲು ಪ್ರಯತ್ನಿಸುತ್ತೇವೆ. 2024ರ ಟಿ20 ವಿಶ್ವಕಪ್ ಗೆದ್ದಾಗಿನಿಂದಲೂ ನಾವು ಇದೇ ತರಹದ ಆಕ್ರಮಣಕಾರಿ ಕ್ರಿಕೆಟ್ ಆಡುತ್ತಿದ್ದೇವೆ,' ಎಂದು ಹೇಳಿದ್ದಾರೆ. ಅಂತಿಮವಾಗಿ ಫಲಿತಾಂಶಗಳು ಏನೇ ಬಂದರೂ ತಂಡದ ಹಿತಾಸಕ್ತಿಗೆ ಆದ್ಯತೆ ನೀಡಿ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಕ್ರಮಣಕಾರಿ ಕ್ರಿಕೆಟ್ ಆಡುವುದನ್ನು ಮುಂದುವರೆಸುವುದಾಗಿ ಸಂಜು ಸ್ಯಾಮ್ಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರು ಹೇಳೋದೇನು?

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ 33 ಎಸೆತಗಳಲ್ಲಿ 67 ರನ್ ಸಿಡಿಸಿ ತಂಡದ ಐತಿಹಾಸಿಕ ರನ್ ಚೇಸಿಂಗ್‌ಗೆ ಕಾರಣರಾದ ಸಂಜು ಸ್ಯಾಮ್ಸನ್, ಪಂದ್ಯದ ನಂತರ ನೀಡಿದ 'ನಾನು ಯಾರನ್ನೂ ತಪ್ಪು ಎಂದು ನಿರೂಪಿಸಲು ಕ್ರಿಕೆಟ್ ಆಡುವುದಿಲ್ಲ,' ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದು, ಟ್ರೋಲಿಗರಿಗೆ ತಕ್ಕ ತಿರುಗೇಟು ನೀಡಿದ್ದಾರೆ.

'ಸಂಜು ಸ್ಯಾಮ್ಸನ್ ಎಂದಿಗೂ ವಿವಾದಗಳಿಗೆ ಆಸ್ಪದ ನೀಡಿದವರಲ್ಲ. ಮೈದಾನದ ಹೊರಗೆ ಎಷ್ಟೇ ಟೀಕೆಗಳು ಬಂದರೂ, ರನ್‌ಗಳ ಮೂಲಕವೇ ಉತ್ತರಿಸುವ ಅವರ ಈ ಗುಣವೇ ಅವರ ಹೆಗ್ಗುರುತು. ಟ್ರೋಲ್ ಮಾಡುವವರಿಗೆ ಅವರ ಈ ಮಾತು ಕಪಾಳಮೋಕ್ಷ ಮಾಡಿದಂತಿದೆ,' ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+